Women’s Ashes 2025: ಆಸೀಸ್ ಗೆಲುವಿನ ಆರಂಭ
Team Udayavani, Jan 13, 2025, 12:11 AM IST
ಸಿಡ್ನಿ: ವನಿತಾ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯ ಗೆಲುವಿನ ಆರಂಭ ಪಡೆದಿದೆ. ರವಿವಾರ ಸಿಡ್ನಿಯಲ್ಲಿ ಆಡಲಾದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 6 ವಿಕೆಟ್‌ಗಳಿಂದ ಆಘಾತವಿಕ್ಕಿದೆ. ಆ್ಯಶ್ಲಿ ಗಾರ್ಡನರ್ ಅವರ ಆಲ್‌ರೌಂಡ್ ಪ್ರದರ್ಶನ ಈ ಪಂದ್ಯದ ಆಕರ್ಷಣೆ ಆಗಿತ್ತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 43.1 ಓವರ್‌ಗಳಲ್ಲಿ 204ಕ್ಕೆ ಆಲೌಟ್ ಆಯಿತು. ಆಸ್ಟ್ರೇಲಿಯ 38.5 ಓವರ್‌ಗಳಲ್ಲಿ 6 ವಿಕೆಟಿಗೆ 206 ರನ್ ಬಾರಿಸಿತು.
ಇಂಗ್ಲೆಂಡ್ ಸರದಿಯಲ್ಲಿ ಒಂದೂ ಅರ್ಧ ಶತಕವಿರಲಿಲ್ಲ. 39 ರನ್ ಮಾಡಿದ ನಾಯಕಿ ಹೀತರ್ ನೈಟ್ ಅವರದೇ ಹೆಚ್ಚಿನ ಗಳಿಕೆ. ವ್ಯಾಟ್ ಹಾಜ್ 38, ಆ್ಯಮಿ ಜೋನ್ಸ್ 31 ರನ್ ಹೊಡೆದರು. ಆ್ಯಶ್ಲಿ ಗಾರ್ಡನರ್ 19 ರನ್ನಿಗೆ 3 ವಿಕೆಟ್ ಹಾರಿಸಿ
ಇಂಗ್ಲೆಂಡ್‌ಗೆ ಕಡಿವಾಣ ಹಾಕಿದರು.
ಚೇಸಿಂಗ್ ವೇಳೆ ನಾಯಕಿ ಅಲಿಸ್ಸಾ ಹೀಲಿ 70 ರನ್ ಬಾರಿಸಿ ಮಿಂಚಿದರು (78 ಎಸೆತ, 11 ಬೌಂಡರಿ). ಇದು ಈ ಪಂದ್ಯದ ಏಕೈಕ ಅರ್ಧ ಶತಕವಾಗಿತ್ತು. ಗಾರ್ಡನರ್ ಅಜೇಯ 42 ರನ್ ಹೊಡೆದರು. ಆಲ್‌ರೌಂಡ್ ಪ್ರದರ್ಶನಕ್ಕಾಗಿ ಗಾರ್ಡನರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಎರಡೂ ತಂಡಗಳು ತಲಾ 25 ಎಕ್ಸ್‌ಟ್ರಾ ರನ್ ಬಿಟ್ಟುಕೊಟ್ಟವು.
ಸರಣಿಯಲ್ಲಿ 3 ಏಕದಿನ, 3 ಟಿ20 ಹಾಗೂ ಒಂದು ಟೆಸ್ಟ್ ಪಂದ್ಯವನ್ನು ಆಡಲಾಗುವುದು. ಮೂರೂ ಮಾದರಿಗಳಲ್ಲಿ ಅತೀ ಹೆಚ್ಚು ಅಂಕ ಪಡೆಯುವ ತಂಡಕ್ಕೆ ಆ್ಯಶಸ್ ಒಲಿಯಲಿದೆ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-43.1 ಓವರ್‌ಗಳಲ್ಲಿ 204 (ಹೀತರ್ ನೈಟ್ 39, ವ್ಯಾಟ್ ಹಾಜ್ 38, ಆ್ಯಮಿ ಜೋನ್ಸ್ 31, ಗಾರ್ಡನರ್ 19ಕ್ಕೆ 3, ಅಲಾನಾ ಕಿಂಗ್ 35ಕ್ಕೆ 2, ಅನ್ನಾಬೆಲ್ ಸದರ್ಲೆಂಡ್ 42ಕ್ಕೆ 2, ಕಿಮ್ ಗಾರ್ತ್ 46ಕ್ಕೆ 2).
ಆಸ್ಟ್ರೇಲಿಯ-38.5 ಓವರ್‌ಗಳಲ್ಲಿ 206 (ಹೀಲಿ 70, ಗಾರ್ಡನರ್ ಔಟಾಗದೆ 42, ಮೂನಿ 28, ಎಕ್‌ಸ್ಟೋನ್ 38ಕ್ಕೆ 2, ಲಾರೆನ್ ಫಿಲರ್ 58ಕ್ಕೆ 2). ಪಂದ್ಯಶ್ರೇಷ್ಠ: ಆ್ಯಶ್ಲಿ ಗಾರ್ಡನರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.