ಭಾರತದ ವನಿತೆಯರಿಗೆ ಟಿ20 ಸರಣಿ
Team Udayavani, Sep 25, 2018, 12:45 PM IST
ಕೊಲಂಬೊ: ಅನುಜಾ ಪಾಟೀಲ್ ಅವರ ಆಲ್‌ರೌಂಡ್ ಪ್ರದರ್ಶನ ಹಾಗೂ ಜೆಮಿಮಾ ರೋಡ್ರಿಗಸ್ ಅವರ ಸತತ 2ನೇ ಅರ್ಧ ಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ ವಿರುದ್ಧ 4ನೇ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಗೆಲುವು ದಾಖಲಿಸಿದ ಭಾರತ ಸರಣಿಯನ್ನು ವಶಪಡಿಸಿಕೊಂಡಿತು. 5 ಪಂದ್ಯಗಳ ಸರಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ 3-0 ಮುನ್ನಡೆಯಲ್ಲಿದೆ.
ಸೋಮವಾರ ನಡೆದ 4ನೇ ಪಂದ್ಯ ಮಳೆಯ ಕಾರಣ 17 ಓವರ್‌ಗಳಿಗೆ ಕುಂಠಿತಗೊಂಡಿತು. ಟಾಸ್ ಸೋತು ಬ್ಯಾಟಿಂಗಿಗೆ ಇಳಿದ ಶ್ರೀಲಂಕಾ 5 ವಿಕೆಟಿಗೆ 134 ರನ್ ಕಲೆ ಹಾಕಿದರೆ, ಭಾರತ 15.4 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 137 ರನ್ ಬಾರಿಸಿತು.
ಚೇಸಿಂಗ್ ವೇಳೆ ಮಿಥಾಲಿ ರಾಜ್ (11), ಸ್ಮತಿ ಮಂಧನಾ (5), ತನ್ಯಾ ಭಾಟಿಯಾ (5) ಬಹಳ ಬೇಗ ಪೆವಿಲಿನಿಯನ್ ಸೇರಿದರು. ಈ ಮೂವರೂ ಒಶಾದಿ ರಣಸಿಂಘೆ ಬಲೆಗೆ ಬಿದ್ದರು. ಬಳಿಕ ಜೆಮಿಮಾ ಮತ್ತು ಅನುಜಾ ಪಾಟೀಲ್ ಅಜೇಯ ಜತೆಯಾಟ ನಡೆಸಿ ಭಾರತವನ್ನು ದಡ ತಲುಪಿಸಿದರು. ಇವರು ಮುರಿಯದ 4ನೇ ವಿಕೆಟಿಗೆ 70 ಎಸೆತಗಳಲ್ಲಿ 96 ರನ್ ಪೇರಿಸಿದರು. ಜೆಮಿಮಾ ಅಜೇಯ 52 ಹಾಗೂ ಅನುಜಾ ಅಜೇಯ 54 ರನ್ ಹೊಡೆದರು. ಇದು ಶ್ರೀಲಂಕಾ ವಿರುದ್ಧ ಜೆಮಿಮಾ ಬಾರಿಸಿದ ಸತತ 2ನೇ ಅರ್ಧ ಶತಕ. ರವಿವಾರದ 3ನೇ ಪಂದ್ಯದಲ್ಲಿ ಅವರು 57 ರನ್ ಹೊಡೆದು ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.
ಶ್ರೀಲಂಕಾ ಪರ ಶಶಿಕಲಾ ಸಿರಿವರ್ಧನೆ 40, ಚಾಮರಿ ಜಯಾಂಗನಿ 31, ಯಶೋದಾ ಮೆಂಡಿಸ್ 19 ರನ್ ಹೊಡೆದರು. ಅನುಜಾ ಪಾಟೀಲ್ 36 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈಗಾಗಲೇ ಏಕದಿನ ಸರಣಿಯನ್ನು 2-1 ಅಂತರದಿಂದ ಜಯಿಸಿರುವ ಭಾರತ, ಟಿ20 ಸರಣಿಯನ್ನು ಕೂಡ ತನ್ನದಾಗಿಸಿಕೊಂಡಿತು. ಒಂದು ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಅಂತಿಮ ಪಂದ್ಯ ಮಂಗಳವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-17 ಓವರ್‌ಗಳಲ್ಲಿ 8 ವಿಕೆಟಿಗೆ 134 (ಶಶಿಕಲಾ 40, ಜಯಾಂಗನಿ 31, ಅನುಜಾ ಪಾಟೀಲ್ 36ಕ್ಕೆ 3). ಭಾರತ-15.4 ಓವರ್‌ಗಳಲ್ಲಿ 3 ವಿಕೆಟಿಗೆ 137 (ಜೆಮಿಮಾ 52, ಅನುಜಾ 54, ಒಶಾದಿ 33ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.