ವಿಂಬಲ್ಡನ್: ರೋಜರ್ ಫೆಡರರ್ 2ನೇ ಸುತ್ತಿಗೆ, ಸ್ಟೀಫನ್ಸ್ ಮನೆಗೆ
Team Udayavani, Jul 3, 2018, 6:00 AM IST
ಲಂಡನ್: ಕಳೆದ ವರ್ಷದ ಯುಎಸ್ ಓಪನ್ ಪ್ರಶಸ್ತಿ ವಿಜೇತ ಆಟಗಾರ್ತಿ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಮೊದಲ ದಿನವೇ ಸೋತು ಹೊರಬೀಳುವುದರೊಂದಿಗೆ 2018ನೇ ಸಾಲಿನ ವಿಂಬಲ್ಡನ್ ಪಂದ್ಯಾವಳಿ ಅಚ್ಚರಿಯ ಫಲಿತಾಂಶದೊಂದಿಗೆ ಮೊದ ಲ್ಗೊಂಡಿದೆ. ಪುರುಷರ ವಿಭಾಗದಲ್ಲಿ ಹಾಲಿ ಚಾಂಪಿಯನ್ ರೋಜರ್ ಫೆಡರರ್ ಗೆಲುವಿನ ಸಂಭ್ರಮ ಆಚರಿಸಿದ್ದಾರೆ.
ಹುಲ್ಲಿನಂಗಳದಲ್ಲಿ ಕಳಪೆ ದಾಖಲೆ ಹೊಂದಿರುವ ಸ್ಟೀಫನ್ಸ್ ಅವರನ್ನು ವಿಶ್ವದ 55ನೇ ರ್‍ಯಾಂಕಿಂಗ್ ಆಟಗಾರ್ತಿ ಕ್ರೊವೇಶಿಯದ ಡೋನಾ ವೆಕಿಕ್ 6-1, 6-3 ನೇರ ಸೆಟ್‌ಗಳಿಂದ ಮಣಿಸಿದರು. ಈವರೆಗೆ 6 ವಿಂಬಲ್ಡನ್ ಕೂಟಗಳಲ್ಲಿ ಪಾಲ್ಗೊಂಡಿರುವ 25ರ ಹರೆಯದ ಸ್ಟೀಫನ್ಸ್ ಒಮ್ಮೆಯಷ್ಟೇ 3ನೇ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದರು. ಕಳೆದ ವರ್ಷವೂ ಇಲ್ಲಿ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದರು. ಮೊನ್ನೆಯ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ರನ್ನರ್ ಅಪ್‌ಗೆ ಸಮಾಧಾನಪಟ್ಟಿದ್ದರು.
ದ್ವಿತೀಯ ಶ್ರೇಯಾಂಕದ ಕ್ಯಾರೋಲಿನ್ ವೋಜ್ನಿಯಾಕಿ ಸುಲಭದಲ್ಲಿ ಮೊದಲ ಸುತ್ತು ದಾಟಿದರು. ಅವರು 6-0, 6-3 ಅಂತರದಿಂದ ವರ್ವರಾ ಲೆಪೆcಂಕೊಗೆ ಸೋಲುಣಿಸಿದರು.
ಮರಿನ್ ಸಿಲಿಕ್ ಗೆಲುವು
ಕಳೆದ ವರ್ಷ ಫೈನಲ್‌ಗೆ ಲಗ್ಗೆ ಇರಿಸಿ ಫೆಡರರ್ ವಿರುದ್ಧ ಎಡವಿದ್ದ ಕ್ರೊವೇಶಿಯದ ಮರಿನ್ ಸಿಲಿಕ್ ಗೆಲುವಿನ ಆರಂಭ ಕಂಡುಕೊಂಡಿದ್ದಾರೆ. ಮೊದಲ ಸುತ್ತಿನಲ್ಲಿ ಜಪಾನಿನ ಯೊಶಿಹಿಟೊ ನಿಶಿಯೋಕ ಅವರನ್ನು 6-1, 6-4, 6-4ರಿಂದ ಮಣಿಸಿ 2ನೇ ಸುತ್ತು ಪ್ರವೇಶಿಸಿದರು. ಆದರೆ ಹಾಲೆ ಚಾಂಪಿಯನ್ ಬೋರ್ನ ಕೊರಿಕ್ ಆಟ ಮೊದಲ ಸುತ್ತಿನಲ್ಲೇ ಕೊನೆಗೊಂಡಿದೆ. ಅವರನ್ನು ಡ್ಯಾನಿಲ್ ಮೆಡ್ವಡೇವ್ 7-6 (6), 6-2, 6-2 ಅಂತರದಿಂದ ಹಿಮ್ಮೆಟ್ಟಿಸಿದರು.
ಫೆಡರರ್ ಮುನ್ನಡೆ
9ನೇ ವಿಂಬಲ್ಡನ್ ಪ್ರಶಸ್ತಿ ಮೇಲೆ ಕಣ್ಣಿರಿಸಿರುವ ಸ್ವಿಸ್ ತಾರೆ ರೋಜರ್ ಫೆಡರರ್ ಮೊದಲ ಸುತ್ತನ್ನು ಸುಲಭದಲ್ಲಿ ದಾಟಿದ್ದಾರೆ. ಸರ್ಬಿಯಾದ ದುಸಾನ್ ಲಾಜೋವಿಕ್ ವಿರುದ್ಧ ಅವರು 6-1, 6-3, 6-4 ಅಂತರದ ಜಯ ಒಲಿಸಿಕೊಂಡರು. ಇದು ಫೆಡರರ್ ಆಡುತ್ತಿರುವ ಸತತ 20ನೇ ವಿಂಬಲ್ಡನ್ ಪಂದ್ಯಾವಳಿ ಎಂಬುದೊಂದು ಹೆಗ್ಗಳಿಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.