INDvsAUS: ವನಿತಾ ಕ್ರಿಕೆಟಿಗರ ಆಸ್ಟ್ರೇಲಿಯ ಪ್ರವಾಸ: ಶಫಾಲಿ, ಶ್ರೇಯಾಂಕಾ ತಂಡದಿಂದ ಔಟ್
Team Udayavani, Nov 20, 2024, 7:19 AM IST
ಹೊಸದಿಲ್ಲಿ: ಕಳೆದ ಕೆಲವು ಸಮಯದಿಂದ ತೀವ್ರ ಬ್ಯಾಟಿಂಗ್ ಬರಗಾಲದಲ್ಲಿರುವ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದೆ. ಆಸ್ಟ್ರೇಲಿಯದಲ್ಲಿ ವರ್ಷಾಂತ್ಯ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗಾಗಿ ಪ್ರಕಟಿಸಲಾದ 16 ಸದಸ್ಯರ ತಂಡದಲ್ಲಿ ಶಫಾಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಹಾಗೆಯೇ ಕರ್ನಾಟಕದ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್, ಡಿ. ಹೇಮಲತಾ, ಉಮಾ ಛೇತ್ರಿ ಮತ್ತು ಸಯಾಲಿ ಸತರೆ ಅವರನ್ನೂ ತಂಡದಿಂದ ಹೊರಗಿಡಲಾಗಿದೆ. ಇವರೆಲ್ಲರೂ ಕಳೆದ ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಯ ವೇಳೆ ತಂಡದಲ್ಲಿದ್ದರು. ಅಹ್ಮದಾಬಾದ್‌ನಲ್ಲಿ ನಡೆದ ಈ ಸರಣಿ ಯನ್ನು ಭಾರತ 2-1 ಅಂತರದಿಂದ ಜಯಿಸಿತ್ತು.
ಈ ಸರಣಿಯಲ್ಲಿ ಆಡದ ಹರ್ಲೀನ್ ದೇವಲ್, ರಿಚಾ ಘೋಷ್, ಮಿನ್ನು ಮಣಿ, ತಿತಾಸ್ ಸಾಧು ಮತ್ತು ಪ್ರಿಯಾ ಪೂನಿಯ ಅವರನ್ನು ಆಸ್ಟ್ರೇಲಿಯ ಪ್ರವಾಸಕ್ಕೆ ಆರಿಸಲಾಗಿದೆ.
20 ವರ್ಷದ ಬಲಗೈ ಬ್ಯಾಟರ್ ಶಫಾಲಿ ವರ್ಮ ಈ ವರ್ಷದ 6 ಏಕದಿನ ಪಂದ್ಯಗಳಲ್ಲಿ ಕೇವಲ 108 ರನ್ ಗಳಿಸಿದ್ದಾರೆ. 33 ರನ್ನೇ ಸರ್ವಾಧಿಕ ಗಳಿಕೆಯಾಗಿದೆ. ಶ್ರೀಲಂಕಾ ವಿರುದ್ಧ 2022ರ ಪಲ್ಲೆಕೆಲೆ ಪಂದ್ಯದ ಬಳಿಕ ಏಕದಿನದಲ್ಲಿ 50ರ ಗಡಿ ಮುಟ್ಟುವಲ್ಲಿ ವಿಫಲರಾಗಿದ್ದರು. ಅಲ್ಲಿ 71 ರನ್ ಮಾಡಿದ್ದರು. ಅದೇ ಸರಣಿಯಲ್ಲಿ 49 ರನ್ ಗಳಿಸಿದ್ದೇ ಶಫಾಲಿ ಅವರ ಅನಂತರದ ಗರಿಷ್ಠ ಮೊತ್ತವಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯ ಎದುರಿನ ತವರಿನ ಸರಣಿಯ ನಡುವಲ್ಲೂ ಶಫಾಲಿ ಅವರನ್ನು ಕಳಪೆ ಫಾರ್ಮ್ ಕಾರಣ ಕೈಬಿಡಲಾಗಿತ್ತು. ಬಳಿಕ ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೆಂಗಳೂರಿನಲ್ಲಿ ಆಡಲಾದ ಪಂದ್ಯದ ವೇಳೆ ತಂಡಕ್ಕೆ ಮರಳಿದ್ದರು.
ಸರಣಿಯ ಮೊದಲೆರಡು ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ (ಡಿ. 5 ಮತ್ತು 8). 3ನೇ ಪಂದ್ಯವನ್ನು ಪರ್ತ್ ನಲ್ಲಿ ಆಡಲಾಗುವುದು (ಡಿ. 11).
ಭಾರತ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧನಾ (ಉಪನಾಯಕಿ), ಪ್ರಿಯಾ ಪೂನಿಯ, ಜೆಮಿಮಾ ರೋಡ್ರಿಗಸ್, ಹಲೀìನ್ ದೇವಲ್, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ತೇಜಲ್ ಹಸಬಿ°ಸ್, ದೀಪ್ತಿ ಶರ್ಮ, ಮಿನ್ನು ಮಣಿ, ಪ್ರಿಯಾ ಮಿಶ್ರಾ, ರಾಧಾ ಯಾದವ್, ತಿತಾಸ್ ಸಾಧು, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಸೈಮಾ ಠಾಕೂರ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.