ಫಿಫಾ ರೋಚಕ ಫೈನಲ್ ವೇಳೆ ಟಾಪ್ ಲೆಸ್ ಆದ ಮಹಿಳೆ; ಜೈಲು ಸಾಧ್ಯತೆ!
ಗೋಲು ಬಾರಿಸಿದ ವೇಳೆ ಮೇರೆ ಮೀರಿದ ಸಂಭ್ರಮ....
Team Udayavani, Dec 19, 2022, 4:22 PM IST
ಲುಸೈಲ್: ಇಲ್ಲಿ ಭಾನುವಾರ ನಡೆದ ರೋಚಕ ಫಿಫಾ ಫೈನಲ್ ವೇಳೆ ಆರ್ಜೆಂಟೀನಾ ಅಭಿಮಾನಿಯೊಬ್ಬಳು ಕ್ರೀಡಾಂಗಣದಲ್ಲೇ ಟಾಪ್ ಲೆಸ್ ಆದ ಘಟನೆ ಸುದ್ದಿಯಾಗಿದೆ.
ಫ್ರಾನ್ಸ್ ವಿರುದ್ದದ ರೋಚಕ ಹಣಾಹಣಿಯ ವೇಳೆ ಆರ್ಜೇಂಟಿನಾ ಪರ ಮೊಂಟಿಯೆಲ್ ಗೋಲು ಬಾರಿಸಿದ ನಂತರ ಮಹಿಳಾ ಅಭಿಮಾನಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದು , ಇದು ಟಿವಿ ಪರದೆಯ ಮೇಲೂ ತೋರಿ ಬಂದಿದೆ. ಟಿವಿ ಕ್ಯಾಮರಾಗಳು ಆರ್ಜೆಂಟೀನಾ ಅಭಿಮಾನಿಗಳ ಸಂಭ್ರಮವನ್ನು ತೋರಿಸುವ ವೇಳೆ ಈಕೆಯ ಮೇರೆ ಮೀರಿದ ಸಂಭ್ರಮವೂ ಸೆರೆಯಾಗಿದೆ.
ಶೂಟೌಟ್ನಲ್ಲಿ ಆರ್ಜೆಂಟೀನಾ 4-2 ಅಂತರದಿಂದ ಜಯಭೇರಿ ಮೊಳಗಿಸುವುದರೊಂದಿಗೆ ಫುಟ್ಬಾಲ್ ಸಾಮ್ರಾಜ್ಯವನ್ನು 3ನೇ ಬಾರಿಗೆ ಆಳುವ ಹಕ್ಕು ಪಡೆದು ಮೆಸ್ಸಿಗೆ ಸ್ಮರಣೀಯ ವಿದಾಯ ಹೇಳಿತು.
ಉತ್ಸಾಹದಲ್ಲಿ ಮೈಮರೆತಿದ್ದ ಮಹಿಳಾ ಅಭಿಮಾನಿಗೆ ಜೈಲು ಸೇರುವ ಭೀತಿ ಎದುರಾಗಿದೆ. ವಿಶ್ವಕಪ್ ಆರಂಭದ ಮುನ್ನವೇ ಸಂಪ್ರದಾಯವಾದಿ ಇಸ್ಲಾಮಿಕ್ ರಾಷ್ಟ್ರ ಕತಾರ್ ಮಹಿಳೆಯರ ಧಿರಿಸುಗಳಿಗೆ ಸಂಬಂಧಿಸಿ ಕೆಲವೊಂದು ನಿಯಮಗಳನ್ನು ಕಡ್ಡಾಯ ಮಾಡಿತ್ತು. ವಿಶ್ವದ ಹಲವು ರಾಷ್ಟ್ರಗಳ ಅಭಿಮಾನಿಗಳು ಪಾಲ್ಗೊಳ್ಳುವ ಪಂದ್ಯಾವಳಿಯಲ್ಲಿ ಪುರುಷರು ಮತ್ತು ಮಹಿಳೆಯರು ತಮ್ಮ ಭುಜಗಳು ಮತ್ತು ಮೊಣಕಾಲುಗಳನ್ನು ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿತ್ತು. ಸ್ಥಳೀಯ ಸಂಸ್ಕೃತಿಗೆ ಗೌರವವನ್ನು ತೋರಿಸಬೇಕೆಂದು, ನಿಯಮಗಳನ್ನು ಉಲಂಘನೆ ಮಾಡಿದರೆ ಭಾರಿ ದಂಡ ಅಥವಾ ಜೈಲು ವಿಧಿಸುವುದಾಗಿ ಕತಾರ್ ಪ್ರವಾಸೋದ್ಯಮ ಪ್ರಾಧಿಕಾರವು ಹೇಳಿತ್ತು.
ಟಿವಿ ಸಂದರ್ಶನದಲ್ಲಿ ಕ್ರೊಯೇಷಿಯಾ ಫುಟ್ಬಾಲ್ ಅಭಿಮಾನಿ, ಮಾಡೆಲ್ ಇವಾನಾ ನಾಲ್ ಅವರೂ ಹಾಟ್ ಅವತಾರದಲ್ಲಿ ಕಾಣಿಸಿ ಸುದ್ದಿಯಾಗಿದ್ದರು ಮಾತ್ರವಲ್ಲದೆ ಕತಾರ್ ನ ಆಕ್ರೋಶಕ್ಕೆ ಗುರಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.