ODI; 2005ರ ಬಳಿಕ ಲಂಕೆಯಲ್ಲಿ ಗೆದ್ದ ವಿಂಡೀಸ್
Team Udayavani, Oct 28, 2024, 12:59 AM IST
ಪಲ್ಲೆಕೆಲೆ: ಆರಂಭಕಾರ ಎವಿನ್ ಲೂಯಿಸ್ ಅವರ ದಿಟ್ಟ ಶತಕ ಸಾಹಸದಿಂದ ಶ್ರೀಲಂಕಾ ವಿರುದ್ಧದ ಮಳೆಪೀಡಿತ 3ನೇ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದ ವೆಸ್ಟ್ ಇಂಡೀಸ್, ತನ್ನ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿತು.
ಭಾರೀ ಮಳೆಯಿಂದಾಗಿ ಶ್ರೀಲಂಕಾದ ಇನ್ನಿಂಗ್ಸ್ 23 ಓವರ್‌ಗಳಿಗೆ ಸೀಮಿತ ಗೊಂಡಿತು. ಗಳಿಸಿದ್ದು 3ಕ್ಕೆ 156 ರನ್. ಬಳಿಕ ವಿಂಡೀಸ್‌ಗೆ ಡಿಎಲ್‌ಎಸ್ ನಿಯಮದಂತೆ 23 ಓವರ್‌ಗಳಲ್ಲಿ 195 ರನ್ ನಿಗದಿಗೊಳಿಸಲಾಯಿತು. ಅದು 22 ಓವರ್‌ಗಳಲ್ಲಿ 2ಕ್ಕೆ 196 ರನ್ ಬಾರಿಸಿ ಗೆದ್ದು ಬಂದಿತು.
ಇದು 2005ರ ಬಳಿಕ ಶ್ರೀಲಂಕಾ ನೆಲದಲ್ಲಿ ವೆಸ್ಟ್ ಇಂಡೀಸ್‌ಗೆ ಒಲಿದ ಮೊದಲ ಏಕದಿನ ಜಯವಾಗಿದೆ. ಈ ನಡುವೆ ಕೆರಿಬಿಯನ್ನರು ದ್ವೀಪ ರಾಷ್ಟ್ರದಲ್ಲಿ ಸತತ 10 ಪಂದ್ಯಗಳನ್ನು ಸೋತಿದ್ದರು. ಇದು ಈ ವರ್ಷ ಏಕದಿನದಲ್ಲಿ ವೆಸ್ಟ್ ಇಂಡೀಸ್ ಸಾಧಿಸಿದ ಮೊದಲ ಗೆಲುವು ಕೂಡ ಆಗಿದೆ.
ಲೂಯಿಸ್ ಅಜೇಯ 102
ವಿಂಡೀಸ್ ಆರಂಭಕಾರ ಎವಿನ್ ಲೂಯಿಸ್ 61 ಎಸೆತಗಳಿಂದ 102 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದು ಅವರ 5ನೇ ಏಕದಿನ ಶತಕ. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿತ್ತು. ಇವರೊಂದಿಗೆ ಶಫೇìನ್ ರುದರ್‌ಫೋರ್ಡ್ 50 ರನ್ ಮಾಡಿ ಅಜೇಯರಾಗಿ ಉಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.