ವನಿತಾ ಫುಟ್ಬಾಲ್: ಇಂಡೋನೇಶ್ಯವನ್ನು ಮಣಿಸಿದ ಭಾರತ
Team Udayavani, Apr 4, 2019, 6:00 AM IST
ಹೊಸದಿಲ್ಲಿ: ಮ್ಯಾನ್ಮಾರ್ನಲ್ಲಿ ಟೋಕಿಯೊ ಒಲಿಂಪಿಕ್ಸ್ಗಾಗಿ ನಡೆಯುತ್ತಿರುವ ವನಿತಾ ಫುಟ್ಬಾಲ್ ದ್ವಿತೀಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು ಇಂಡೋನೇಶ್ಯ ವಿರುದ್ಧ 2-0 ಗೋಲುಗಳಿಂದ ಗೆಲುವು ದಾಖಲಿಸಿದರು. ಗ್ರೇಸ್ ಡಾಂಗೆ¾„ 27ನೇ ಮತ್ತು 67ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.
“ಅರ್ಹತಾ ಕೂಟವನ್ನು ಗೆಲುವಿನೊಂದಿಗೆ ಆರಂಭಿಸಬೇಕು ಎಂಬ ನಮ್ಮ ಯೋಜನೆ ಸಾಕಾರಗೊಂಡಿದೆ. ಇಂಡೋನೇಶ್ಯ ರಕ್ಷಣಾತ್ಮಕ ಆಟವಾಡಿ ಬಲಿಷ್ಠ ಎದುರಾಳಿ ಎಂಬುದನ್ನು ತೋರಿಸಿಕೊಟ್ಟಿತು. ಆದರೆ ಅವರ ರಕ್ಷಣಾ ಗೋಡೆಯನ್ನು ಹೊಡೆದು ನಾವು ಗೋಲು ಬಾರಿಸುವಲ್ಲಿ ಯಶಸ್ವಿಯಾದೆವು. ಇದೇ ಲಯವನ್ನು ಮುಂದುವರಿಸಿ ಕೂಟದಲ್ಲಿ ಅಜೇಯರಾಗಿ ಉಳಿಯಬೇಕಾಗಿದೆ’ ಎಂದು ಭಾರತ ತಂಡದ ಕೋಚ್ ಮೈಮೋಲ್ ರಾಖೀ ಹೇಳಿದ್ದಾರೆ. ಎಪ್ರಿಲ್ 6ರಂದು ಭಾರತ-ನೇಪಾಲ ಮುಖಾಮುಖಿಯಾಗಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.