ಮಹಿಳಾ ಬಾಸ್ಕೆಟ್‌ಬಾಲ್: ಫೈನಲ್‌ನಲ್ಲಿ ಭಾರತಕ್ಕೆ ಕಜಕಿಸ್ತಾನ ಎದುರಾಳಿ
Team Udayavani, Nov 3, 2018, 6:00 AM IST
ಬೆಂಗಳೂರು: ಫಿಬಾ ಏಷ್ಯನ್ ಮಹಿಳಾ ಬಾಸ್ಕೆಟ್‌ಬಾಲ್ ಕೂಟದ “ಬಿ’ ಡಿವಿಷನ್ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 83-38 ಅಂತರದಿಂದ ಹಾಂಕಾಂಗ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಶುಕ್ರವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತೀಯರು ಶಿಸ್ತುಬದ್ಧ ಆಟ ಪ್ರದರ್ಶಿಸಿ ಗೆಲುವನ್ನು ಸಾರಿದರು.
ಪಾರಮ್ಯ ಮೆರೆದ ಭಾರತ: ಭಾರತೀಯ ಆಟಗಾರ್ತಿಯರು ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದರು. ಮೊದಲ ಕ್ವಾರ್ಟರ್‌ನಲ್ಲಿ 23-8 ಅಂಕಗಳ ಅಂತರದಿಂದ ಮುನ್ನಡೆ ಪಡೆದರು. 2ನೇ ಕ್ವಾರ್ಟರ್‌ನಲ್ಲೂ ಹಾಂಕಾಂಗ್ ಚೇತರಿಸಿಕೊಳ್ಳಲಿಲ್ಲ. ಭಾರತೀಯರು ಅಷ್ಟರ ಮಟ್ಟಿಗೆ ಮುಗಿಬಿದ್ದು ಪ್ರದರ್ಶನ ನೀಡಿದರು. ಹೀಗಾಗಿ ಹಾಂಕಾಂಗ್ 51-21 ಅಂಕಗಳ ಅಂತರದಿಂದ ಹಿನ್ನಡೆಯಲ್ಲಿತ್ತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ದೈತ್ಯ ಆಟ ಮುಂದುವರಿಸಿ 68-23 ಅಂತರದಿಂದ ಮುನ್ನಡೆ ಪಡೆಯಿತು. ಅಂತಿಮ ಕ್ವಾರ್ಟರ್‌ನಲ್ಲಿ 83-38 ಅಂತರದಿಂದ ಗೆಲ್ಲುವ ಮೂಲಕ ಭಾರತೀಯರು ಫೈನಲ್‌ನತ್ತ ಹೆಜ್ಜೆ ಇರಿಸಿದರು.
ಕಜಕಿಸ್ತಾನ ಭರ್ಜರಿ ಆಟ: ಇದಕ್ಕೂ ಮೊದಲು “ಬಿ’ ಡಿವಿಷನ್ ಮೊದಲ ಸೆಮಿಫೈನಲ್‌ನಲ್ಲಿ ಕಜಕಿಸ್ತಾನ 76-56 ಅಂಕಗಳ ಅಂತರದಿಂದ ಸಿರಿಯಾ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಸಿರಿಯಾ ಪರ ನೌರ ಬಶಾರ 23 ಅಂಕಗಳಿಸಿದರೆ ಕಜಕಿಸ್ತಾನ ಪರ ಇನ್ನಾ ಕುಲಿಕೊವಾ 19 ಅಂಕಗಳಿಸಿದರು.
“ಎ’ ಡಿವಿಷನ್ ಫೈನಲ್‌ನಲ್ಲಿ ಚೀನಾ v/s ಜಪಾನ್
ಹಾಲಿ ಚಾಂಪಿಯನ್ ಚೀನಾ ಹಾಗೂ ಕಳೆದ ಬಾರಿಯ ರನ್ನರ್‌ಅಪ್ ಜಪಾನ್ ತಂಡಗಳು ಅಂಡರ್-18 ಏಷ್ಯನ್ ಚಾಂಪಿಯನ್‌ಶಿಪ್ ಬಾಸ್ಕೆಟ್‌ಬಾಲ್ “ಎ’ ಡಿವಿಷನ್ ಕಪ್‌ಗಾಗಿ ಫೈನಲ್‌ನಲ್ಲಿ ಸೆಣಸಾಟ ನಡೆಸಲಿವೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಜಪಾನ್ 90-77 ಅಂಕಗಳ ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಎರಡನೇ ಸೆಮಿಫೈನಲ್‌ನಲ್ಲಿ ಚೀನಾ 69-51 ಅಂಕಗಳ ಅಂತರದಿಂದ ಕೊರಿಯಾ ರಿಪಬ್ಲಿಕ್ ತಂಡವನ್ನು ಮಣಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.