ವನಿತಾ ಟಿ20 ಚಾಲೆಂಜ್: ವೆಲಾಸಿಟಿಗೆ 7 ವಿಕೆಟ್ ವಿಕ್ಟರಿ
Team Udayavani, May 24, 2022, 10:43 PM IST
ಪುಣೆ: ಓಪನರ್ ಶಫಾಲಿ ವರ್ಮ ಮತ್ತು ಮಧ್ಯಮ ಕ್ರಮಾಂಕದ ಆಟಗಾರ್ತಿ ಲಾರಾ ವೋಲ್ವಾರ್ಟ್ ಸಿಡಿಸಿದ ಆಕರ್ಷಕ ಅರ್ಧ ಶತಕ ಸಾಹಸದಿಂದ ವನಿತಾ ಟಿ20 ಚಾಲೆಂಜರ್ ಸರಣಿಯ ಮಂಗಳವಾರದ ಪಂದ್ಯದಲ್ಲಿ ವೆಲಾಸಿಟಿ ತಂಡ 7 ವಿಕೆಟ್‌ಗಳಿಂದ ಸೂಪರ್ ನೋವಾವನ್ನು ಮಣಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಸೂಪರ್ ನೋವಾ 5 ವಿಕೆಟಿಗೆ 150 ರನ್ ಪೇರಿಸಿದರೆ, ವೆಲಾಸಿಟಿ 18.2 ಓವರ್‌ಗಳಲ್ಲಿ ಮೂರೇ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಸೂಪರ್ ನೋವಾ ತನ್ನ ಮೊದಲ ಮುಖಾಮುಖಿಯಲ್ಲಿ . ಟ್ರೈಬ್ಲೇಜರ್ ತಂಡವನ್ನು ಮಣಿಸಿತ್ತು. ವೆಲಾಸಿಟಿ-ಟ್ರೈಬ್ಲೇಜರ್ ಗುರುವಾರ ಮುಖಾಮುಖಿಯಲ್ಲಿಯಾಗಲಿವೆ.
ಸೂಪರ್ ನೋವಾ 18 ರನ್ನಿಗೆ 3 ವಿಕೆಟ್ ಕಳೆದುಕೊಂಡ ಬಳಿಕ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಕೀಪರ್ ತನಿಯಾ ಭಾಟಿಯಾ ಸೇರಿಕೊಂಡು ತಂಡವನ್ನು ಆಧರಿಸತೊಡಗಿದರು. 4ನೇ ವಿಕೆಟಿಗೆ 82 ರನ್ ಪೇರಿಸಿದರು. ನಾಯಕಿಯ ಆಟವಾಡಿದ ಕೌರ್ 51 ಎಸೆತ ಎದುರಿಸಿ ಪಂದ್ಯದಲ್ಲೇ ಸರ್ವಾಧಿಕ 71 ರನ್ ಬಾರಿಸಿದರು. ಸಿಡಿಸಿದ್ದು 7 ಬೌಂಡರಿ ಹಾಗೂ 3 ಸಿಕ್ಸರ್. ಭಾಟಿಯಾ ಗಳಿಕೆ 32 ಎಸೆತಗಳಿಂದ 36 ರನ್. ಸುನೆ ಲುಸ್ ಔಟಾಗದೆ 20 ರನ್ ಮಾಡಿದರು.
ಚೇಸಿಂಗ್ ವೇಳೆ ಶಫಾಲಿ ವರ್ಮ ಸಿಡಿದು ನಿಂತರು. 33 ಎಸೆತ ನಿಭಾಯಿಸಿದ ಅವರು 9 ಬೌಂಡರಿ, ಒಂದು ಸಿಕ್ಸರ್ ನೆರವಿನಿಂದ 51 ರನ್ ಹೊಡೆದರು. ವೋಲ್ವಾರ್ಟ್ ತಮ್ಮ ಏಕೈಕ ಸಿಕ್ಸರ್ ಮೂಲಕ ಅರ್ಧ ಶತಕ ಪೂರ್ತಿಗೊಳಿಸಿದರು.
ಅವರ ಅಜೇಯ 51 ರನ್ 35 ಎಸೆತಗಳಿಂದ ಬಂತು. 7 ಬೌಂಡರಿ, ಒಂದು ಸಿಕ್ಸರ್ ಇದರಲ್ಲಿ ಸೇರಿತ್ತು. ನಾಯಕಿ ದೀಪ್ತಿ ಶರ್ಮ 24 ರನ್ ಮಾಡಿ ಅಜೇಯರಾಗಿ ಉಳಿದರು.
ಸಂಕ್ಷಿಪ್ತ ಸ್ಕೋರ್: ಸೂಪರ್ ನೋವಾ-5 ವಿಕೆಟಿಗೆ 150 (ಕೌರ್ 71, ತನಿಯಾ 36, ಲುಸ್ ಔಟಾಗದೆ 20. ಕೇಟ್ ಕ್ರಾಸ್ 24ಕ್ಕೆ 2). ವೆಲಾಸಿಟಿ-18.2 ಓವರ್‌ಗಳಲ್ಲಿ 3 ವಿಕೆಟಿಗೆ 151 (ಶಫಾಲಿ 51, ವೋಲ್ಟಾರ್ಟ್ ಔಟಾಗದೆ 51, ದೀಪ್ತಿ ಔಟಾಗದೆ 24, ಡಿಯಾಂಡ್ರ ಡಾಟಿನ್ 21ಕ್ಕೆ 2).
ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್ ಕೌರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.