ಕಠಿನ ಶ್ರಮದಿಂದಲೇ ನಂ. 1 ಸಾಧನೆ
Team Udayavani, Oct 10, 2018, 6:00 AM IST
ಉಡುಪಿ: ಹಾರ್ಡ್ ವರ್ಕ್ ಮಾಡುತ್ತೇನೆ. ದಿನವೂ 3 ಗಂಟೆ ಅಭ್ಯಾಸ, ಒಂದು ತಾಸು ಫಿಟ್‌ನೆಸ್ ವರ್ಕ್ ಮಾಡುತ್ತೇನೆ. ತಂದೆ-ತಾಯಿಯ ಪೂರ್ಣ ಬೆಂಬಲ ಇದೆ. ಕಠಿನ ಹಾಗೂ ಸತತ ಶ್ರಮದಿಂದ ಏನಾದರೂ ಸಾಧಿಸಬಹುದೆಂದು ತಿಳಿದಿದ್ದೇನೆ… ಇದು ಅಂಡರ್-15 ಟೇಬಲ್ ಟೆನಿಸ್‌ನ ಬಾಲಕಿಯರ ವಿಭಾಗದಲ್ಲಿ (ಸಬ್ ಜೂನಿಯರ್) ಭಾರತದ ನಂ. 1 ರ್‍ಯಾಂಕಿಂಗ್‌ನಲ್ಲಿರುವ ಕರ್ನಾಟಕದ ಅನರ್ಘ್ಯ ಅವರ ವಿಶ್ವಾಸದ ನುಡಿ.
ಕಲ್ಯಾಣಪುರದ ಮಿಲಾಗ್ರಿಸ್ ವಿದ್ಯಾಸಂಸ್ಥೆಯಲ್ಲಿ ಜರಗಿದ 3 ದಿನಗಳ ರಾಜ್ಯ ಮಟ್ಟದ ಟೇಬಲ್ ಟೆನಿಸ್‌ನಲ್ಲಿ ಪಾಲ್ಗೊಂಡ ಅನರ್ಘ್ಯ ಮಂಜುನಾಥ್ “ಉದಯವಾಣಿ’ ಜತೆ ಮಾತನಾಡಿದರು. ಉಡುಪಿಯಲ್ಲಿಯೂ ಟೇಬಲ್ ಟೆನಿಸ್ ಪ್ರತಿಭೆಗಳಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. “ಬೆಂಗಳೂರಿ ನಲ್ಲಿ ಬೇಕಾದಷ್ಟು ಟೇಬಲ್ ಟೆನಿಸ್ ಕ್ಲಬ್‌ಗಳಿವೆ. ಆದರೆ ಉಡುಪಿಯಲ್ಲಿಲ್ಲ. ಬೆಂಗಳೂರಿನಂತೆ ಉಡುಪಿ ಯಲ್ಲಿಯೂ ಪ್ರೋತ್ಸಾಹ ದೊರೆಯ ಬೇಕು’ ಎಂದರು ಅನರ್ಘ್ಯ.
ಬೆಂಗಳೂರು ಇಂಟರ್‌ನ್ಯಾಶನಲ್ ಅಕಾಡೆಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ 9ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅನರ್ಘ್ಯ ಈ ವರ್ಷದ ಪರೀಕ್ಷೆಗಳಲ್ಲಿ ಯಾವುದನ್ನೂ ಬರೆದಿಲ್ಲವಂತೆ.
ನಾನು ಗೇಮ್ಸ್
ನಲ್ಲೇ ಬ್ಯುಸಿ ಇದ್ದೆ. ಡಿಸೆಂಬರ್‌ನಲ್ಲಿ ಎಲ್ಲ ಸ್ಪರ್ಧೆಗಳು ಮುಗಿಯುತ್ತವೆ. ಅನಂತರ ಒಟ್ಟಿಗೆ ಬರೆಯುತ್ತೇನೆ. 8ನೇ ತರಗತಿಯಲ್ಲಿ ಶೇ. 88 ಅಂಕ ಗಳಿಸಿದ್ದೇನೆ. ತಂದೆ ಮಂಜುನಾಥ್ ಮತ್ತು ತಾಯಿ ಅರ್ಚನಾ ಮಂಜುನಾಥ್ ಅವರ ಪೂರ್ಣ ಬೆಂಬಲ ನನಗಿದೆ. ಮುಂದೆ 17ರ ವಯೋಮಿತಿ ವಿಭಾಗದಲ್ಲಿ ಆಡಬೇಕು. ಅಲ್ಲಿ ಸ್ಪರ್ಧೆ ಕಠಿನವಾಗಿರಬಹುದು. ಹೆಚ್ಚು ಶ್ರಮ ಬೇಕು. ನನ್ನಂತೆ ಇತರ ಮಕ್ಕಳಿಗೂ ಪ್ರೋತ್ಸಾಹ ದೊರೆಯಬೇಕು.
ಅನರ್ಘ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.