ವನಿತಾ ಕ್ರಿಕೆಟ್ ವಾರ್ಷಿಕ ವೇಳಾಪಟ್ಟಿ: ಭಾರತ ಆಯೋಜಿಸಲಿದೆ 4 ಸರಣಿ
Team Udayavani, Aug 17, 2022, 7:30 AM IST
ದುಬಾೖ: ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವನಿತಾ ಕ್ರಿಕೆಟ್ ಸರಣಿಯ ವಾರ್ಷಿಕ ವೇಳಾಪಟ್ಟಿ “ಫ್ಯೂಚರ್ ಟೂರ್ ಪ್ರೋಗ್ರಾಂ’ (ಎಫ್ಟಿಪಿ) ಪ್ರಕಟಿಸಿದೆ.
ಇದು ಎಪ್ರಿಲ್ 2025ರ ವರೆಗಿನ ವನಿತಾ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳ ವೇಳಾಪಟ್ಟಿಯನ್ನು ಒಳಗೊಂಡಿದೆ.
ಇದರಂತೆ ಭಾರತದ ಆತಿಥ್ಯದಲ್ಲಿ ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಎದುರಿನ ಸರಣಿ ನಡೆಯಲಿದೆ.
ಹಾಗೆಯೇ ಭಾರತ ತಂಡ ಇಂಗ್ಲೆಂಡ್, ಆಸ್ಟ್ರೇಲಿಯ, ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕೆ ಪ್ರವಾಸ ತೆರಳಲಿದೆ.
“ವನಿತಾ ಕ್ರಿಕೆಟ್ ಪಾಲಿಗೆ ಇದೊಂದು ಮಹತ್ವದ ಗಳಿಗೆ. ಇದು ಕೇವಲ ವೇಳಾಪಟ್ಟಿಯಷ್ಟೇ ಅಲ್ಲ, ವನಿತಾ ಕ್ರಿಕೆಟ್ ಬೆಳವಣಿಗೆಯ ಮಾರ್ಗದರ್ಶಿಯೂ ಆಗಿದೆ’ ಎಂಬುದಾಗಿ ಐಸಿಸಿ ಜನರಲ್ ಮ್ಯಾನೇಜರ್ ಆಫ್ ಕ್ರಿಕೆಟ್, ವಾಸಿಂ ಖಾನ್ ಹೇಳಿದರು.
ಮುಂದಿನ 3 ವರ್ಷಗಳಲ್ಲಿ ಐಸಿಸಿ ಸದಸ್ಯ ರಾಷ್ಟ್ರಗಳ ಸರಣಿಯೂ ಸೇರಿದಂತೆ 300ಕ್ಕೂ ಅಧಿಕ ಅಂತಾ ರಾಷ್ಟ್ರೀಯ ಪಂದ್ಯಗಳನ್ನು ಆಡಲಾಗುವುದು. 7 ಟೆಸ್ಟ್, 135 ಏಕದಿನ, 159 ಟಿ20 ಪಂದ್ಯಗಳನ್ನು ಇದು ಒಳಗೊಂಡಿದೆ. ಭಾರತದಲ್ಲಿ ನಡೆ ಯುವ ಏಕದಿನ ವಿಶ್ವಕಪ್ ಕ್ರಿಕೆಟ್ ಕೂಡ ಇದೇ ಅವಧಿಯಲ್ಲಿ ಬರುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.