ವನಿತಾ ಏಷ್ಯಾ ಕಪ್ ಕ್ರಿಕೆಟ್: ಮಲೇಷ್ಯಾದ ಮಳೆ ಪಂದ್ಯ ಗೆದ್ದ ಭಾರತ
Team Udayavani, Oct 3, 2022, 10:37 PM IST
ಬಾಂಗ್ಲಾದೇಶ: ವನಿತಾ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಸತತ ಎರಡು ಪಂದ್ಯಗಳನ್ನು ಗೆದ್ದು ತನ್ನ ಓಟ ಮುಂದುವರಿಸಿದೆ. ಸೋಮವಾರ ಮಲೇಷ್ಯಾ ಎದುರಿನ ಮಳೆಪೀಡಿತ ಮುಖಾಮುಖಿಯನ್ನು ಹರ್ಮನ್‌ಪ್ರೀತ್ ಕೌರ್ ಬಳಗ ಡಿ-ಎಲ್ ನಿಯಮದಂತೆ 30 ರನ್ನುಗಳಿಂದ ಜಯಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 4 ವಿಕೆಟಿಗೆ 161 ರನ್ ಪೇರಿಸಿದರೆ, ಮಲೇಷ್ಯಾ ಚೇಸಿಂಗ್ ವೇಳೆ ಮಳೆ ಸುರಿಯಿತು. ಪಂದ್ಯ 5.2 ಓವರ್‌ಗಳಿಗೆ ನಿಂತಿತು. ಮಲೇಷ್ಯಾ 2 ವಿಕೆಟ್ ಕಳೆದುಕೊಂಡು 16 ರನ್ ಮಾಡಿತ್ತು. ಆಗ ಅದು 46 ರನ್ ಗಳಿಸಬೇಕಿತ್ತು.
ಅಂಕಪಟ್ಟಿಯಲ್ಲೀಗ ಭಾರತ ದ್ವಿತೀಯ ಸ್ಥಾನದಲ್ಲಿದೆ (4 ಅಂಕ, +2.803 ರನ್‌ರೇಟ್). ಪಾಕಿಸ್ಥಾನ ಅಗ್ರಸ್ಥಾನಿಯಾಗಿದೆ. ಅದು ಕೂಡ 4 ಅಂಕ ಹೊಂದಿದ್ದರೂ ರನ್‌ರೇಟ್‌ನಲ್ಲಿ ಭಾರತಕ್ಕಿಂತ ಮುಂದಿದೆ (+3.059).
ಮೇಘನಾ ಮಿಂಚಿನಾ ಆಟ
ಉಪನಾಯಕಿ ಸ್ಮತಿ ಮಂಧನಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇವರ ಬದಲು ಇನ್ನಿಂಗ್ಸ್ ಆರಂಭಿಸಿದ ಎಸ್. ಮೇಘನಾ ಮಿಂಚಿನ ಆಟವಾಡಿದರು. 53 ಎಸೆತಗಳಿಂದ 69 ರನ್ ಬಾರಿಸಿದರು (11 ಬೌಂಡರಿ, 1 ಸಿಕ್ಸರ್).
ತೀವ್ರ ಬ್ಯಾಟಿಂಗ್ ಬರಗಾಲದಲ್ಲಿದ್ದ ಶಫಾಲಿ ವರ್ಮ 46 ರನ್ ಹೊಡೆದು ಲಯ ಕಂಡುಕೊಂಡರು (1 ಬೌಂಡರಿ, 3 ಸಿಕ್ಸರ್). ರಿಚಾ ಘೋಷ್ ಅಜೇಯ 33 ರನ್ ಮಾಡಿದರು. ಆದರೆ ಕಿರಣ್ ಪ್ರಭು “ಗೋಲ್ಡನ್ ಡಕ್’ ಸಂಕಟಕ್ಕೆ ಸಿಲುಕಿದರು. ಕಳೆದ ಪಂದ್ಯದಲ್ಲಿ ಸಿಡಿದಿದ್ದ ಜೆಮಿಮಾ ರೋಡ್ರಿಗಸ್, ನಾಯಕಿ ಹರ್ಮನ್‌ಪ್ರೀತ್ ಕೌರ್ ಕ್ರೀಸ್ ಇಳಿಯಲಿಲ್ಲ.
ಮಲೇಷ್ಯಾದ 2 ವಿಕೆಟ್‌ಗಳನ್ನು ರಾಜೇಶ್ವರಿ ಗಾಯಕ್ವಾಡ್ ಮತ್ತು ದೀಪ್ತಿ ಶರ್ಮ ಉರುಳಿಸಿದರು.
ಭಾರತ ಮಂಗಳವಾರ ಯುಎಇ ವಿರುದ್ಧ ಆಡಲಿದೆ.
ಸಂಕ್ಷಿಪ್ತ ಸ್ಕೋರ್: ಭಾರತ-4 ವಿಕೆಟಿಗೆ 181 (ಮೇಘನಾ 69, ಶಫಾಲಿ 46, ರಿಚಾ 33, ನುರ್ ದಾನಿಯಾ 9ಕ್ಕೆ 2). ಮಲೇಷ್ಯಾ-5.2 ಓವರ್‌ಗಳಲ್ಲಿ 2 ವಿಕೆಟಿಗೆ 16. ಪಂದ್ಯಶ್ರೇಷ್ಠ: ಎಸ್. ಮೇಘನಾ.
ಪಾಕ್‌ಗೆ 9 ವಿಕೆಟ್ ಜಯ
ದಿನದ ಮೊದಲ ಪಂದ್ಯದಲ್ಲಿ ಪಾಕಿಸ್ಥಾನ ಆತಿಥೇಯ ಬಾಂಗ್ಲಾದೇಶವನ್ನು 9 ವಿಕೆಟ್‌ಗಳಿಂದ ಪರಾಭವಗೊಳಿಸಿತು. ಬಾಂಗ್ಲಾ 8 ವಿಕೆಟಿಗೆ ಗಳಿಸಿದ್ದು 70 ರನ್ ಮಾತ್ರ. ಪಾಕಿಸ್ಥಾನ 12.2 ಓವರ್‌ಗಳಲ್ಲಿ ಒಂದು ವಿಕೆಟಿಗೆ 72 ರನ್ ಮಾಡಿತು. ಪಾಕ್ ಮೊದಲ ಪಂದ್ಯದಲ್ಲಿ ಮಲೇಷ್ಯಾವನ್ನೂ 9 ವಿಕೆಟ್‌ಗಳಿಂದ ಸೋಲಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.