ವನಿತಾ ಹಾಕಿ ಸರಣಿ: ಸೋಲುವ ಪಂದ್ಯ ಡ್ರಾ ಮಾಡಿಕೊಂಡ ಭಾರತ
Team Udayavani, Apr 10, 2019, 6:30 AM IST
ಕೌಲಾಲಂಪುರ: ಮಲೇಶ್ಯ ವಿರುದ್ಧದ 3ನೇ ಹಾಕಿ ಟೆಸ್ಟ್ ಪಂದ್ಯದಲ್ಲಿ ಸೋಲುವ ಹಂತದಲ್ಲಿದ್ದ ಭಾರತದ ವನಿತೆಯರು ಕೊನೆ ಗಳಿಗೆಯಲ್ಲಿ ದಿಟ್ಟ ಆಟವಾಡಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸೋಮವಾರ ನಡೆದ ಪಂದ್ಯದಲ್ಲಿ 2-4 ಹಿನ್ನಡೆಯಲ್ಲಿದ್ದ ಭಾರತ ಅಂತಿಮ ಕ್ವಾರ್ಟರ್‌ನಲ್ಲಿ ಆಕ್ರಮಣ ಆಟಕ್ಕೆ ಮರಳಿ 2 ಗೋಲು ಹೊಡೆದು ಸೋಲಿನಿಂದ ಪಾರಾಯಿತು.
2-0 ಮುನ್ನಡೆ
13ನೇ ನಿಮಿಷದಲ್ಲಿ ನವಜೋತ್ ಕೌರ್ ಮತ್ತು 22ನೇ ನಿಮಿಷದಲ್ಲಿ ನವನೀತ್ ಕೌರ್ ಗೋಲು ಹೊಡೆದು ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದರು. ಆದರೆ ಈ ಮುನ್ನಡೆ ಯನ್ನು ಹೆಚ್ಚು ಹೊತ್ತು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿರಂತರ ತಪ್ಪುಗಳನ್ನು ಮಾಡಿ ಮಲೇಶ್ಯಕ್ಕೆ ಗೋಲು ಹೊಡೆ ಯುವ ಅವಕಾಶ ಕಲ್ಪಿಸಿತು.
26ನೇ ನಿಮಿಷದಲ್ಲಿ ಮಲೇಶ್ಯದ ಗುರ್‌ದೀಪ್ ಕಿರಣ್‌ದೀಪ್ ಗೋಲು ಬಾರಿಸಿದರು. ಮೊದಲೆರಡು ಪಂದ್ಯ ಗಳಲ್ಲಿ 0-3, 0-5 ಅಂತರದಿಂದ ಸೋತಿದ್ದ ಮಲೇಶ್ಯ, ಈ ಕೂಟದಲ್ಲಿ ಮೊದಲ ಗೋಲು ಬಾರಿಸಿ ಸಂಭ್ರಮಿ ಸಿತು. ಇದರಿಂದ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡ ಮಲೇಶ್ಯ ಇನ್ನೊಂದು ಗೋಲು ಹೊಡೆದು 2-2 ಸಮಬಲ ಸಾಧಿಸಿತು. ಈ ಗೋಲನ್ನು ನುರೈನಿ ರಶೀದ್ ಹೊಡೆದರು.
ಸಮಬಲದ ಬಳಿಕ ಸಿಕ್ಕಿದ ಇನ್ನೆರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಮಲೇಶ್ಯ ಯಶಸ್ವಿಗೊಳಿಸಿತು. ಮುನ್ನಡೆ 4-2ಕ್ಕೆ ಏರಿತು.
ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ಮತ್ತೆ ಆಕ್ರಮಣ ಆಟವಾಡಿತು. ನವನೀತ್ ಕೌರ್ (45ನೇ ನಿಮಿಷ) ಮತ್ತು ಲಾಲ್ರೆಮಿÕಯಾಮಿ (54ನೇ ನಿಮಿಷ) ಗೋಲು ಹೊಡೆದು ಪಂದ್ಯ ಡ್ರಾ ಮಾಡುವಲ್ಲಿ ಯಶಸ್ವಿಯಾದರು.
4ನೇ ಟೆಸ್ಟ್ ಪಂದ್ಯ ಬುಧವಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.