ವಿಂಬಲ್ಡನ್ ಟೆನಿಸ್: ಮರ್ರೆ,ವೀನಸ್ ದ್ವಿತೀಯ ಸುತ್ತಿಗೆ
Team Udayavani, Jul 4, 2017, 3:50 AM IST
ಲಂಡನ್: ಹಾಲಿ ಚಾಂಪಿಯನ್ ಬ್ರಿಟನ್‌ನ ಆ್ಯಂಡಿ ಮರ್ರೆ, ಅಮೆರಿಕದ ವೀನಸ್ ವಿಲಿಯಮ್ಸ್ ಅವರು ವಿಂಬಲ್ಡನ್ ಟೆನಿಸ್ ಕೂಟದ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ.
ಅಗ್ರ ಶ್ರೇಯಾಂಕದ ಮತ್ತು ವಿಶ್ವದ ನಂಬರ್ ವನ್ ಮರ್ರೆ ಅವರು ಕಝಾಕ್‌ನ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು 6-1, 6-4, 6-2 ಸೆಟ್‌ಗಳಿಂದ ಕೆಡಹಿದರು. ಈ ಪಂದ್ಯದ ನಡುವೆ ಮಳೆಯಿಂದಾಗಿ ಕೆಲಹೊತ್ತು ಆಟ ಸ್ಥಗಿತಗೊಂಡಿತ್ತು. ಮರ್ರೆ ದ್ವಿತೀಯ ಸುತ್ತಿನಲ್ಲಿ ಡಾಸ್ಟಿನ್ ಬ್ರೌನ್ ಅವರನ್ನು ಎದುರಿಸಲಿದ್ದಾರೆ. ಬ್ರೌನ್ ಇನ್ನೊಂದು ಪಂದ್ಯದಲ್ಲಿ ಪೋರ್ಚುಗಲ್‌ನ ಜೊವೊ ಸೌಸ ಅವರನ್ನು 3-6, 7-6 (7-5, 6-4, 6-4 ಸೆಟ್‌ಗಳಿಂದ ಸೋಲಿಸಿದ್ದರು.
ವನಿತೆಯರ ಸಿಂಗಲ್ಸ್‌ನಲ್ಲಿ ವೀನಸ್ ವಿಲಿಯಮ್ಸ್ ಅವರು ಎಲಿಸ್ ಮಾರ್ಟೆನ್ಸ್ ಅವರನ್ನು 7-6 (9-7), 6-4 ಸೆಟ್‌ಗಳಿಂದ ಸೋಲಿಸಿ ದ್ವಿತೀಯ ಸುತ್ತಿಗೇರಿದರು. ಎರಡನೇ ಶ್ರೇಯಾಂಕದ ಸಿಮೋನಾ ಹಾಲೆಪ್ ಅವರು ನ್ಯೂಜಿಲ್ಯಾಂಡಿನ ಮರಿನಾ ಎರಕೋವಿಕ್ ಅವರನ್ನು 6-4, 6-1 ಸೆಟ್‌ಗಳಿಂದ ಪರಾಭವಗೊಳಿಸಿ ಮುನ್ನಡೆದರು. ಉಕ್ರೈನಿನ ನಾಲ್ಕನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಇನ್ನೊಂದು ಪಂದ್ಯದಲ್ಲಿ ಆ್ಯಶ್ಲೇಗ್ ಬಾರ್ಟಿ ಅವರ ವಿರುದ್ಧ 7-5, 7-6 (10-8) ಸೆಟ್‌ಗಳಿಂದ ಗೆದ್ದು ಬಂದರು.
ಪುರುಷರ ಇನ್ನೊಂದು ಪಂದ್ಯದಲ್ಲಿ ಜೋ ವಿಲ್ಫೆಡ್ ಸೋಂಗ ಅವರು ಬ್ರಿಟನ್‌ನ ಕ್ಯಾಮರೂನ್ ನೂರಿ ಅವರನ್ನು 6-3, 6-2, 6-2 ನೇರ ಸೆಟ್‌ಗಳಲ್ಲಿ ಉರುಳಿಸಿ ದ್ವಿತೀಯ ಸುತ್ತಿಗೇರಿದರು. ಜಪಾನಿನ ಕೆಯಿ ನಿಶಿಕೋರಿ ಇಟಲಿಯ ಮಾರ್ಕೊ ಸೆಚಿನಾಟೊ ಅವರನ್ನು 6-2, 6-2, 6-0 ಸೆಟ್‌ಗಳಿಂದ ಸೋಲಿಸಿದರು. ಸೆಚಿನಾಟೊ ಸೀನಿಯರ್ ಮಟ್ಟದಲ್ಲಿ ಹುಲ್ಲುಹಾಸಿನ ಅಂಗಣದಲ್ಲಿ ಆಡಿದ ಮೊದಲ ಪಂದ್ಯ ಇದಾಗಿದೆ.
ಗಾಯದ ಸಮಸ್ಯೆಯಿಂದಾಗಿ ನಿಕ್ ಕಿರ್ಗಿಯೋಸ್ ಅವರು ಮೊದಲ ಸುತ್ತಿನ ಪಂದ್ಯದ ನಡುವೆ ಹೊರನಡೆದರು. ಅವರ ಎದುರಾಳಿ ಪಿಯರ್ ಹ್ಯೂಗ್ಸ್ ಹೆರ್ಬೆಟ್ 6-3, 6-4 ಸೆಟ್‌ಗಳಿಂದ ಮುನ್ನಡೆಯಲ್ಲಿರುವಾಗ ಕಿರ್ಗಿಯೋಸ್ ಪಂದ್ಯ ತ್ಯಜಿಸುವ ನಿರ್ಧಾರ ಪ್ರಕಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.