“ಜಿಯೋ ಟಿವಿ’ಯಲ್ಲಿ ವಿಂಟರ್ ಒಲಿಂಪಿಕ್ಸ್
Team Udayavani, Feb 9, 2018, 7:00 AM IST
ಮುಂಬಯಿ: ಜನಪ್ರಿಯ ಟೆಲಿವಿಷನ್ ಆ್ಯಪ್ “ಜಿಯೋ ಟಿವಿ’ ಶುಕ್ರವಾರದಿಂದ ದಕ್ಷಿಣ ಕೊರಿಯಾದಲ್ಲಿ ಪ್ರಾರಂಭಗೊಳ್ಳಲಿರುವ ವಿಂಟರ್ ಒಲಿಂಪಿಕ್ ಗೇಮ್ಸ್ ಸ್ಪರ್ಧೆಗಳನ್ನು ನೇರ ಪ್ರಸಾರ ಮಾಡಲಿದೆ. ಅದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಪ್ರಸಾರ ಹಕ್ಕನ್ನು ಪಡೆದಿದೆ.
ಕ್ರೀಡಾಕೂಟದ ವಿವಿಧ ಸ್ಪರ್ಧೆಗಳನ್ನು ಭಾರತದಲ್ಲಿ ಪ್ರಸಾರಗೊಳಿಸುವ ನೆಲೆಯಲ್ಲಿ ಜಿಯೋ ಟಿವಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯೊಂದಿಗೆ ಕಾರ್ಯ ನಿರ್ವಹಿಸಲಿದೆ. ಹೀಗಾಗಿ ಲಕ್ಷಾಂತರ ವೀಕ್ಷಕರು ಮೊಬೈಲ್ ಮುಖಾಂತರ ವಿಂಟರ್ ಒಲಿಂಪಿಕ್ ಗೇಮ್ಸ್‌ನ ವಿವಿಧ ಸ್ಪರ್ಧೆಗಳನ್ನು ವೀಕ್ಷಿಸಬಹುದು ಎಂದು ಜಿಯೋ ಟಿವಿ ಪ್ರಕಟನೆಯಲ್ಲಿ ತಿಳಿಸಿದೆ.
ದಕ್ಷಿಣ ಕೊರಿಯಾದ ಪೈಯೋಂಗಾcಂಗ್‌ನಲ್ಲಿ ಫೆ. 9ರಿಂದ 25ರ ವರೆಗೆ ವಿಂಟರ್ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಸ್ಕೀಯಿಂಗ್, ಸ್ಕೇಟಿಂಗ್, ಸ್ಕೀ ಜಂಪಿಂಗ್, ಐಸ್ ಹಾಕಿ ಮತ್ತು ಸ್ನೋ ಬೋರ್ಡಿಂಗ್ ಸೇರಿದಂತೆ 15 ವಿಭಾಗಗಳ 102 ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಭಾರತವೂ ಸೇರಿದಂತೆ ಒಟ್ಟು 90 ರಾಷ್ಟ್ರಗಳು ಕೂಟದಲ್ಲಿ ಪಾಲ್ಗೊಳ್ಳಲಿದ್ದು, ಭಾರತದ ಶಿವ ಕೇಶವನ್ ಮತ್ತು ಜಗದೀಶ್ ಪದಕ ನಿರೀಕ್ಷೆ ಮೂಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.