Women’s Asia Cup: ಭಾರತಕ್ಕೆ ಇಂದು ಯುಎಇ ಸವಾಲು
Team Udayavani, Jul 21, 2024, 6:50 AM IST
ದಂಬುಲಾ (ಶ್ರೀಲಂಕಾ): ಬಲಿಷ್ಠ ಭಾರತೀಯ ತಂಡವು ವನಿತಾ ಏಷ್ಯಾ ಕಪ್ ಕ್ರಿಕೆಟ್ ಕೂಟದ ರವಿವಾರದ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲೂ ಅಮೋಘ ಜಯ ದಾಖಲಿಸುವ ಮೂಲಕ ಭಾರತ ಸೆಮಿಫೈನಲಿಗೇರುವ ವಿಶ್ವಾಸದಲ್ಲಿದೆ.
ಹಾಲಿ ಚಾಂಪಿಯನ್ ಆಗಿರುವ ಭಾರತ ಈ ಕೂಟದ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಮೊದಲ ಪಂದ್ಯದಲ್ಲಿ ಪ್ರತಿಸ್ಪರ್ಧಿ ಪಾಕಿಸ್ಥಾನವನ್ನು ಏಳು ವಿಕೆಟ್‌ಗಳಿಂದ ಮಣಿಸಿದ ಭಾರತ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಹರ್ಮನ್‌ಪ್ರೀತ್ ಕೌರ್ ಅವರ ಅಮೋಘ ಆಟಕ್ಕೆ ತಡೆಯೊಡ್ಡಲು ಯುಎಇ ಏನಾದರೂ ಪವಾಡ ಮಾಡಬೇಕಾಗಿದೆ.
ಸದ್ಯ ಎರಡಂಕ ಹೊಂದಿರುವ ಭಾರತ ಉತ್ತಮ ರನ್‌ಧಾರಣೆಯನ್ನು ಹೊಂದಿದೆ. ಯುಎಇ ವಿರುದ್ಧ ಗೆದ್ದರೆ ನಾಲ್ಕಂಕ ಪಡೆಯಲಿರುವ ಭಾರತ ಉತ್ತಮ ರನ್‌ಧಾರಣೆಯೊಂದಿಗೆ ಮುಂದಿನ ಸುತ್ತಿಗೇರಲಿದೆ. ಭಾರತ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ದೀಪ್ತಿ ಶರ್ಮ, ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್ ಅವರಲ್ಲದೇ ರಾಧಾ ಯಾದವ್ ಉತ್ತಮ ರೀತಿಯಲ್ಲಿ ದಾಳಿ ಸಂಘಟಿಸಬಲ್ಲರು. ಬ್ಯಾಟಿಂಗ್‌ನಲ್ಲಿ ಆರಂಭಿಕರಾದ ಶಫಾಲಿ ಶರ್ಮ ಮತ್ತು ಸ್ಮತಿ ಮ ಂಧನಾ ಉತ್ತಮ ಆರಂಭ ಒದಗಿಸಬಲ್ಲರು.
ಏಷ್ಯಾ ಕಪ್ ಕೂಟವು ಭಾರತೀಯರ ಪಾಲಿಗೆ ಮುಂಬರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ಮಾಡಿಕೊಳ್ಳಲು ಒಳ್ಳೆಯ ಅವಕಾಶವಾಗಿದೆ. ಪುರುಷರಂತೆ ವನಿತೆಯರೂ ಕೂಡ ಈ ಬಾರಿ ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಏಷ್ಯಾ ಕಪ್‌ನಲ್ಲಿ ಉತ್ತಮ ಸಾಧನೆಗೈದರೆ ಆಟಗಾರರು ಅದೇ ಮನಸ್ಥಿತಿಯೊಂದಿಗೆ ವಿಶ್ವಕಪ್‌ನಲ್ಲೂ ಹೋರಾಡಲು ಸಹಕಾರಿಯಾಗಲಿದೆ.
ಅನನುಭವಿ ಯುಎಇ ತಂಡ ಮೊದಲ ಪಂದ್ಯದಲ್ಲಿ ನೇಪಾಲ ವಿರುದ್ಧ ಆರು ವಿಕೆಟ್‌ಗಳಿಂದ ಸೋಲನ್ನು ಕಂಡಿದೆ. ಭಾರತ ವಿರುದ್ಧ ಸೋತರೆ ಅದು ಕೂಟದಿಂದ ಹೊರಬೀಳುವ ಸಾಧ್ಯತೆಯಿದೆ.
ದಿನದ ಎರಡನೇ ಪಂದ್ಯದಲ್ಲಿ ನೇಪಾಲ ತಂಡವು ಪಾಕಿಸ್ಥಾನವನ್ನು ಎದುರಿಸಲಿದೆ. ಯುಎಇ ವಿರುದ್ಧ ಗೆದ್ದಿರುವ ನೇಪಾಲ ಬಳಿ ಸದ್ಯ ಎರಡಂಕಯಿದೆ. ನೇಪಾಲವನ್ನು ಮಣಿಸುವ ವಿಶ್ವಾಸವನ್ನು ಪಾಕಿಸ್ಥಾನ ತಂಡ ಹೊಂದಿದೆ.
ಪಂದ್ಯ ಆರಂಭ: ಮ.2ಕ್ಕೆ
ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ (ಟೀವಿ), ಡಿಸ್ನಿ ಹಾಟ್‌ಸ್ಟಾರ್ (ಆ್ಯಪ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Series: ಟೀಮ್ ಇಂಡಿಯಾ ವೈಟ್ ವಾಶ್… ನ್ಯೂಝಿಲೆಂಡ್ ಗೆ ಸರಣಿ ಗೆಲುವು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
MUST WATCH
ಹೊಸ ಸೇರ್ಪಡೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.