ವನಿತಾ ಹಾಕಿ: ಭಾರತ ಸೆಮಿಫೈನಲ್ ಪ್ರವೇಶ
Team Udayavani, Aug 28, 2018, 2:55 PM IST
ಜಕಾರ್ತಾ: ಭಾರತದ ವನಿತಾ ಹಾಕಿ ತಂಡ ಏಶ್ಯಾಡ್ ಪಂದ್ಯಾವಳಿಯ ಸೆಮಿಫೈನಲಿಗೆ ಲಗ್ಗೆ ಇರಿಸಿದೆ. ಸೋಮವಾರದ ಲೀಗ್ ಪಂದ್ಯದಲ್ಲಿ ಥಾಯ್ಲೆಂಡ್ಗೆ 5-0 ಗೋಲುಗಳಿಂದ ಸೋಲುಣಿಸುವ ಮೂಲಕ ರಾಣಿ ರಾಮ್ಪಾಲ್ ಬಳಗ ಪದಕದ ನಿರೀಕ್ಷೆಯೊಂದನ್ನು ಮೂಡಿಸಿದೆ.
ಮೊದಲೆರಡು ಕ್ವಾರ್ಟರ್ಗಳಲ್ಲಿ ಎರಡೂ ತಂಡಗಳ ಪ್ರಬಲ ಹೋರಾಟದಿಂದಾಗಿ ಯಾವುದೇ ಗೋಲು ದಾಖಲಾಗಿರಲಿಲ್ಲ. 3ನೇ ಕ್ವಾರ್ಟರ್ನಲ್ಲಿ ರಾಣಿ ರಾಮ್ಪಾಲ್ ಗೋಲು ಖಾತೆ ತೆರೆದರು. ಕೊನೆಯ ಅವಧಿಯ ಆಟಕ್ಕೆ ತೆರಳುವಾಗ ಭಾರತ ಕೇವಲ 1-0 ಮುನ್ನಡೆಯಲ್ಲಿತ್ತು.
“ಬಿ’ ವಿಭಾಗದ ಎಲ್ಲ 4 ಪಂದ್ಯಗಳನ್ನು ಗೆದ್ದ ಭಾರತ 12 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ನಾಕೌಟ್ಗೆ ಲಗ್ಗೆ ಇರಿಸಿದೆ. ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾ ದ್ವಿತೀಯ ಸ್ಥಾನಿಯಾಗಿ ಸೆಮಿ ತಲುಪಿದೆ. ದಕ್ಷಿಣ ಕೊರಿಯಾವನ್ನು ಭಾರತ 4-1 ಗೋಲುಗಳಿಂದ ಮಣಿಸಿತ್ತು.
ರಾಣಿ ಹ್ಯಾಟ್ರಿಕ್ ಸಾಧನೆ
ಆದರೆ ಅಂತಿಮ ಕ್ವಾರ್ಟರ್ನಲ್ಲಿ 4 ಗೋಲು ಬಾರಿಸುವ ಮೂಲಕ ವನಿತೆಯರು ತಮ್ಮ ಪಾರಮ್ಯ ಮೆರೆದರು. ರಾಣಿ ರಾಮ್ಪಾಲ್ ಅವರ ಹ್ಯಾಟ್ರಿಕ್ ಈ ಅವಧಿಯ ಆಕರ್ಷಣೆ ಆಗಿತ್ತು. ಅವರು 2ನೇ ಹಾಗೂ 5ನೇ ಗೋಲು ಬಾರಿಸಿ ಈ ಸಾಧನೆಗೈದರು. ಮೋನಿಕಾ ಮತ್ತು ನವಜ್ಯೋತ್ ಕೌರ್ ಉಳಿದೆರಡು ಗೋಲು ಹೊಡೆದರು. ಇದರೊಂದಿಗೆ ಈ ಕೂಟದಲ್ಲಿ ಭಾರತದ ವನಿತೆಯರು ಒಟ್ಟು 38 ಗೋಲು ಬಾರಿಸಿದಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.