Women’s Premier League 2025;ಇಂದು ಬೆಂಗಳೂರಿನಲ್ಲಿ ಹರಾಜು: RCBಯಲ್ಲಿ 4ಸ್ಥಾನ ಖಾಲಿ
Team Udayavani, Dec 15, 2024, 10:01 AM IST
ಬೆಂಗಳೂರು: ಸೌದಿ ಅರೆಬಿಯಾದ ಜೆಡ್ಡಾದಲ್ಲಿ ಐಪಿಎಲ್ ಹರಾಜು ನಡೆದ ಕೆಲವೇ ವಾರಗಳಲ್ಲಿ ಬಿಸಿಸಿಐ ಮತ್ತೂಂದು ಹರಾಜು ಪ್ರಕ್ರಿಯೆಗೆ ಅಣಿಯಾಗಿದೆ. ಬೆಂಗಳೂರಿನ “ಐಟಿಸಿ ಗಾಡೇìನಿಯಾ ಹೊಟೇಲ್’ನಲ್ಲಿ ರವಿವಾರ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜು ನಡೆಯಲಿದೆ. ಹರಾಜು ಕಣದಲ್ಲಿ ಒಟ್ಟು 120 ಆಟಗಾರ್ತಿಯರಿದ್ದು, ಇದರಲ್ಲಿ 91 ಮಂದಿ ಭಾರತೀಯರು, 29 ಮಂದಿ ವಿದೇಶಿಯರು ಸೇರಿದ್ದಾರೆ.
ಇದೊಂದು ಸಣ್ಣ ಮಟ್ಟದ ಹರಾಜು. ರಾಯಲ್ ಚಾಲೆಂಜರ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ ಮತ್ತು ಗುಜರಾತ್ ಜೈಂಟ್ಸ್- ಹೀಗೆ 5 ತಂಡಗಳು 19 ಸ್ಥಾನ ತುಂಬಿಸಲು ಪೈಪೋಟಿ ನಡೆಸಲಿವೆ. ಡಬ್ಲ್ಯುಪಿಎಲ್ ಹರಾಜಿಗಾಗಿ ಒಟ್ಟು 400 ಆಟಗಾರ್ತಿಯರು ಹೆಸರು ನೋಂದಾಯಿಸಿದ್ದರು. ಅದರಲ್ಲಿ 120 ಮಂದಿಯನ್ನಷ್ಟೇ ಅಂತಿಮಗೊಳಿಸಲಾಗಿದೆ.
ಗುಜರಾತ್ ಬಳಿ ಗರಿಷ್ಠ ಮೊತ್ತ
ಹರಾಜಿನಲ್ಲಿ ಪಾಲ್ಗೊಳ್ಳಲಿರುವ ತಂಡಗಳಲ್ಲಿ ಗುಜರಾತ್ ಜೈಂಟ್ಸ್ ಬಳಿ ಗರಿಷ್ಠ 4.4 ಕೋಟಿ ರೂ. ಮೊತ್ತವಿದೆ. ಕಳೆದ ಬಾರಿಯ ಚಾಂಪಿಯನ್ ಆರ್‌ಸಿಬಿ ತಂಡ 3.5 ಕೋಟಿ ರೂ. ಹೊಂದಿದೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ 2.5 ಕೋಟಿ ರೂ., ಯುಪಿ ವಾರಿಯರ್ 3.9 ಕೋಟಿ ರೂ. ಮತ್ತು ಮುಂಬೈ ಇಂಡಿಯನ್ಸ್ 2.65 ಕೋಟಿ ರೂ. ಹಣವನ್ನು ಹರಾಜಿಗಾಗಿ ಮೀಸಲಿಟ್ಟಿದೆ.
13 ವರ್ಷದ ಆಟಗಾರ್ತಿ
ದಿಲ್ಲಿಯ ಎಡಗೈ ವೇಗಿ, 13 ವರ್ಷದ ಅಂಶು ನಗರ್ ಹರಾಜು ಕಣದಲ್ಲಿರುವ ಅತೀ ಕಿರಿಯ ಆಟಗಾರ್ತಿ. 34 ವರ್ಷದ ಆಸ್ಟ್ರೇಲಿಯನ್ ಬ್ಯಾಟರ್ ಲಾರಾ ಹ್ಯಾರಿಸ್ ಹಿರಿಯ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಮೂವರಿಗೆ ಗರಿಷ್ಠ 50 ಲಕ್ಷ ರೂ. ಮೂಲಬೆಲೆ
ಡಬ್ಲ್ಯುಪಿಎಲ್ ಮಿನಿ ಹರಾಜಿನಲ್ಲಿ 50 ಲಕ್ಷ ರೂ. ಗರಿಷ್ಠ ಮೂಲಬೆಲೆಯಾಗಿದೆ. ಈ ಸಾಲಿನಲ್ಲಿ ವೆಸ್ಟ್ ಇಂಡೀಸ್‌ನ ಡಿಯಾಂಡ್ರಾ ಡಾಟಿನ್, ಇಂಗ್ಲೆಂಡ್‌ನ ಹೀತರ್ ನೈಟ್ ಮತ್ತು ದಕ್ಷಿಣ ಆಫ್ರಿಕಾದ ಲಿಜೆಲ್ ಲೀ ಕಾಣಿಸಿಕೊಂಡಿದ್ದಾರೆ.
ಆರ್‌ಸಿಬಿಯಲ್ಲಿ 4 ಸ್ಥಾನ ಖಾಲಿ
ಹಾಲಿ ಚಾಂಪಿಯನ್ ಆರ್‌ಸಿಬಿ ಈಗಾಗಲೇ ನಾಯಕಿ ಸ್ಮತಿ ಮಂಧನಾ, ಎಲ್ಲಿಸ್ ಪೆರ್ರಿ, ಶ್ರೇಯಾಂಕಾ ಪಾಟೀಲ್, ಸೋಫಿ ಡಿವೈನ್, ಡೇನಿಯಲ್ ವ್ಯಾಟ್ (ಯುಪಿಯಿಂದ ಖರೀದಿ) ಮತ್ತಿತರರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಉಳಿದ ಕೇವಲ 4 ಭಾರತೀಯ ಆಟಗಾರ್ತಿಯರ ಸ್ಥಾನ ತುಂಬಿಸಲು ಬಿಡ್ಡಿಂಗ್ ನಡೆಸಲಿದೆ. ಉಳಿದಂತೆ ಮುಂಬೈ 4, ಡೆಲ್ಲಿ 4, ಯುಪಿ 3, ಗುಜರಾತ್ 4 ಸ್ಥಾನ ಭರ್ತಿಗಾಗಿ ಎದುರು ನೋಡುತ್ತಿವೆ.
ಮಧ್ಯಾಹ್ನ 3 ಗಂಟೆಗೆ ಹರಾಜು ಆರಂಭವಾಗಲಿದೆ. ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.