![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Mar 14, 2024, 12:26 AM IST
ಹೊಸದಿಲ್ಲಿ: ವನಿತಾ ಪ್ರೀಮಿಯರ್ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್‌ಗೆ ಲಗ್ಗೆ ಹಾಕಿದೆ. ಬುಧವಾರದ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ 7 ವಿಕೆಟ್ ಅಂತರದಿಂದ ಗುಜರಾತ್‌ಗೆ ಸೋಲುಣಿಸಿ ತನ್ನ ಅಂಕವನ್ನು 12ಕ್ಕೆ ಏರಿಸಿಕೊಂಡಿತು.
ಶುಕ್ರವಾರದ ಎಲಿಮಿನೇಟರ್ ಪಂದ್ಯ ದಲ್ಲಿ ಮುಂಬೈ-ಆರ್‌ಸಿಬಿ ಮುಖಾ ಮುಖೀ ಆಗಲಿವೆ. ಇಲ್ಲಿ ಗೆದ್ದ ತಂಡ ರವಿವಾರದ ಫೈನಲ್‌ನಲ್ಲಿ ಡೆಲ್ಲಿಯನ್ನು ಎದುರಿಸಲಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ 9 ವಿಕೆಟಿಗೆ ಕೇವಲ 126 ರನ್ ಗಳಿಸಿತು. ಜವಾಬಿತ್ತ ಡೆಲ್ಲಿ 13.1 ಓವರ್‌ಗಳಲ್ಲಿ 3 ವಿಕೆಟಿಗೆ 129 ರನ್ ಬಾರಿಸಿತು. ಚೇಸಿಂಗ್ ವೇಳೆ ಶಫಾಲಿ ವರ್ಮ 37 ಎಸೆತಗಳಿಂದ 71 ರನ್ (7 ಬೌಂಡರಿ, 5 ಸಿಕ್ಸರ್), ಜೆಮಿಮಾ ರೋಡ್ರಿಗಸ್ ಅಜೇಯ 38 ರನ್ ಹೊಡೆದರು.
ಮರಿಜಾನ್ ಕಾಪ್, ಶಿಖಾ ಪಾಂಡೆ ಮತ್ತು ಮಿನ್ನು ಮಣಿ ಗುಜರಾತ್‌ಗೆ ಕಂಟಕವಾಗಿ ಪರಿಣಮಿಸಿದರು. ಮೂವರೂ ತಲಾ 2 ವಿಕೆಟ್ ಉರು ಳಿಸಿದರು. 42 ರನ್ ಮಾಡಿದ ಭಾರತಿ ಫೂಲ್ಮಾಲಿ ಅವರದು ಸರ್ವಾಧಿಕ 42 ರನ್ ಆಗಿತ್ತು.
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.