ವನಿತಾ ಏಷ್ಯಾ ಕಪ್ ಕ್ರಿಕೆಟ್: ಸೆಮಿಫೈನಲ್: ಥಾಯ್ಲೆಂಡ್ ವಿರುದ್ಧ ಭಾರತ ನಿರಾಳ
Team Udayavani, Oct 13, 2022, 8:00 AM IST
ಬಾಂಗ್ಲಾದೇಶ: ವನಿತಾ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾ ವಳಿಯ ಸೆಮಿಫೈನಲ್ ಹಣಾಹಣಿಗೆ ಅಖಾಡ ಸಜ್ಜು ಗೊಂಡಿದೆ. ಗುರುವಾರದ ಮೊದಲ ಸೆಮಿಯಲ್ಲಿ ನೆಚ್ಚಿನ ಭಾರತ ತಂಡ ಅದೃಷ್ಟದ ಬಲದಿಂದ ಬಂದ ಥಾಯ್ಲೆಂಡ್ ವಿರುದ್ಧ ಆಡಲಿದೆ. ಅಪರಾಹ್ನದ ಮುಖಾಮುಖಿಯಲ್ಲಿ ಪಾಕಿಸ್ಥಾನ-ಶ್ರೀಲಂಕಾ ಸೆಣಸಲಿವೆ.
ಅನನುಭವಿ ಥಾಯ್ಲೆಂಡ್ ಲೀಗ್ ಪಂದ್ಯದಲ್ಲಿ ಭಾರತದೆದುರು ಶೋಚ ನೀಯ ಆಟವಾಡಿ ಜುಜುಬಿ 37 ರನ್ನಿಗೆ ಕುಸಿದಿತ್ತು. ಭಾರತ 9 ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವುದಂತೂ ಥಾಯ್ಲೆಂಡ್‌ಗೆ ಸಾಧ್ಯವಾಗದ ಮಾತು. ಆದರೆ ಸೋಲಿನ ಪ್ರಮಾಣ ವನ್ನು ತಗ್ಗಿಸಬಹುದೆಂಬುದು ಸದ್ಯದ ನಿರೀಕ್ಷೆ.
ಲೀಗ್ ಹಂತದಲ್ಲಿ ಪಾಕಿಸ್ಥಾನ, ಯುಎಇ ಮತ್ತು ಮಲೇಷ್ಯಾವನ್ನು ಕೆಡ ವಿದ ಹೆಗ್ಗಳಿಕೆ ಹೊಂದಿರುವ ಥಾಯ್ಲೆಂಡ್ ಪಾಲಿಗೆ ಇದು ಮೊದಲ ಸೆಮಿಫೈನಲ್ ಪ್ರವೇಶದ ಖುಷಿ. ಆತಿ ಥೇಯ ಹಾಗೂ ಹಾಲಿ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದುದರಿಂದ ಥಾಯ್ಲೆಂಡ್‌ಗೆ “ಸೆಮಿ ಡೋರ್’ ತೆರೆಯಲ್ಪಟ್ಟಿತು. ಇದು ಅನಿರೀಕ್ಷಿತ ಅಲ್ಲ ಎಂಬುದನ್ನು ಥಾಯ್ ಪಡೆ ತೋರಿಸಿ ಕೊಡಲು ಪ್ರಯತ್ನಿಸಲಿದೆ. ಆದರೆ ಮತ್ತೂಮ್ಮೆ ಅದೃಷ್ಟ ಕೈ ಹಿಡಿದೀತೆಂಬ ನಂಬಿಕೆ ಇಲ್ಲ!
ಫಿನಿಶಿಂಗ್ ಸಮಸ್ಯೆ
ಭಾರತ ಲೀಗ್ ಉದ್ದಕ್ಕೂ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತ ಬಂದಿದೆ. ಈ ಪ್ರಯೋಗವೇ ಪಾಕಿಸ್ಥಾನ ವಿರುದ್ಧದ ಸೋಲಿಗೊಂದು ಕಾರಣ ಎಂಬುದರಲ್ಲಿ ಅನುಮಾನವಿಲ್ಲ.
ನಾಯಕಿ ಹರ್ಮನ್‌ಪ್ರೀತ್ ಕೌರ್ ಆರರಲ್ಲಿ ಆಡಿದ್ದು 3 ಪಂದ್ಯ ಮಾತ್ರ. ಅದರಲ್ಲೂ ಪಾಕ್ ವಿರುದ್ಧ ಏಳರಷ್ಟು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದಿದ್ದರು. ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಎಲ್ಲರಿಗೂ ಅವಕಾಶ ನೀಡುವ ಯೋಜನೆಯೇನೋ ಸಾಕಾರಗೊಂಡಿದೆ. ಆದರೆ ಪವರ್ ಹಿಟ್ಟರ್ ಕಿರಣ್ ಪ್ರಭು ನೆವಿYರೆ ಇನ್ನೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಟಿ20 ಚಾಲೆಂಜರ್ ಸರಣಿಯಲ್ಲಿ ಬಿರುಸಿನ ಅರ್ಧ ಶತಕ ಸಿಡಿಸಿದ ಕಿರಣ್, ಇಲ್ಲಿನ್ನೂ ಈ ಮಟ್ಟಕ್ಕೆ ಏರಿಲ್ಲ. 3 ಪಂದ್ಯಗಳಿಂದ ಗಳಿಸಿದ್ದು 10 ರನ್ ಮಾತ್ರ. ಹಾಗೆಯೇ ಡಿ. ಹೇಮಲತಾ ಕೂಡ ಪರಿಣಾಮ ಬೀರಿಲ್ಲ. 4 ಪಂದ್ಯಗಳಲ್ಲಿ ಇವರ ಗಳಿಕೆ ಬರೀ 45 ರನ್. ಇವರಿಬ್ಬರ ವೈಫಲ್ಯದಿಂದ “ಫಿನಿಶಿಂಗ್’ ಸಮಸ್ಯೆ ಕಾಡಲಿದೆ.
ಥಾಯ್ಲೆಂಡ್ ವಿರುದ್ಧ ಇದನ್ನು ಹೇಗೂ ಸಂಭಾಳಿಸಬಹುದು. ಆದರೆ ಫೈನಲ್ ಸವಾಲು ಹೆಚ್ಚು ಕಠಿನ. ಇಲ್ಲಿ ಶ್ರೀಲಂಕಾ ಅಥವಾ ಪಾಕಿಸ್ಥಾನ ಸವಾಲು ಎದುರಾಗಲಿದೆ. ಲೀಗ್‌ನಲ್ಲಿ ಪಾಕ್ ವಿರುದ್ಧ ಎದುರಾದ ಸೋಲಿಗೆ ಫಿನಿಶಿಂಗ್ ಸಮಸ್ಯೆ ಕೂಡ ಮುಖ್ಯ ಕಾರಣ.
ಜಬರ್ದಸ್ತ್ ಜೆಮಿಮಾ
ಭಾರತದ ಬ್ಯಾಟಿಂಗ್ ವಿಭಾಗದ “ಬಿಗ್ ಬೂಸ್ಟ್’ ಅಂದರೆ ಜೆಮಿಮಾ ರೋಡ್ರಿಗಸ್ ಅವರ ಜಬರ್ದಸ್ತ್ ಫಾರ್ಮ್. ಎರಡು ಅರ್ಧ ಶತಕ ಗಳೊಂದಿಗೆ 188 ರನ್ ಪೇರಿಸಿದ ಸಾಧನೆ ಇವರದು. ಓಪನರ್ ಶಫಾಲಿ ವರ್ಮ ಕೂಡ ಫಾರ್ಮ್ ಗೆ ಮರಳಿದಂತಿದೆ. ಮಂಧನಾ, ಕೌರ್, ದೀಪ್ತಿ ಉತ್ತಮ ಲಯದಲ್ಲಿದ್ದಾರೆ. ರಿಚಾ ಘೋಷ್ ಉಳಿದೆರಡು ಪಂದ್ಯಗಳಲ್ಲಾದರೂ ದೊಡ್ಡ ಮೊತ್ತ ಗಳಿಸಬೇಕಿದೆ.
ಬೌಲಿಂಗ್ ವಿಭಾಗದಲ್ಲಿ ಈ ಬಾರಿ ಸ್ಪಿನ್ ತ್ರಿವಳಿಗಳಾದ ದೀಪ್ತಿ ಶರ್ಮ, ಸ್ನೇಹ್ ರಾಣಾ ಮತ್ತು ರಾಜೇಶ್ವರಿ ಗಾಯಕ್ವಾಡ್ ಅವರದೇ ಮೇಲುಗೈ.
ಲಂಕಾ-ಪಾಕ್ ಕಠಿನ ಫೈಟ್
ಮೊದಲ ಸೆಮಿಫೈನಲ್ ಏಕಪಕ್ಷೀಯವಾಗಿ ನಡೆಯುವ ಸಾಧ್ಯತೆಯನ್ನು ತೆರೆದಿಟ್ಟರೆ, ಪಾಕಿಸ್ಥಾನ-ಶ್ರೀಲಂಕಾ ನಡುವಿನ ಮತ್ತೊಂದು ಸೆಮಿಫೈನಲ್ ತೀವ್ರ ಪೈಪೋಟಿಯ ನಿರೀಕ್ಷೆ ಮೂಡಿಸಿದೆ.
ಪಾಕ್ ಕೂಡ ಭಾರತದಂತೆ 5 ಪಂದ್ಯ ಗೆದ್ದು 10 ಅಂಕ ಗಳಿಸಿದೆ. ಆದರೆ ರನ್‌ರೇಟ್‌ನಲ್ಲಿ ಹಿಂದೆ ಬಿತ್ತು. ಶ್ರೀಲಂಕಾ ಆರರಲ್ಲಿ 4 ಪಂದ್ಯ ಗೆದ್ದು ತೃತೀಯ ಸ್ಥಾನಿಯಾಯಿತು.
ಮಂಗಳವಾರವಷ್ಟೇ ನಡೆದ ಕೊನೆಯ ಲೀಗ್ ಮುಖಾಮುಖಿಯಲ್ಲಿ ಪಾಕ್ 5 ವಿಕೆಟ್‌ಗಳಿಂದ ಲಂಕೆಯನ್ನು ಮಣಿಸಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಲು ಚಾಮರಿ ಅತಪಟ್ಟು ಬಳಗದಿಂದ ಸಾಧ್ಯವೇ ಎಂಬುದೊಂದು ಕುತೂಹಲ.
ಸೆಮಿಫೈನಲ್-1
ಭಾರತ-ಥಾಯ್ಲೆಂಡ್
ಆರಂಭ: ಬೆಳಗ್ಗೆ 8.30
ಸೆಮಿಫೈನಲ್-2
ಪಾಕಿಸ್ಥಾನ-ಶ್ರೀಲಂಕಾ
ಆರಂಭ: ಅಪರಾಹ್ನ 1.00
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.