Wimbledon-2024: ರಿಬಾಕಿನಾ-ಕ್ರೆಜಿಕೋವಾ ಸೆಮಿ ಸೆಣಸಾಟ
Team Udayavani, Jul 11, 2024, 1:55 AM IST
ಲಂಡನ್: ಕಜಾಕ್ಸ್ಥಾನದ ಎಲೆನಾ ರಿಬಾಕಿನಾ ಮತ್ತು ಜೆಕ್ ಗಣರಾಜ್ಯದ ಕ್ರೆಜಿಕೋವಾ ವಿಂಬಲ್ಡನ್ ಸೆಮಿಫೈನಲ್ನಲ್ಲಿ ಎದುರಾಗಲಿದ್ದಾರೆ.
ಬುಧವಾರ ನಡೆದ ವನಿತೆಯರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಲೆನಾ ರಿಬಾಕಿನಾ 6-3, 6-2 ಅಂತರದಿಂದ ಉಕ್ರೇನಿನ ಎಲಿನಾ ಸ್ವಿಟೋಲಿನಾ ಅವ ರಿಗೆ ಸೋಲುಣಿಸಿದರು.
ಇನ್ನೊಂದು ಮುಖಾಮುಖೀಯಲ್ಲಿ ಕ್ರೆಜಿಕೋವಾ 6-4, 7-6 (7-4)ರಿಂದ ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಅವರಿಗೆ ಆಘಾತವಿಕ್ಕಿದರು. ಇದು ಕ್ರೆಜಿಕೋವಾ ಕಾಣುತ್ತಿರುವ ಮೊದಲ ವಿಂಬಲ್ಡನ್ ಸೆಮಿಫೈನಲ್ ಆಗಿದೆ.
ಜೊಕೋವಿಕ್ಗೆ ವಾಕ್ಓವರ್
ಫೇವರಿಟ್ ಆಟಗಾರ ನೊವಾಕ್ ಜೊಕೋವಿಕ್ ಕ್ವಾರ್ಟರ್ ಫೈನಲ್ ಆಡದೆಯೇ ಸೆಮಿಫೈನಲ್ ಪ್ರವೇಶಿ ಸುವ ಅದೃಷ್ಟ ಸಂಪಾದಿಸಿದರು. ಆಸ್ಟ್ರೇ ಲಿಯದ ಎದುರಾಳಿ ಅಲೆಕ್ಸ್ ಡಿ ಮಿನೌರ್ ಗಾಯಾಳಾದ ಕಾರಣ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿಳಿಯಲಿಲ್ಲ.
ಆರ್ಥರ್ ಫಿಲ್ಸ್ ಎದುರಿನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಡಿ ಮಿನೌರ್ ಸೊಂಟದ ನೋವಿಗೆ ಒಳಗಾಗಿದ್ದರು. ಇದು ಗುಣಮುಖ ವಾಗದ ಕಾರಣ ಕ್ವಾರ್ಟರ್ ಫೈನಲ್ ಪಂದ್ಯವನ್ನು ತ್ಯಜಿಸುವುದು ಅನಿವಾರ್ಯ ವಾಯಿತು.
ಮೆಡ್ವೆಡೇವ್-ಅಲ್ಕರಾಜ್ ಸೆಮಿಫೈನಲ್
ನಂ.1 ಆಟಗಾರ ಜಾನಿಕ್ ಸಿನ್ನರ್ ಅವರನ್ನು 5 ಸೆಟ್ಗಳ ಮ್ಯಾರಥಾನ್ ಹೋರಾಟದಲ್ಲಿ ಮಣಿಸಿದ ಡ್ಯಾನಿಲ್ ಮೆಡ್ವೆಡೇವ್ಗೆ ಸೆಮಿಫೈನಲ್ನಲ್ಲಿ ಕಾರ್ಲೋಸ್ ಅಲ್ಕರಾಜ್ ಎದುರಾಗ ಲಿದ್ದಾರೆ. ಕಳೆದ ರಾತ್ರಿಯ ಕ್ವಾರ್ಟರ್ ಫೈನಲ್ನಲ್ಲಿ ಅಲ್ಕರಾಜ್ ಅಮೆರಿಕದ ಟಾಮಿ ಪೌಲ್ ಆಟಕ್ಕೆ 5-7, 6-4, 6-2, 6-2 ಅಂತರದಿಂದ ತೆರೆ ಎಳೆದರು.
ಪೌಲಿನಿ-ವೆಕಿಕ್ ಮುಖಾಮುಖಿ
ವನಿತೆಯರ ಸೆಮಿಫೈನಲ್ನಲ್ಲಿ ಇಟಲಿಯ ಜಾಸ್ಮಿನ್ ಪೌಲಿನಿ ಹಾಗೂ ಡೋನಾ ವೆಕಿಕ್ ಪರಸ್ಪರ ಎದು ರಾಗಲಿದ್ದಾರೆ. 2ನೇ ಕ್ವಾರ್ಟರ್ ಫೈನಲ್ ನಲ್ಲಿ ಜಾಸ್ಮಿನ್ ಪೌಲಿನಿ ಅಮೆರಿಕದ ಎಮ್ಮಾ ನವಾರೊ ವಿರುದ್ಧ 6-2, 6-1 ಅಂತರದ ಸುಲಭ ಜಯ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.