ಎಕ್ಲ್ ಸ್ಟೋನ್ ದಾಳಿಗೆ ವೆಲಾಸಿಟಿ ಪಲ್ಟಿ
Team Udayavani, Nov 5, 2020, 10:40 PM IST
ಶಾರ್ಜಾ: ಆರಂಭಿಕ ಪಂದ್ಯದಲ್ಲಿ ಸೂಪರ್‌ನೋ ವಾಸ್ ವಿರುದ್ಧ ಸೂಪರ್ ಪ್ರದರ್ಶನ ನೀಡಿ ಜಯ ಸಾಧಿಸಿದ್ದ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ, ಗುರುವಾರದ ವನಿತಾ ಟಿ20 ಚಾಲೆಂಜರ್ ಸರಣಿಯಲ್ಲಿ ಟ್ರೈಲ್‌ಬ್ಲೇಜರ್ ವಿರುದ್ಧ ಪಲ್ಟಿ ಹೊಡೆದಿದೆ. 9 ವಿಕೆಟ್‌ಗಳ ಹೀನಾಯ ಸೋಲಿಗೆ ತುತ್ತಾಗಿದೆ.
ಟಿ20 ಕ್ರಿಕೆಟಿನ ನಂಬರ್ ವನ್ ಬೌಲರ್, ಇಂಗ್ಲೆಂಡಿನ ಎಡಗೈ ಸ್ಪಿನ್ನರ್ ಸೋಫಿ ಎಕ್ಲ್ ಸ್ಟೋನ್ ದಾಳಿಗೆ ತತ್ತರಿಸಿದ ವೆಲಾಸಿಟಿ 15.1 ಓವರ್‌ಗಳಲ್ಲಿ ಬರೀ 47 ರನ್ನಿಗೆ ಆಲೌಟ್ ಆಯಿತು. ಜವಾಬಿತ್ತ ಟ್ರೈಲ್‌ಬ್ಲೇಜರ್ 7.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 49 ರನ್ ಬಾರಿಸಿತು.
ಎಕ್ಲ್ ಸ್ಟೋನ್ ಕೇವಲ 9 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತರು. ಅವರ 3.1 ಓವರ್‌ಗಳಲ್ಲಿ ಒಂದು ಮೇಡನ್ ಕೂಡ ಸೇರಿತ್ತು. ಜೂಲನ್ ಗೋಸ್ವಾಮಿ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಉರುಳಿಸಿದರು. 13 ರನ್ ಮಾಡಿದ ಶಫಾಲಿ ವರ್ಮ ಅವರದೇ ವೆಲಾಸಿಟಿ ಸರದಿಯ ಗರಿಷ್ಠ ಸ್ಕೋರ್.
ಚೇಸಿಂಗ್ ವೇಳೆ ಟ್ರೈಲ್‌ಬ್ಲೇಜರ್, ನಾಯಕಿ ಸ್ಮತಿ ಮಂಧನಾ (6) ಅವರ ವಿಕೆಟ್ ಕಳೆದುಕೊಂಡಿತು. ಡಿಯಾಂಡ್ರಾ ಡಾಟಿನ್ 29, ರಿಚಾ ಘೋಷ್ 13 ರನ್ ಮಾಡಿ ಅಜೇಯರಾಗಿ ಉಳಿದರು. ಶನಿವಾರ ಟ್ರೈಲ್‌ಬ್ಲೇಜರ್-ಸೂಪರ್‌ನೊàವಾಸ್ ಮುಖಾಮುಖೀ ಆಗಲಿವೆ.
ಸಂಕ್ಷಿಪ್ತ ಸ್ಕೋರ್
ವೆಲಾಸಿಟಿ-15.1 ಓವರ್‌ಗಳಲ್ಲಿ 47 (ಶಫಾಲಿ 13, ಕ್ಯಾಸ್ಪರೆಕ್ ಔಟಾಗದೆ 11, ಶಿಖಾ 10, ಎಕ್ಲ್ ಸ್ಟೋನ್ 9ಕ್ಕೆ 4, ಜೂಲನ್ 13ಕ್ಕೆ 2, ರಾಜೇಶ್ವರಿ 13ಕ್ಕೆ 2, ದೀಪ್ತಿ 8ಕ್ಕೆ 1). ಟ್ರೈಲ್‌ಬ್ಲೇಜರ್-7.5 ಓವರ್‌ಗಳಲ್ಲಿ ಒಂದಕ್ಕೆ 49 (ಡಾಟಿನ್ ಔಟಾಗದೆ 29, ರಿಚಾ ಔಟಾಗದೆ 13, ಮಂಧನಾ 6, ಕ್ಯಾಸ್ಪರೆಕ್ 5ಕ್ಕೆ 1).
ಪಂದ್ಯಶ್ರೇಷ್ಠ: ಸೋಫಿ ಎಕ್ಲ್ ಸ್ಟೋನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.