ವನಿತಾ ವಿಶ್ವಕಪ್ ಹಾಕಿ ನೆದರ್ಲೆಂಡ್ಸ್ ಫೇವರಿಟ್; ಭಾರತಕ್ಕೆ ಚಾಲೆಂಜ್
Team Udayavani, Jul 1, 2022, 6:51 AM IST
ಟೆರಸ್ಸ (ಸ್ಪೇನ್): ವನಿತಾ ವಿಶ್ವಕಪ್ ಹಾಕಿ ಪಂದ್ಯಾವಳಿ ಶುಕ್ರವಾರದಿಂದ ಜು. 17ರ ತನಕ ಸ್ಪೇನ್ ಮತ್ತು ನೆದರ್ಲೆಂಡ್ಸ್‌ನ ಜಂಟಿ ಆತಿಥ್ಯದಲ್ಲಿ ಸಾಗಲಿದೆ. 16 ತಂಡಗಳ ಈ ಸಮರಲ್ಲಿ ಭಾರತವೂ ಒಂದು. ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದಿಂದ ವಂಚಿತವಾದ ಭಾರತೀಯ ಆಟ ಗಾರ್ತಿಯರಿಗೆ ಇದೊಂದು ಸವಾ ಲಾಗಿದ್ದು, ಪೋಡಿಯಂ ಏರುವಲ್ಲಿ ಸಫಲರಾದಾರೇ ಎಂಬುದೊಂದು ದೂರದ ನಿರೀಕ್ಷೆ.
ತಂಡಗಳನ್ನು ಒಟ್ಟು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವಿಭಾಗದ ಅಗ್ರ ತಂಡ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ. 2ನೇ ಹಾಗೂ 3ನೇ ಸ್ಥಾನ ಪಡೆದ ತಂಡಗಳು “ಕ್ರಾಸ್ ಓವರ್’ನಲ್ಲಿ ಅದೃಷ್ಟ ಪರೀಕ್ಷಿಸಬೇಕಿದೆ.
ಕ್ರಾಸ್ ಓವರ್ :
ಕ್ರಾಸ್ ಓವರ್ನಲ್ಲಿ “ಎ’ ಗುಂಪಿನ ದ್ವಿತೀಯ ಸ್ಥಾನಿ “ಡಿ’ ವಿಭಾಗದ ತೃತೀಯ ಸ್ಥಾನಿ ವಿರುದ್ಧ; “ಎ’ ವಿಭಾಗದ ತೃತೀಯ ಸ್ಥಾನಿ “ಡಿ’ ವಿಭಾಗದ ದ್ವಿತೀಯ ಸ್ಥಾನಿ ವಿರುದ್ಧ ಆಡಬೇಕಿದೆ. ಇದೇ ಮಾನದಂಡ “ಬಿ’ ಹಾಗೂ “ಸಿ’ ವಿಭಾಗದ ತಂಡಗಳಿಗೂ ಅನ್ವಯಿಸುತ್ತದೆ. ಇಲ್ಲಿ ಗೆದ್ದ 4 ತಂಡಗಳು ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಲಿವೆ.
ಸವಿತಾ ನಾಯಕಿ :
ರಾಣಿ ರಾಮ್‌ಪಾಲ್ ಗೈರಲ್ಲಿ ಗೋಲ್‌ಕೀಪರ್ ಸವಿತಾ ಪುನಿಯ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. “ಬಿ’ ವಿಭಾಗದಲ್ಲಿರುವ ಭಾರತ ತಂಡ ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಚೀನ ಸವಾಲನ್ನು ಎದುರಿಸಲಿದೆ.
ಭಾರತದ ವನಿತೆಯರು ಈವರೆಗೆ ವಿಶ್ವಕಪ್‌ನಲ್ಲಿ ಪದಕ ಗೆದ್ದಿಲ್ಲ. 1974ರಲ್ಲಿ 4ನೇ ಸ್ಥಾನ ಸಂಪಾದಿಸಿದ್ದೇ ಅತ್ಯುತ್ತಮ ಸಾಧನೆ. ಆದರೆ ಟೋಕಿಯೊ ಒಲಿಂಪಿಕ್ಸ್ ಸಾಧನೆ ಎನ್ನುವುದು ಭಾರತದ ಮೇಲೆ ಹೆಚ್ಚಿನ ಭರವಸೆ ಇರಿಸಿದೆ. ಹಾಗೆಯೇ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅತ್ಯುನ್ನತ 6ನೇ ಸ್ಥಾನ ಸಂಪಾದಿಸಿದ ಹಿರಿಮೆಯೂ ನೆರವಾಗಬೇಕಿದೆ. ಭಾರತದ ಎಲ್ಲ ಲೀಗ್ ಪಂದ್ಯಗಳು ಆಮ್‌ಸ್ಟೆಲ್ವಿನ್‌ನಲ್ಲಿ ನಡೆಯಲಿವೆ.
ನೆದರ್ಲೆಂಡ್ಸ್ ಫೇವರಿಟ್ :
ಎಫ್ಐಎಚ್ ಪ್ರೊ ಲೀಗ್ ಚಾಂಪಿಯನ್, 8 ಬಾರಿಯ ವಿಶ್ವ ಚಾಂಪಿಯನ್ ನೆದರ್ಲೆಂಡ್ಸ್ ಮತ್ತೆ ಈ ಕೂಟದ ನೆಚ್ಚಿನ ತಂಡವಾಗಿದೆ. ಈ ಬಾರಿ ಗೆದ್ದರೆ ಅದು ಪ್ರಶಸ್ತಿಯ ಹ್ಯಾಟ್ರಿಕ್ ಸಾಧಿಸಿದಂತಾಗುತ್ತದೆ.
ಭಾರತದ ಪಂದ್ಯಗಳು :
ದಿನಾಂಕ ಎದುರಾಳಿ
ಜು. 3 ಇಂಗ್ಲೆಂಡ್
ಜು. 5 ಚೀನ
ಜು. 7 ನ್ಯೂಜಿಲ್ಯಾಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.