ಏಶ್ಯ ಕಪ್ ಮಹಿಳಾ ಹಾಕಿ: ಸಿಂಗಾಪುರ ವಿರುದ್ಧ ಭಾರತಕ್ಕೆ 10-0 ಜಯ
Team Udayavani, Oct 29, 2017, 6:40 AM IST
ಟೋಕಿಯೊ: ಭಾರತ ಮಹಿಳಾ ತಂಡ ಏಶ್ಯ ಕಪ್ ಹಾಕಿ ಕೂಟದಲ್ಲಿ ಸಿಂಗಾಪುರ ತಂಡವನ್ನು 10-0 ಗೋಲುಗಳ ಭಾರೀ ಅಂತರದಲ್ಲಿ ಸೋಲಿಸಿ ಶುಭಾರಂಭ ಮಾಡಿದೆ. ಶನಿವಾರ ನಡೆದ “ಎ’ ಗುಂಪಿನ ಪಂದ್ಯದಲ್ಲಿ ಭಾರತದ ಪರ ನವನೀತ್ ಕೌರ್ (3 ಮತ್ತು 41ನೇ ನಿಮಿಷ), ರಾಣಿ ರಾಮ್ಪಾಲ್ (15 ಮತ್ತು 18ನೇ ನಿಮಿಷ), ನವಜೋತ್ ಕೌರ್ (30 ಮತ್ತು 50ನೇ ನಿಮಿಷ) ತಲಾ ಎರಡು ಗೋಲು ಬಾರಿಸಿದರು. ಉಳಿದಂತೆ ಲಾಲ್ರೆಸಿಯಾಮಿ (18ನೇ ನಿಮಿಷ), ದೀಪ್ ಗ್ರಾಸ್ ಎಕ್ಕ (25ನೇ ನಿಮಿಷ), ಗುರ್ಜಿತ್ ಕೌರ್ (41ನೇ ನಿಮಿಷ), ಸೋನಿಕಾ (45ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು. ಸಿಂಗಾಪುರ ಆಟಗಾರ್ತಿಯರಿಗೆ ಒಂದೂ ಗೋಲು ಹೊಡೆಯಲಾಗಲಿಲ್ಲ.
ಪಂದ್ಯದ ಆರಂಭದಿಂದಲೇ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇದರಿಂದಾಗಿ ಒಂದರ ಹಿಂದೆ ಒಂದು ಗೋಲುಗಳು ಸಿಡಿಯುತ್ತ ಹೋದವು. ಪಂದ್ಯದ 3ನೇ ನಿಮಿಷದಲ್ಲೇ ಭಾರತಕ್ಕೆ ಲಭಿಸಿದ ಮೊದಲ ಪೆನಾಲ್ಟಿಯನ್ನು ನವನೀತ್ ಕೌರ್ ಗೋಲಾಗಿಸಿದರು. ಇಲ್ಲಿಂದ ಭಾರತದಿಂದ ಗೋಲಿನ ಸುರಿಮಳೆ ಆರಂಭವಾಯಿತು. ಸಿಂಗಾಪುರ ಕಕ್ಕಾಬಿಕ್ಕಿಯಾಯಿತು. ಮೊದಲ ಕ್ವಾರ್ಟರ್ನಲ್ಲಿ ಭಾರತ 2 ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. 2ನೇ ಕ್ವಾರ್ಟರ್ನಲ್ಲಿ 4 ಗೋಲು, 3ನೇ ಕ್ವಾರ್ಟರ್ನಲ್ಲಿ 3, ನಾಲ್ಕನೇ ಕ್ವಾರ್ಟರ್ನಲ್ಲಿ ಒಂದು ಗೋಲು ಬಾರಿಸಿತು.”ಎ’ ಗುಂಪಿನಲ್ಲಿರುವ ಭಾರತ ರವಿವಾರ ಚೀನವನ್ನು, ಅ. 31ರಂದು ಮಲೇಶ್ಯವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.