ವನಿತಾ ಡಬಲ್ಸ್: ಸ್ಯಾಂಡ್ಸ್-ಸಫರೋವಾ ಚಾಂಪಿಯನ್ಸ್
Team Udayavani, Jan 28, 2017, 3:45 AM IST
ಮೆಲ್ಬರ್ನ್: ಅಮೆರಿಕದ ಬೆಥನಿ ಮಾಟೆಕ್ ಸ್ಯಾಂಡ್ಸ್-ಜೆಕ್ ಆಟಗಾರ್ತಿ ಲೂಸಿ ಸಫರೋವಾ ಸೇರಿ ಕೊಂಡು 2ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ವನಿತಾ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ.
ಶುಕ್ರವಾರ ನಡೆದ ಫೈನಲ್‌ನಲ್ಲಿ 2ನೇ ಶ್ರೇಯಾಂಕದ ಬೆಥನಿ- ಸಫರೋವಾ ಸೇರಿಕೊಂಡು ಆಂಡ್ರಿಯಾ ಲವಕೋವಾ (ಜೆಕ್ ಗಣರಾಜ್ಯ)-ಪೆಂಗ್ ಶುಯಿ (ಚೀನ) ಜೋಡಿಗೆ 6-7 (3), 6-3, 6-3 ಅಂತರದ ಸೋಲುಣಿಸಿದರು. ಇದ ರೊಂದಿಗೆ “ಮೆಲ್ಬರ್ನ್ ಪಾರ್ಕ್’ ನಲ್ಲಿ ಬೆಥನಿ-ಸಫರೋವಾ ಜೋಡಿಯ ಅಜೇಯ ಅಭಿಯಾನ 12 ಪಂದ್ಯ ಗಳಿಗೆ ವಿಸ್ತರಿಸಿತು. ಇದೊಂದು ದಾಖಲೆ. ಇವರಿಬ್ಬರು 2015ರಲ್ಲೂ ಇಲ್ಲಿ ಚಾಂಪಿಯನ್ ಆಗಿದ್ದರು. ಆದರೆ ಕಳೆದ ವರ್ಷ ಈ ಜೋಡಿ ಕಣಕ್ಕಿಳಿದಿರಲಿಲ್ಲ. ಸಫರೋವಾ ಗಾಯಾಳಾದದ್ದೇ ಇದಕ್ಕೆ ಕಾರಣ.
ಇದು ಬೆಥನಿ ಮಾಟೆಕ್ ಸ್ಯಾಂಡ್ಸ್- ಲೂಸಿ ಸಫರೋವಾ ಜತೆಯಾಗಿ ಗೆದ್ದ 4ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ. 2015ರ ಫ್ರೆಂಚ್ ಓಪನ್ ಹಾಗೂ ಕಳೆದ ವರ್ಷದ ಯುಎಸ್ ಓಪನ್ ಕೂಟದಲ್ಲೂ ಇವರು ಚಾಂಪಿಯನ್ ಆಗಿದ್ದರು.
ಶುಕ್ರವಾರದ ಸಾಧನೆಗಾಗಿ ಈ ಆಟಗಾರ್ತಿಯರು 660,000 ಆಸ್ಟ್ರೇಲಿಯನ್ ಡಾಲರ್ ಮೊತ್ತವನ್ನು ಸಮನಾಗಿ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.