ವಿಂಬಲ್ಡನ್ ಸಮಯ ಬದಲಾಗದು
Team Udayavani, Jul 10, 2018, 6:00 AM IST
ಲಂಡನ್: ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಇಂಗ್ಲೆಂಡ್ ತಂಡ ಫೈನಲ್ ಪ್ರವೇಶಿಸಿದರೂ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದ ವೇಳೆಯಲ್ಲಿ ಬದಲಾವಣೆ ಸಂಭವಿಸದು ಎಂಬುದಾಗಿ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಕೂಟದ ಸಂಘಟಕರು ಸೋಮವಾರ ಪುನಃ ಸ್ಪಷ್ಟನೆ ನೀಡಿದ್ದಾರೆ.
ವಿಶ್ವಕಪ್ ಫುಟ್‌ಬಾಲ್ ಫೈನಲ್ ಹಾಗೂ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಮುಂದಿನ ರವಿವಾರ ನಡೆಯಲಿದೆ. ಲಂಡನ್ ಕಾಲಮಾನದ ಪ್ರಕಾರ ವಿಂಬಲ್ಡನ್ ಫೈನಲ್ ಅಪರಾಹ್ನ 2 ಗಂಟೆಗೆ, ವಿಶ್ವಕಪ್ ಫೈನಲ್ ಸಂಜೆ 4 ಗಂಟೆಗೆ ಆರಂಭವಾಗಲಿದೆ. ಎರಡೂ ಪಂದ್ಯಗಳ ನಡುವೆ 2 ಗಂಟೆಗಳ ಅಂತರ ವಿದ್ದರೂ ಫೆಡರರ್- ನಡಾಲ್ ನಡುವೆ ಫೈನಲ್ ನಡೆದರೆ ಅದು ಅಧಿಕ ಅವಧಿ ತೆಗೆದು ಕೊಳ್ಳುವುದರಲ್ಲಿ ಅನು ಮಾನವಿಲ್ಲ. ಆಗ ಎರಡೂ ಪಂದ್ಯಗಳು “ಕ್ಲಾಶ್’ ಆಗುವುದರಿಂದ ಕ್ರೀಡಾ ಪ್ರಿಯರು ಗೊಂದಲಕ್ಕೆ ಸಿಲುಕಲಿದ್ದು, ವಿಂಬಲ್ಡನ್ ಫೈನಲ್ ಪಂದ್ಯವನ್ನು ಮುಂಚಿತವಾಗಿ ಆರಂಭಿಸಲು ಮನವಿ ಮಾಡಲಾಗಿತ್ತು.
“ವಿಂಬಲ್ಡನ್ ಫೈನಲ್ 2 ಗಂಟೆಗೇ ಆರಂಭವಾಗುತ್ತದೆ. ಈ ವರ್ಷವಷ್ಟೇ ಅಲ್ಲ, ಮುಂದಿನ ವರ್ಷವೂ ಇದೇ ಸಮಯಕ್ಕೆ ಮೊದಲ್ಗೊಳ್ಳುತ್ತದೆ. ‘ ಎಂದು ಆಲ್ ಇಂಗ್ಲೆಂಡ್ ಕ್ಲಬ್ ಸಿಇಒ ರಿಚರ್ಡ್ ಲೆವಿಸ್ ಸ್ಪಷ್ಟಪಡಿಸಿದ್ದಾರೆ.