ಭಾರತಕ್ಕೆ ಇಂದು ಅಂತಿಮ ಅವಕಾಶ
Team Udayavani, Jul 29, 2018, 11:35 AM IST
*ಒಂದೂ ಗೆಲುವು ಕಾಣದ ಭಾರತಕ್ಕೆ ಇಂದು ಅಮೆರಿಕ ಎದುರಾಳಿ * ಗೆದ್ದರೆ ಅಥವಾ ಕನಿಷ್ಠ ಡ್ರಾ ಸಾಧಿಸಿದರಷ್ಟೇ ನಾಕೌಟ್ ಅವಕಾಶ
ಲಂಡನ್: ಇಂಗ್ಲೆಂಡ್ ವಿರುದ್ಧ ಗೆಲುವನ್ನು ಕೈಚೆಲ್ಲಿ, ಅಷ್ಟೇನೂ ಪ್ರಬಲವಲ್ಲದ ಅಯರ್‌ಲ್ಯಾಂಡ್ ವಿರುದ್ಧ ಆಘಾತಕಾರಿ ಸೋಲುಂಡ ಭಾರತೀಯ ವನಿತೆಯರ ವಿಶ್ವ ಕಪ್ ಹಾಕಿ ಭವಿಷ್ಯ ರವಿವಾರ ನಿರ್ಧಾರವಾಗಲಿದೆ. “ಬಿ’ ಗ್ರೂಪ್‌ನ ಅಂತಿಮ ಲೀಗ್ ಪಂದ್ಯದಲ್ಲಿ ರಾಣಿ ರಾಮ್‌ಪಾಲ್ ಬಳಗ ಅಮೆರಿಕವನ್ನು ಎದುರಿಸಲಿದೆ. ನಾಕೌಟ್ ಪ್ರವೇಶಿಸಲು ಭಾರತದ ಪಾಲಿಗೆ ಇದು ಮಹತ್ವದ ಪಂದ್ಯವಾಗಿದ್ದು, ಗೆಲುವು ಅಥವಾ ಕನಿಷ್ಠ ಡ್ರಾ ಅನಿವಾರ್ಯವಾಗಿದೆ. ಆದರೆ ಅಮೆರಿಕ ವಿರುದ್ಧ ಎಡವಿದರೆ ಭಾರತ ಕೂಟದಿಂದ ಹೊರಬೀಳಲಿದೆ.
ಕ್ರಾಸ್-ಓವರ್ ಸ್ಟೇಜ್
4 ವಿಭಾಗಗಳ ಅಗ್ರ ತಂಡಗಳಷ್ಟೇ ಕ್ವಾರ್ಟರ್ ಫೈನಲ್‌ಗೆ ನೇರ ಅರ್ಹತೆ ಸಂಪಾದಿಸುತ್ತವೆ. ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದ ತಂಡ ಕೂಟದಿಂದ ಹೊರಬೀಳಲಿದೆ. 2ನೇ ಹಾಗೂ 3ನೇ ಸ್ಥಾನ ಪಡೆದ ತಂಡಗಳ ನಡುವೆ ಇನ್ನೊಂದು ಸುತ್ತಿನ ಹಣಾಹಣಿ ಏರ್ಪಡಲಿದೆ. ಇದಕ್ಕೆ “ಕ್ರಾಸ್-ಓವರ್ ಸ್ಟೇಜ್’ ಎಂದು ಹೆಸರಿಸಲಾಗಿದೆ. ಇದರಂತೆ ಪ್ರತಿಯೊಂದು ವಿಭಾಗದಲ್ಲಿ 2ನೇ ಹಾಗೂ 3ನೇ ಸ್ಥಾನ ಪಡೆದ ತಂಡಗಳು ಮತ್ತೂಂದು ಸುತ್ತಿನ ಕದನಕ್ಕೆ ಅಣಿಯಾಗಬೇಕಿದೆ. ಇಲ್ಲಿ ಗೆದ್ದರೆ ಕ್ವಾರ್ಟರ್ ಫೈನಲ್ ಬಾಗಿಲು ತೆರೆಯುತ್ತದೆ. ಸೋತರೆ ನಿರ್ಗಮನದ ಹಾದಿ ಎದುರಾಗುತ್ತದೆ. ಉದಾಹರಣೆಗೆ, ಭಾರತ “ಬಿ’ ವಿಭಾಗದಲ್ಲಿ 2ನೇ ಸ್ಥಾನ ಪಡೆದರೆ “ಎ’ ವಿಭಾಗದ ತೃತೀಯ ಸ್ಥಾನಿಯೊಂದಿಗೆ ಸೆಣಸಬೇಕು. ಭಾರತ ಗ್ರೂಪ್‌ನಲ್ಲಿ 3ನೇ ಸ್ಥಾನ ಪಡೆದರೆ “ಎ’ ವಿಭಾಗದ ದ್ವಿತೀಯ ಸ್ಥಾನಿ ತಂಡದ ಜತೆ ಕಾದಾಡಬೇಕು. ಗೆದ್ದರಷ್ಟೇ ಕ್ವಾರ್ಟರ್ ಫೈನಲ್ ಟಿಕೆಟ್ ಸಿಗುತ್ತದೆ.
“ಬಿ’ ವಿಭಾಗದಲ್ಲಿ ಸದ್ಯ ಎರಡೂ ಪಂದ್ಯ ಗೆದ್ದಿರುವ ಅಯರ್‌ಲ್ಯಾಂಡ್ ಅಗ್ರಸ್ಥಾನದಲ್ಲಿದೆ (6 ಅಂಕ). ಇಂಗ್ಲೆಂಡ್ ದ್ವಿತೀಯ ಸ್ಥಾನದಲ್ಲಿದೆ (2). ಒಂದು ಸೋಲು ಮತ್ತು ಡ್ರಾ ಸಾಧಿಸಿರುವ ಭಾರತ ಮತ್ತು ಅಮೆರಿಕ ಕೇವಲ ಒಂದಂಕವನ್ನಷ್ಟೇ ಹೊಂದಿವೆ. ಗೋಲು ವ್ಯತ್ಯಾಸದ ಪ್ರಕಾರ ಭಾರತ 3ನೇ ಸ್ಥಾನ, ಅಮೆರಿಕ ಅಂತಿಮ ಸ್ಥಾನದಲ್ಲಿದೆ. ರವಿವಾರ ಡ್ರಾ ಸಾಧಿಸಿದರೂ ಭಾರತಕ್ಕೇನೂ ಆತಂಕವಿಲ್ಲ. ಆದರೆ ಗೆದ್ದು ಕ್ರಾಸ್-ಓವರ್ ಸ್ಟೇಜ್‌ನಲ್ಲಿ ಸೆಣಸುವುದು ಮರ್ಯಾದೆ. “ಹೌದು, ನಮ್ಮ ಕಾರ್ಯತಂತ್ರದ ಬಗ್ಗೆ ಯಾವುದೇ ತಕರಾರಿಲ್ಲ. ತಂಡದ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. ಆದರೆ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸದಿರುವುದೇ ಹಿನ್ನಡೆಗೆ ಕಾರಣ. ಅಮೆರಿಕ ವಿರುದ್ಧ ಇದಕ್ಕೆ ಅವಕಾಶ ಕೊಡಬಾರದು’ ಎಂದಿದ್ದಾರೆ ಕೋಚ್ ಸೋರ್ಡ್ ಮರಿನ್.
ಪೆನಾಲ್ಟಿ ವೈಫಲ್ಯ
ಭಾರತ ಅಯರ್‌ಲ್ಯಾಂಡ್ ವಿರುದ್ಧ ಪೆನಾಲ್ಟಿ ಕಾರ್ನರ್ ವೈಫಲ್ಯದಿಂದ ತತ್ತರಿಸಿತ್ತು. ಹೀಗಾಗಿ ಗೆಲುವಿನ ಅವಕಾಶ ಕಳೆದುಕೊಂಡಿತ್ತು. ಇಲ್ಲಿ ಲಭಿಸಿದ 7 ಪೆನಾಲ್ಟಿ ಅವಕಾಶಗಳಲ್ಲಿ ಭಾರತಕ್ಕೆ ಒಂದನ್ನೂ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ. ಅಮೆರಿಕ ವಿರುದ್ಧ ಈ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.