ವಿಂಬಲ್ಡನ್ ಗ್ರ್ಯಾನ್ಸ್ಲಾಮ್: ಕಿರ್ಗಿಯೋಸ್, ಸಿಸಿಪಸ್ ಗೆಲುವು
Team Udayavani, Jul 1, 2022, 6:28 AM IST
ಲಂಡನ್: ವಿಂಬಲ್ಡನ್ ಗ್ರ್ಯಾನ್ಸ್ಲಾಮ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್, ಗ್ರೀಸ್ನ ಸ್ಟೆಫನಸ್ ಸಿಸಿಪಸ್ 3ನೇ ಸುತ್ತಿಗೆ ಮುನ್ನಡೆದಿದ್ದಾರೆ. ಆದರೆ ಬ್ರಿಟನ್ನಿನ ಹಿರಿಯ ಆಟಗಾರ ಆ್ಯಂಡಿ ಮರ್ರೆ ಆಟ ಮುಗಿಸಿದ್ದಾರೆ. ವನಿತಾ ಸಿಂಗಲ್ಸ್ನಲ್ಲಿ ಪೆಟ್ರಾ ಕ್ವಿಟೋವಾ, ಮರಿಯಾ ಸಕ್ಕರಿ, ಆ್ಯಂಜೆಲಿಕ್ ಕೆರ್ಬರ್ ದ್ವಿತೀಯ ಸುತ್ತು ದಾಟಿದ್ದಾರೆ.
ನಿಕ್ ಕಿರ್ಗಿಯೋಸ್ ಸರ್ಬಿಯಾದ ಫಿಲಿಪ್ ಕ್ರಾಜಿನೋವಿಕ್ ಅವರನ್ನು 6-2, 6-3, 6-1 ನೇರ ಸೆಟ್ಗಳಲ್ಲಿ ಮಣಿಸಿದರು. ಸಿಸಿಪಸ್ ಆಸ್ಟ್ರೇಲಿಯದ ಜೋರ್ಡನ್ ಥಾಮ್ಸನ್ ವಿರುದ್ಧ 6-2, 6-3, 7-5ರಿಂದ ಗೆದ್ದು ಬಂದರು. ಆ್ಯಂಡಿ ಮರ್ರೆ ಅವರನ್ನು ಅಮೆರಿಕದ ಜಾನ್ ಇಸ್ನರ್ ಭಾರೀ ಹೋರಾಟದ ಬಳಿಕ 6-4, 7-6 (7-4), 6-3 (3-7), 6-4 ಅಂತರದಿಂದ ಹಿಮ್ಮೆಟ್ಟಿಸಿದರು. ಅಮೆರಿಕದ ಟೇಲರ್ ಫ್ರಿಟ್ಸ್, ಫ್ರಾನ್ಸ್ನ ರಿಚರ್ಡ್ ಗಾಸ್ಕ್ವೆಟ್ ಕೂಡ 3ನೇ ಸುತ್ತು ಪ್ರವೇಶಿಸಿದ್ದಾರೆ.
ವನಿತೆಯರ ಸಿಂಗಲ್ಸ್ನಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ರೊಮೇನಿಯಾದ ಅನಾ ಬೋಗ್ಡಾನಾ ಅವರನ್ನು 6-1, 7-6 (7-5)ರಿಂದ ಸೋಲಿಸಿದರು.
ಸಾನಿಯಾಗೆ ಸೋಲು :
ವನಿತಾ ಡಬಲ್ಸ್ನಲ್ಲಿ ಸಾನಿಯಾ ಮಿರ್ಜಾ-ಜೆಕ್ ಗಣರಾಜ್ಯದ ರೂಸಿ ರಡೆಕಾ ಜೋಡಿ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದೆ. ಇವರನ್ನು ಮಾಗ್ಡಲೆನಾ ಫ್ರೆಕ್ (ಪೋಲೆಂಡ್)-ಬೀಟ್ರೋಝ್ ಹದ್ದಾದ್ (ಬ್ರಝಿಲ್) 4-6, 6-4, 6-2ರಿಂದ ಮಣಿಸಿದರು.
ಅಗುಟ್ಗೆ ಕೊರೊನಾ :
ಸ್ಪೇನಿನ ರಾಬರ್ಟೊ ಬೌಟಿಸ್ಟ ಅಗುಟ್ ಕೊರೊನಾ ಪಾಸಿಟಿವ್ ಬಂದುದರಿಂದ ವಿಂಬಲ್ಡನ್ನಿಂದ ಹಿಂದೆ ಸರಿದರು. ಕೋವಿಡ್ ಕಾರಣಕ್ಕಾಗಿ ವಿಂಬಲ್ಡನ್ನಿಂದ ಹೊರಗುಳಿದವರ ಸಂಖ್ಯೆ 3ಕ್ಕೆ ಏರಿತು. ಮರಿನ್ ಸಿಲಿಕ್, ಮ್ಯಾಟಿಯೊ ಬರೆಟಿನಿ ಉಳಿದಿಬ್ಬರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.