Wimbledon-2024: ಚಾಂಪಿಯನ್ ವೊಂಡ್ರೂಸೋವಾಗೆ ಆಘಾತ
Team Udayavani, Jul 2, 2024, 11:38 PM IST
ಲಂಡನ್: ವಿಂಬಲ್ಡನ್ ಕೂಟದ ದ್ವಿತೀಯ ದಿನ ಆಘಾತಕಾರಿ ಫಲಿತಾಂಶವೊಂದು ದಾಖಲಾಗಿದೆ. ವನಿತಾ ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್ ಮಾರ್ಕೆಟಾ ವೊಂಡ್ರೂಸೋವಾ ಮೊದಲ ಸುತ್ತಿನಲ್ಲೇ ಸೋಲುಂಡು ಕೂಟದಿಂದ ನಿರ್ಗಮಿಸಿದ್ದಾರೆ.
ಜೆಕ್ ಆಟಗಾರ್ತಿ ವೊಂಡ್ರೂಸೋವಾ ಅವರನ್ನು ಸ್ಪೇನ್‌ನ ಜೆಸ್ಸಿಕಾ ಬೌಝಾಸ್ ಮನೀರೊ 6-4, 6-2 ನೇರ ಸೆಟ್‌ಗಳಲ್ಲಿ ಹಿಮ್ಮೆಟ್ಟಿಸಿದರು.
30 ವರ್ಷಗಳ ಬಳಿಕ ವನಿತಾ ಹಾಲಿ ಚಾಂಪಿಯನ್ ಒಬ್ಬರು ವಿಂಬಲ್ಡನ್ ಪ್ರಥಮ ಸುತ್ತಿನಲ್ಲೇ ಸೋತ ಮೊದಲ ನಿದರ್ಶನ ಇದಾಗಿದೆ. ಅಂದು ಈ ಸಂಕಟಕ್ಕೆ ಸಿಲುಕಿದವರು ಸ್ಟೆಫಿ ಗ್ರಾಫ್.
2022ರ ಚಾಂಪಿಯನ್ ಎಲೆನಾ ರಿಬಾಕಿನಾ ರೊಮೇನಿಯಾದ ಎಲೆನಾ ಗ್ಯಾಬ್ರಿಯೇಲಾ ರುಸ್ ಅವರನ್ನು 6-3, 6-1ರಿಂದ ಮಣಿಸಿ ದ್ವಿತೀಯ ಸುತ್ತಿಗೆ ಏರಿದರು.
ಜೊಕೋ ವಿಜಯ
ಪುರುಷರ ಸಿಂಗಲ್ಸ್‌ನಲ್ಲಿ ನೊವಾಕ್ ಜೊಕೋವಿಕ್, ಅಲೆಕ್ಸ್ ಡಿ ಮಿನೌರ್, ಅಲೆಕ್ಸಾಂಡರ್ ಜ್ವೆರೇವ್, ಹ್ಯೂಬರ್ಟ್ ಹರ್ಕಾಝ್, ಲೊರೆಂಜೊ ಮುಸೆಟ್ಟಿ ಗೆಲುವು ಸಾಧಿಸಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.
ಡಬಲ್ಸ್ ನಲ್ಲಷ್ಟೇ ಮರ್ರೆ ಆಟ
ಕೊನೆಯ ಸಲ ವಿಂಬಲ್ಡನ್‌ನಲ್ಲಿ ಕಣಕ್ಕಿಳಿಯಲಿರುವ ತವರಿನ ಆ್ಯಂಡಿ ಮರ್ರೆ ಸಿಂಗಲ್ಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಕೇವಲ ಡಬಲ್ಸ್‌ನಲ್ಲಿ ಆಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
37 ವರ್ಷದ ಆ್ಯಂಡಿ ಮರ್ರೆ 2 ಸಲ ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದಾರೆ. 2013ರಲ್ಲಿ ಮೊದಲ ಸಲ ಗೆದ್ದಾಗ, ಬ್ರಿಟನ್‌ನ 77 ವರ್ಷಗಳ ಪ್ರಶಸ್ತಿ ಬರಗಾಲ ನೀಗಿಸಿದ್ದರು. ಅನಂತರ 2016ರಲ್ಲಿ ಚಾಂಪಿಯನ್ ಆದರು. ಒಲಿಂಪಿಕ್ಸ್‌ನಲ್ಲಿ 2 ಚಿನ್ನದ ಪದಕ ಗೆದ್ದ ಏಕೈಕ ಟೆನಿಸಿಗನೆಂಬುದು ಮರ್ರೆ ಪಾಲಿನ ಹಿರಿಮೆ. 2012ರ ಲಂಡನ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಈ ಸಾಧನೆಗೈದಿದ್ದರು. ಆ್ಯಂಡಿ ಮರ್ರೆ ಕಳೆದ ಫ್ರೆಂಚ್ ಓಪನ್ ಸಿಂಗಲ್ಸ್‌ನಲ್ಲಿ ಆಡಿದ್ದರು. ಆದರೆ ಅಲ್ಲಿ ಮೊದಲ ಸುತ್ತಿನ ಆಘಾತ ಎದುರಾಗಿತ್ತು. ತವರಿನ ವಿಂಬಲ್ಡನ್ ಟೂರ್ನಿ ತನ್ನ ವಿದಾಯಕ್ಕೆ ಅತ್ಯಂತ ಸೂಕ್ತ ಎಂಬುದಾಗಿ ಮರ್ರೆ ಹೇಳಿದ್ದಾರೆ.
ಒಸಾಕಾ: 6 ವರ್ಷಗಳಲ್ಲಿ ಮೊದಲ ಜಯ
ಜಪಾನ್‌ನ ನವೋಮಿ ಒಸಾಕಾ ಮೊದಲ ಸುತ್ತಿನ ಪಂದ್ಯ ದಲ್ಲಿ ಡಿಯಾನೆ ಪ್ಯಾರ್ರಿ ವಿರುದ್ಧ 6-1, 1-6, 6-4 ಅಂತರದ ಜಯ ಸಾಧಿಸಿದರು. ಇದು 6 ವರ್ಷಗಳಲ್ಲಿ ಒಸಾಕಾಗೆ ಒಲಿದ ಮೊದಲ ವಿಂಬಲ್ಡನ್ ಗೆಲುವು.
2019ರಲ್ಲಿ ಮೊದಲ ಸುತ್ತಿನ ಸೋಲನುಭವಿಸಿದ ಬಳಿಕ ಅವರು ವಿಂಬಲ್ಡನ್‌ನಲ್ಲಿ ಆಡಿದ್ದು ಇದೇ ಮೊದಲು. ಕಳೆದ ವರ್ಷ ಇದೇ ವೇಳೆ ತಾಯ್ತನದ ಸಂಭ್ರಮದಲ್ಲಿದ್ದರು. ಅವರ ಪುತ್ರಿ “ಶೈ’ಗೆ ಮಂಗಳವಾರ ಹುಟ್ಟುಹಬ್ಬದ ಖುಷಿ.
ಕೊಕೊ ಗಾಫ್ ಗೆಲುವು
ಕಳೆದ ವರ್ಷ ಸೋಫಿಯಾ ಕೆನಿನ್ ವಿರುದ್ಧ ಸೋತು ಮೊದಲ ಸುತ್ತಿನಲ್ಲೇ ವಿಂಬಲ್ಡನ್‌ನಿಂದ ಹೊರಬಿದ್ದ ಅಮೆರಿಕದ ಕೊಕೊ ಗಾಫ್, ಈ ಬಾರಿ ಕ್ಯಾರೋಲಿನ್ ಡೋಲ್‌ಹೈಡ್ ವಿರುದ್ಧ 6-1, 6-2 ಅಂತರದ ಜಯ ಸಾಧಿಸಿ ದ್ವಿತೀಯ ಸುತ್ತು ತಲುಪಿದರು.
ಎಮ್ಮಾ ರಾಡುಕಾನು 7-6 (0), 6-3 ಅಂತರದಿಂದ ರೆನಾಟಾ ಝರಾಜುವಾ ಅವರನ್ನು ಮಣಿಸಿದರು. ನಂ. 22 ಆಟಗಾರ್ತಿ ಎಕತೆರಿನಾ ಅಲೆಕ್ಸಾಂಡ್ರೋವಾ ಹಿಂದೆ ಸರಿದ ಕಾರಣ ಝರಾಜುವಾ ಆಯ್ಕೆ ಆಗಿದ್ದರು.
ಸುಮಿತ್‌ಗೆ ಮೊದಲ ಸುತ್ತಿನ ಸೋಲು
ಭಾರತದ ಟಾಪ್ ಸಿಂಗಲ್ಸ್ ಆಟಗಾರ ಸುಮಿತ್ ನಾಗಲ್ ವಿಂಬಲ್ಡನ್ ಸಿಂಗಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ಹೊರಬಿದ್ದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 53ನೇ ಸ್ಥಾನದಲ್ಲಿರುವ ಸರ್ಬಿಯಾದ ಮಿಯೋಮಿರ್ ಕೆಮನೋವಿಕ್ ವಿರುದ್ಧದ ಪಂದ್ಯವನ್ನು ಸುಮಿತ್ 2-6, 6-3, 3-6, 4-6ರಿಂದ ಕಳೆದುಕೊಂಡರು. ಇದರೊಂದಿಗೆ ಕೆಮನೋವಿಕ್ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಸುಮಿತ್ ಸೋಲನುಭವಿಸಿದಂತಾಯಿತು. 26 ವರ್ಷದ, 72ನೇ ರ್‍ಯಾಂಕ್ ಆಟಗಾರ ಸುಮಿತ್ ಇದೇ ಮೊದಲ ಬಾರಿಗೆ ವಿಂಬಲ್ಡನ್ ಪ್ರಧಾನ ಸುತ್ತಿನಲ್ಲಿ ಆಡಲಿಳಿದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.