ವಿಂಡೀಸ್ ಸರಣಿ: ಪಂತ್‌ಗೆ ಉತ್ತಮ ಅವಕಾಶ: ಕೊಹ್ಲಿ
Team Udayavani, Aug 4, 2019, 5:54 AM IST
ಲಾಡರ್‌ಹಿಲ್: ಭಾರತ ಮತ್ತು ವೆಸ್ಟ್‌ಇಂಡೀಸ್ ಪ್ರವಾಸದ ವೇಳೆ ಮಹೇಂದ್ರ ಸಿಂಗ್ ಧೋನಿ ಅವರ ಅನುಪಸ್ಥಿತಿಯನ್ನು ಉದಯೋನ್ಮುಖ ಕ್ರಿಕೆಟಿಗ ರಿಷಬ್ ಪಂತ್ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡಿದ ಭಾರತ ತಂಡದಲ್ಲಿ ಧೋನಿ ಅವರನ್ನು ಕೈಬಿಡಲಾಗಿದೆ. ಧೋನಿ ಬದಲಿಗೆ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಭವಿಷ್ಯದ ದೃಷ್ಟಿಯಿಂದ ಪಂತ್ ಅವರು ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ಅವರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಇದೊಂದು ಉತ್ತಮ ಅವಕಾಶ ಎಂದು ಕೊಹ್ಲಿ ತಿಳಿಸಿದ್ದಾರೆ.
ಭವಿಷ್ಯದಲ್ಲಿ ವಿಕೆಟ್ ಕೀಪಿಂಗ್ ಸ್ಥಾನವನ್ನು ತುಂಬಲು ಪಂತ್ ಅವರಿಗೆ ಇದೊಂದು ಸುವರ್ಣಾವಕಾಶ. ಈ ಅವಕಾಶವನ್ನು ಯಾವ ರೀತಿ ಬಳಸಿ ಕೊಳ್ಳಬೇಕು ಎನ್ನುವುದು ಅವರಿಗೆ ತಿಳಿದಿದೆ ಎಂದು ಪಂತ್ ಬಗ್ಗೆ ಕೊಹ್ಲಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯುವ ಕಾರಣ ಪಂತ್ ಈ ಪ್ರವಾಸದಲ್ಲಿ ಶ್ರೇಷ್ಠ ನಿರ್ವಹಣೆ ನೀಡುವುದು ಅಗತ್ಯವಾಗಿದೆ. ವಿಕೆಟ್ಕೀಪಿಂಗ್ ಸಹಿತ ಬ್ಯಾಟಿಂಗ್‌ನಲ್ಲೂ ಉಜ್ವಲ ನಿರ್ವಹಣೆ ನೀಡಿದಲ್ಲಿ ಅವರು ಟೀಮ್ ಇಂಡಿಯಾ ತಂಡದಲ್ಲಿ ಕೀಪಿಂಗ್ ಸ್ಥಾನವನ್ನು ಗಟ್ಟಿಮಾಡಲು ಸಾಧ್ಯವಿದೆ.
ಹಾರ್ದಿಕ್ ಪಾಂಡ್ಯ ಕೂಡ ವಿಂಡೀಸ್ ಪ್ರವಾಸದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಯುವ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ನವದೀಪ್ ಸೈನಿ, ರಾಹುಲ್ ಚಹರ್ ಇವರಿಗೆಲ್ಲ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಈ ಪ್ರವಾಸ ಉತ್ತಮ ಅವಕಾಶ ಮತ್ತು ಈ ಆಟಗಾರರು ಇದರ ಲಾಭ ಪಡೆದುಕೊಳ್ಳುವ ನಂಬಿಕೆ ನನಗಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
INDvsENG: ಯುಜಿ ಚಾಹಲ್ ದಾಖಲೆ ಅಳಿಸಿ ಹೊಸ ದಾಖಲೆ ಬರೆದ ಅರ್ಶದೀಪ್ ಸಿಂಗ್
Ranaji Trophy: ಇಂದಿನಿಂದ ಕರ್ನಾಟಕ-ಪಂಜಾಬ್ ರಣಜಿ
Champions Trophy: ಜೆರ್ಸಿಯಲ್ಲಿ ಪಾಕ್ ಹೆಸರು ಹಾಕಲು ಬಿಸಿಸಿಐ ಒಪ್ಪಿಗೆ
Australian Open: ಸಿನ್ನರ್‌ಗೆ ಬೆನ್ ಶೆಲ್ಟನ್ ಸವಾಲು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ