Wimbledon Women’s Singles Final: ಕ್ರೆಜಿಕೋವಾ ಚಾಂಪಿಯನ್
Team Udayavani, Jul 13, 2024, 11:02 PM IST
ಲಂಡನ್: ಜೆಕ್ ಗಣ ರಾಜ್ಯದ ಬಾರ್ಬೋರಾ ಕ್ರೆಜಿನೋವಾ ಅವರು ಸೆಂಟರ್ ಕೋರ್ಟ್‌ನಲ್ಲಿ ನಡೆದ ವಿಂಬಲ್ಡನ್ ಕೂಟದ ವನಿತೆಯರ ಫೈನಲ್‌ನಲ್ಲಿ ಅಭಿಮಾನಿಗಳ ಫೇವರಿಟ್ ಇಟಲಿಯ ಜಾಸ್ಮಿನ್ ಪೌಲಿನಿ ಅವರನ್ನು ಸೋಲಿಸಿ ಸೋಲಿಸಿ ಪ್ರಶಸ್ತಿ ಗೆದ್ದರಲ್ಲದೇ ವಿಂಬಲ್ಡನ್ ರಾಣಿಯಾಗಿ ಸಂಭ್ರಮಿಸಿದರು.
ಜೆಕ್‌ನ ನುರಿತ ಡಬಲ್ಸ್ ಆಟಗಾರ್ತಿ ಯಾಗಿದ್ದ ಕ್ರೆಜಿನೋವಾ 6-2, 2-6, 6-4 ಸೆಟ್‌ಗಳಿಂದ ಪೌಲಿನಿ ಅವರನ್ನು ಮಣಿಸಿ ವಿಂಬಲ್ಡನ್‌ನಲ್ಲಿ ಮೊದಲ ಮತ್ತು ಗ್ರ್ಯಾನ್ ಸ್ಲಾಮ್‌ನಲ್ಲಿ ಎರಡನೇ ಪ್ರಶಸ್ತಿ ಗೆದ್ದರು. ಅವರು ಈ ಹಿಂದೆ 2021ರಲ್ಲಿ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಕೂಟದ ಪ್ರಶಸ್ತಿ ಜಯಿಸಿದ್ದರು.
ಅಮೋಘ ರೀತಿಯಲ್ಲಿ ಆಟ ಆರಂಭಿಸಿದ್ದ ಕ್ರೆಜಿಕೋವಾ ಮೊದಲ ಸೆಟ್ ಅನ್ನು ಸುಲಭವಾಗಿ ಗೆದ್ದರು. ಆದರೆ ದ್ವಿತೀಯ ಸೆಟ್‌ನಲ್ಲಿ ಪೌಲಿನಿ ತಿರುಗೇಟು ನೀಡುವಲ್ಲಿ ಯಶ ಸ್ವಿಯಾದರು. ನಿರ್ಣಾಯಕ ಸೆಟ್‌ನ ಆರಂಭದಲ್ಲಿ ಇಬ್ಬರೂ ಆಟಗಾರ್ತಿ ಯರು ಸಮಬಲದ ಹೋರಾಟ ನೀಡಿದ್ದರು. ಆದರೆ ಅಂತಿಮವಾಗಿ ಕ್ರೆಜಿನೋವಾ 6-4 ಅಂತರದಿಂದ ಸೆಟ್ ಮತ್ತು ಪಂದ್ಯ ಗೆದ್ದು ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಟ್ಟರು.
ಡಬಲ್ಸ್ ಆಟಕ್ಕೆ ಖ್ಯಾತರಾಗಿದ್ದ ಕ್ರೆಜಿನೋವಾ ಇಷ್ಟರವರೆಗೆ ಎರಡು ಬಾರಿ ವಿಂಬಲ್ಡನ್ ಸಹಿತ 10 ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ಅವರು ಪ್ರಶಸ್ತಿ ಗೆದ್ದ ಜೆಕ್‌ನ ನೂತನ ಆಟಗಾರ್ತಿ ಆಗಿದ್ದಾರೆ. ಕಳೆದ ವರ್ಷ ಮಾರ್ಕೆಟಾ ವೊಂಡ್ರೊಸೋವಾ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದರು.
ವಿಜೇತರಿಗೆ28.64 ಕೋಟಿ.ರೂ.
ರನ್ನರ್ ಅಪ್‌ಗೆ 18.03 ಕೋಟಿ.ರೂ.
ಇದು ನನ್ನ ಜೀವನದಲ್ಲೇ ಮರೆಯ ಲಾಗದ ದಿನ. ಇಂದು ನಡೆದದ್ದು ನನ್ನ ಟೆನಿಸ್ ವೃತ್ತಿ ಜೀವನದಲ್ಲೇ ಪ್ರಮುಖ ಘಟನೆ. ಪೌಲಿನಿಗೂ ಅಭಿನಂದನೆ.–ಕ್ರೆಜಿಕೋವಾ
ಬಾಲ್ಯದಲ್ಲಿ ನಾನು ಟಿವಿಯಲ್ಲಿ ವಿಂಬಲ್ಡನ್ ನೋಡುತ್ತಿದ್ದೆ. ಈಗ ಫೈನಲ್ ತಲುಪಿದ್ದೇನೆ. ಸೋತರೂ ನಗುತ್ತಲೇ ಇರುತ್ತೇನೆ. ಇದು ನನಗೂ ಮರೆಯಲಾಗದ ದಿನ.–ಜಾಸ್ಮಿನ್ ಪೌಲಿನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.