Women Junior Asia Cup Hockey: ಮಲೇಷ್ಯಾವನ್ನು ಮಣಿಸಿದ ಭಾರತ
Team Udayavani, Jun 6, 2023, 5:55 AM IST
ಕಾಕಾಮಿಗಹಾರ (ಜಪಾನ್): ವನಿತಾ ಜೂನಿಯರ್ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ದ್ವಿತೀಯ ಮುಖಾಮುಖೀಯಲ್ಲಿ ಭಾರತ ದಿಟ್ಟ ಹೋರಾಟ ನಡೆಸುವ ಮೂಲಕ ಮಲೇಷ್ಯಾವನ್ನು 2-1 ಗೋಲುಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ.
ಇದು ಈ ಕೂಟದಲ್ಲಿ ಭಾರತಕ್ಕೆ ಒಲಿದ ಸತತ 2ನೇ ಗೆಲುವು. ಇದರೊಂದಿಗೆ ಭಾರತ “ಎ’ ವಿಭಾಗದಲ್ಲಿ ಅಗ್ರ ಸ್ಥಾನ ಅಲಂಕರಿಸಿದೆ. ಮೊದಲ ಪಂದ್ಯದಲ್ಲಿ ಉಜ್ಬೆಕಿಸ್ಥಾನ ವನ್ನು 22-0 ಗೋಲುಗಳಿಂದ ಮಣಿಸಿತ್ತು.
ಮಲೇಷ್ಯಾ ವಿರುದ್ಧ ಭಾರತ ಆರಂಭದಲ್ಲಿ ಹಿನ್ನಡೆಗೆ ಸಿಲುಕಿತ್ತು. ಪಂದ್ಯದ 6ನೇ ನಿಮಿಷದಲ್ಲೇ ನಝೇರಿ ಬಾರಿಸಿದ ಫೀಲ್ಡ್‌ಗೋಲ್‌ನಿಂದ ಮಲೇಷ್ಯಾ ಅಚ್ಚರಿಯ ಮುನ್ನಡೆ ಗಳಿಸಿತು. ಆದರೆ ಅವರ ಈ ಸಂತಸ ಉಳಿದದ್ದು ನಾಲ್ಕೇ ನಿಮಿಷ. ಮುಮ್ತಾಜ್ ಖಾನ್ ಪೆನಾಲ್ಟಿ ಕಾರ್ನರ್ ಒಂದನ್ನು ಗೋಲಾಗಿ ಪರಿವರ್ತಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಭಾರತದ ದ್ವಿತೀಯ ಗೋಲನ್ನು ದೀಪಿಕಾ 26ನೇ ನಿಮಿಷದಲ್ಲಿ ಸಿಡಿಸಿದರು. ಇದು ಪೆನಾಲ್ಟಿ ಸ್ಟ್ರೋಕ್ ಮೂಲಕ ಬಂತು.
ಭಾರತದ ಮುಂದಿನ ಎದುರಾಳಿ ಕೊರಿಯಾ. ಈ ಪಂದ್ಯ ಮಂಗಳವಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.