WPL: ವನಿತಾ ಪ್ರೀಮಿಯರ್ ಲೀಗ್-2: ಯುವ ಆಟಗಾರ್ತಿಯರಿಗೆ ವೇದಿಕೆ
Team Udayavani, Feb 23, 2024, 7:30 AM IST
ಬೆಂಗಳೂರು: ಎರಡನೇ ಆವೃತ್ತಿಯ “ವನಿತಾ ಪ್ರೀಮಿಯರ್ ಲೀಗ್’ಗೆ (ಡಬ್ಲ್ಯುಪಿಎಲ್) ಶುಕ್ರವಾರ ಬೆಂಗಳೂರಿನಲ್ಲಿ ಚಾಲನೆ ಲಭಿಸಲಿದೆ. ಪುರುಷರ ಐಪಿಎಲ್‌ಗೂ ಮುನ್ನ ಟಿ20 ಜೋಶ್ ತುಂಬಲು ದೇಶ ವಿದೇಶದ ಯುವ ಹಾಗೂ ಅನುಭವಿ ಆಟಗಾರ್ತಿಯರು ಸಜ್ಜಾಗಿದ್ದಾರೆ.
ಉದ್ಘಾಟನ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ಆಗಲಿವೆ. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಈಗಾ ಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷ ಅತ್ಯಧಿಕ ರನ್ ಬಾರಿಸಿ “ಆರೇಂಜ್ ಕ್ಯಾಪ್’ ಏರಿಸಿಕೊಂಡ ಹಿರಿಮೆ ಈ ಆಸೀಸ್ ಆಟಗಾರ್ತಿಯದ್ದಾಗಿತ್ತು. ಪರ್ಪಲ್ ಕ್ಯಾಪ್ ಧರಿಸಿದ ಬೌಲರ್ ಹ್ಯಾಲಿ ಮ್ಯಾಥ್ಯೂಸ್ ಮುಂಬೈ ತಂಡದಲ್ಲಿದ್ದಾರೆ.
ಆರ್‌ಸಿಬಿ ಮೇಲೆ ನಿರೀಕ್ಷೆ:
ಬಲಿಷ್ಠ ತಂಡವಾಗಿದ್ದೂ ಪುರುಷರಂತೆ ಕಳಪೆ ಪ್ರದರ್ಶನ ನೀಡಿದ ಆರ್‌ಸಿಬಿ ಮೇಲೆ ಈ ಬಾರಿಯೂ ಗಾಢ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ತಂಡ ಹೆಚ್ಚು ಸಂತುಲಿತವಾಗಿದೆ ಎಂಬುದು ನಾಯಕ ಸ್ಮತಿ ಮಂಧನಾ ಅಭಿಪ್ರಾಯ. ಕಳೆದ ಸಲ ನೆಟ್‌ರೇಟ್ ಮಾನದಂಡದಂತೆ ಆರ್‌ಸಿಬಿ ಅಂತಿಮ ಸ್ಥಾನಕ್ಕೆ ಕುಸಿಯುವ ಅವಮಾನದಿಂದ ಪಾರಾಗಿ 4ನೇ ಸ್ಥಾನ ಪಡೆದಿತ್ತು.
ಆರ್‌ಸಿಬಿ ಕಳೆದ ಸೀಸನ್‌ನಲ್ಲಿ ಓವರಿಗೆ ಸರಾಸರಿ 9.13 ರನ್ ನೀಡಿ ಭಾರೀ ದುಬಾರಿ ಆಗಿತ್ತು. ಈ ಬಾರಿ ಸುಧಾರಿತ ಪ್ರದರ್ಶನ ನೀಡಬೇಕಾದರೆ ಬೌಲರ್ ನಿಯಂತ್ರಣ ಸಾಧಿಸಬೇಕಾದುದು ಅತ್ಯಗತ್ಯ. ಜಾರ್ಜಿಯಾ ವೇರ್‌ಹ್ಯಾಮ್, ಸೋಫಿ ಮೊಲಿನಾಕ್ಸ್ ಆರ್‌ಸಿಬಿಯ ಅತ್ಯಂತ ಅನುಭವಿ ಬೌಲರ್. ಕರ್ನಾಟಕದವರೇ ಆದ ಆಲ್‌ರೌಂಡರ್ ಶುಭಾ ಸತೀಶ್ ಗಮನಿಸಬೇಕಾದ ಆಟಗಾರ್ತಿ. ಬ್ಯಾಟಿಂಗ್, ಸೀಮ್ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಶುಭಾ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿದ್ದಾರೆ.
ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ ಈ ಕೂಟದ ಉಳಿದೆರಡು ತಂಡಗಳು. ಶ್ರೇಯಾಂಕಾ ಪಾಟೀಲ್, ತಿತಾಸ್ ಸಾಧು, ಮಿನ್ನು ಮಣಿ ಮೊದಲಾದ ಪ್ರತಿಭಾನ್ವಿತರೆಲ್ಲ ಕಳೆದ ಸೀಸನ್‌ನಲ್ಲಿ ಮಿಂಚಿ ಭಾರತದ ಪರ ಆಡುವ ಅವಕಾಶ ಪಡೆದಿದ್ದರು.
ವಿಜೇತ ತಂಡಕ್ಕೆ 6 ಕೋಟಿ ರೂ.:
ಚಾಂಪಿಯನ್ ತಂಡಕ್ಕೆ 6 ಕೋಟಿ ರೂ. ನಗದು ಪುರಸ್ಕಾರ ಸಿಗಲಿದೆ. ರನ್ನರ್ ಅಪ್ ತಂಡ 3 ಕೋಟಿ ರೂ. ತನ್ನದಾಗಿಸಿಕೊಳ್ಳಲಿದೆ. ಆರೇಂಜ್ ಕ್ಯಾಪ್‌ಗೆ 5 ಲಕ್ಷ ರೂ., ಪರ್ಪಲ್ ಕ್ಯಾಪ್‌ಗೆ 5 ಲಕ್ಷ ರೂ., ಫೈನಲ್ ಪಂದ್ಯಶ್ರೇಷ್ಠ ಆಟಗಾರ್ತಿಗೆ 2.5 ಲಕ್ಷ ರೂ. ಬಹುಮಾನ ಲಭಿಸಲಿದೆ.
ಬೆಂಗಳೂರು ಪಂದ್ಯಗಳ ವೇಳಾಪಟ್ಟಿ:
ದಿನಾಂಕ ಪಂದ್ಯ ಆರಂಭ
ಫೆ. 23 ಮುಂಬೈ-ಡೆಲ್ಲಿ ರಾ. 7.30
ಫೆ. 24 ಆರ್‌ಸಿಬಿ-ಯುಪಿ ರಾ. 7.30
ಫೆ. 25 ಗುಜರಾತ್-ಮುಂಬೈ ರಾ. 7.30
ಫೆ. 26 ಯುಪಿ-ಡೆಲ್ಲಿ ರಾ. 7.30
ಫೆ. 27 ಆರ್‌ಸಿಬಿ-ಗುಜರಾತ್ ರಾ. 7.30
ಫೆ. 28 ಮುಂಬೈ-ಯುಪಿ ರಾ. 7.30
ಫೆ. 29 ಆರ್‌ಸಿಬಿ-ಡೆಲ್ಲಿ ರಾ. 7.30
ಮಾ. 1 ಯುಪಿ-ಗುಜರಾತ್ ರಾ. 7.30
ಮಾ. 2 ಆರ್‌ಸಿಬಿ-ಮುಂಬೈ ರಾ. 7.30
ಮಾ. 3 ಗುಜರಾತ್-ಡೆಲ್ಲಿ ರಾ. 7.30
ಮಾ. 4 ಆರ್‌ಸಿಬಿ-ಯುಪಿ ರಾ. 7.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.