Women’s Premier League:ಇಂದು ಹರಾಜು; ರೇಸ್‌ನಲ್ಲಿದ್ದಾರೆ 165 ಆಟಗಾರ್ತಿಯರು
104 ಭಾರತೀಯರು, 61 ವಿದೇಶಿಯರು ಕೇವಲ 30 ಸ್ಲಾಟ್ ಬಾಕಿ
Team Udayavani, Dec 9, 2023, 6:45 AM IST
ಮುಂಬಯಿ: ಎರಡನೇ ವನಿತಾ ಪ್ರೀಮಿಯರ್ ಲೀಗ್‌ಗಾಗಿ ಶನಿವಾರ ಮುಂಬಯಿಯಲ್ಲಿ ಮಿನಿ ಹರಾಜು ನಡೆಯಲಿದೆ. ಇದರಲ್ಲಿ 165 ಆಟಗಾರ್ತಿಯರ ಭವಿಷ್ಯ ನಿರ್ಧಾರವಾಗಲಿದೆ.
2024ರ ಲೀಗ್‌ಗಾಗಿ 5 ಫ್ರಾಂಚೈಸಿ ಗಳು 60 ಆಟಗಾರ್ತಿಯರನ್ನು ಉಳಿ ಸಿಕೊಂಡಿವೆ. ಇದರಲ್ಲಿನ ವಿದೇಶಿ ಆಟ ಗಾರ್ತಿಯರ ಸಂಖ್ಯೆ 21. ಖಾಲಿ ಉಳಿದಿರುವ ಸ್ಥಾನಗಳನ್ನು ಈ ಹರಾಜಿ ನಲ್ಲಿ ಭರ್ತಿಗೊಳಿಸಬೇಕಿದೆ.
ಪ್ರತೀ ಫ್ರಾಂಚೈಸಿ ಹೊಂದಿರಬೇಕಾದ ಕ್ರಿಕೆಟಿಗರ ಸಂಖ್ಯೆ 18 ಮಾತ್ರ. ಇದರಲ್ಲಿ 6 ಮಂದಿ ವಿದೇಶಿಯರು. ಇದರಂತೆ ಶನಿವಾರದ ಹರಾಜಿನಲ್ಲಿ ಖಾಲಿ ಉಳಿದಿರುವ ಸ್ಲಾಟ್‌ಗಳ ಸಂಖ್ಯೆ ಕೇವಲ 30. ಇದರಲ್ಲಿ 9 ಸ್ಥಾನಗಳು ವಿದೇಶಿಯರಿಗೆ ಮೀಸಲು.
ಇವರೆಲ್ಲ 10 ಲಕ್ಷ ರೂ.ನಿಂದ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಗರಿಷ್ಠ 50 ಲಕ್ಷ ರೂ. ಮೂಲಬೆಲೆ ಹೊಂದಿರುವವರೆಂದರೆ ಡಿಯಾಂಡ್ರಾ ಡಾಟಿನ್ ಮತ್ತು ಕಿಮ್ ಗಾರ್ತ್. ಉಳಿದಂತೆ ಅನ್ನಾಬೆಲ್ ಸದರ್‌ಲ್ಯಾಂಡ್, ಜಾರ್ಜಿಯಾ ವೇರ್‌ಹ್ಯಾಮ್, ಶಬ್ನೀಂ ಇಸ್ಮಾಯಿಲ್ ಮತ್ತು ಆ್ಯಮಿ ಜೋನ್ಸ್ 40 ಲಕ್ಷ ರೂ. ಮೂಲಬೆಲೆಯ ವ್ಯಾಪ್ತಿಯಲ್ಲಿದ್ದಾರೆ.
ಉಳಿದವರು ಗರಿಷ್ಠ 30 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಈ ಯಾದಿಯಲ್ಲಿರುವ ಭಾರತೀಯ ರೆಂದರೆ ವೇದಾ ಕೃಷ್ಣಮೂರ್ತಿ, ಪೂನಂ ರಾವತ್, ಸುಷ್ಮಾ ವರ್ಮಾ, ಏಕ್ತಾ ಬಿಷ್ಟ್, ಗೌಹರ್ ಸುಲ್ತಾನಾ, ಮೋನಾ ಮೆಶ್ರಂ ಮೊದಲಾದವರು. ಇಲ್ಲಿನ ವಿದೇಶಿ ಗರೆಂದರೆ ಎರಿನ್ ಬರ್ನ್ಸ್, ಸೋಫಿ ಮೊಲಿನಾಕ್ಸ್, ಡೇನಿಯಲ್ ವ್ಯಾಟ್, ಟಾಮಿ ಬ್ಯೂಮಂಟ್, ಚಾಮರಿ ಅತಪಟ್ಟು, ನಾಡಿನ್ ಡಿ ಕ್ಲಾರ್ಕ್.
ಗುಜರಾತ್ ಗರಿಷ್ಠ ಮೊತ್ತ
ಗುಜರಾತ್ ಜೈಂಟ್ಸ್ 5.95 ಕೋಟಿ ರೂ. ಗರಿಷ್ಠ ಮೊತ್ತ ಹೊಂದಿದ್ದು, 10 ಆಟಗಾರ್ತಿಯರ ಅಗತ್ಯ ಹೊಂದಿದೆ. ಆಸ್ಟ್ರೇಲಿಯದ ಬೆನ್ ಮೂನಿ ಈ ತಂಡದ ನಾಯಕಿ. ಆದರೆ ಕಳೆದ ಋತುವಿನ ಮೊದಲ ಪಂದ್ಯದಲ್ಲೇ ಗಾಯಾಳಾಗಿ ಕೂಟವನ್ನು ತಪ್ಪಿಸಿಕೊಂಡಿದ್ದರು.
ಕಳೆದ ವರ್ಷದ ಫೈನಲಿಸ್ಟ್ ಡೆಲ್ಲಿ ಕ್ಯಾಪಿಟಲ್ಸ್ 2.25 ಕೋ.ರೂ., ಯುಪಿ ವಾರಿಯರ್ 4 ಕೋ.ರೂ., ಚಾಂಪಿಯನ್ ಮುಂಬೈ ಇಂಡಿಯನ್ಸ್ 2.1 ಕೋ.ರೂ. ಹೊಂದಿದೆ. ಹರಾಜು ಪ್ರಕ್ರಿಯೆ ಅಪರಾಹ್ನ 2.30ಕ್ಕೆ ಆರಂಭವಾಗಲಿದ್ದು, ನ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಪ್ರಸಾರ ಕಾಣಲಿದೆ.
ಆರ್‌ಸಿಬಿ 3.35 ಕೋ.ರೂ.
ಕಳೆದ ಋತುವಿನ 8 ಪಂದ್ಯಗಳಲ್ಲಿ ಆರನ್ನು ಸೋತಿರುವ ಆರ್‌ಸಿಬಿ 3.35 ಕೋ.ರೂ. ಹೊಂದಿದೆ. ಮೂವರು ವಿದೇಶಿಯರೂ ಸೇರಿದಂತೆ ಒಟ್ಟು 7 ಆಟಗಾರ್ತಿಯರ ಅಗತ್ಯವಿದೆ. 42 ಟಿ20 ಪಂದ್ಯಗಳನ್ನು ಆಡಿರುವ ಥಾಯ್ಲೆಂಡ್‌ನ 19 ವರ್ಷದ ಎಡಗೈ ಸ್ಪಿನ್ನರ್ ಥಿಪಾಚಾ ಪುತ್ತವೋಂಗ್ ಅವರನ್ನು ಸೆಳೆಯಲು ಆರ್‌ಸಿಬಿ ಪ್ರಯತ್ನಿಸುತ್ತಿದೆ. 4.14ರ ಇಕಾನಮಿ ರೇಟ್‌ನಲ್ಲಿ 54 ವಿಕೆಟ್ ಉರುಳಿಸಿದ ಸಾಧನೆ ಇವರದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.