ಮಹಿಳಾ ಟಿ20: ಭಾರತಕ್ಕೆ 23 ರನ್ ಸೋಲು
Team Udayavani, Feb 7, 2019, 1:00 AM IST
ವೆಲ್ಲಿಂಗ್ಟನ್: ಪುರುಷರ ಪಂದ್ಯಕ್ಕೂ ಮೊದಲು ವೆಲ್ಲಿಂಗ್ಟನ್ನಲ್ಲೇ ನಡೆದ ಮೊದಲ ಮಹಿಳಾ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ 23 ರನ್ನುಗಳಿಂದ ಭಾರತವನ್ನು ಸೋಲಿಸಿದೆ. ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರ ದಾಖಲೆಯ ಅರ್ಧ ಶತಕವೊಂದೇ ಭಾರತದ ಪಾಲಿನ ಖುಷಿಯ ಸಂಗತಿಯಾಗಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 4 ವಿಕೆಟಿಗೆ 159 ರನ್ ಗಳಿಸಿ ಸವಾಲೊಡ್ಡಿದರೆ, ಭಾರತ 19.1 ಓವರ್ಗಳಲ್ಲಿ 136 ರನ್ನಿಗೆ ಆಲೌಟ್ ಆಯಿತು. ಭಾರತದ ಸರದಿಯಲ್ಲಿ ಮಂಧನಾ 58, ಜೆಮಿಮಾ 39 ಹೊರತುಪಡಿಸಿದರೆ ಉಳಿದವರ್ಯಾರಿಗೂ ಕಿವೀಸ್ ದಾಳಿಯನ್ನು ತಡೆದು ನಿಲ್ಲಲಾಗಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.