Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್
Team Udayavani, Oct 5, 2024, 4:19 PM IST
ಮುಂಬೈ: ಭಾರತದ ಮಾಜಿ ಕ್ರಿಕೆಟಿಗ, ಖ್ಯಾತ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್ (Sanjay Manjrekar) ಅವರು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಶುಕ್ರವಾರ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮಹಿಳಾ ಟಿ 20 ವಿಶ್ವಕಪ್ (Women’s T20 World Cup) ಪಂದ್ಯದ ಸಂದರ್ಭದಲ್ಲಿ ಕಾಮೆಂಟರಿ ಮಾಡುವಾಗ, ಉತ್ತರ ಭಾರತದ ಆಟಗಾರರ ಬಗ್ಗೆ ತನಗೆ ಆಳವಾದ ಜ್ಞಾನವಿಲ್ಲ ಎಂದು ಮಂಜ್ರೇಕರ್ ಹೇಳಿದರು.
ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚಿಂಗ್ ಘಟಕದ ಬಗ್ಗೆ ಮಂಜ್ರೇಕರ್ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಸಹವರ್ತಿ ವೀಕ್ಷಕ ವಿವರಣೆಗಾರರು ಮಾಜಿ ಪಂಜಾಬ್ ಆಟಗಾರ ಮತ್ತು ತಂಡದ ಫೀಲ್ಡಿಂಗ್ ತರಬೇತುದಾರ ಮುನೀಶ್ ಬಾಲಿ ಅವರ ಬಗ್ಗೆ ಮಾತನಾಡಿದಾಗ ಮಾಂಜ್ರೇಕರ್ ಬಾಲಿ ಅವರ ಪರಿಚಯ ಇಲ್ಲ ಎಂದರು.
“ಕ್ಷಮಿಸಿ, ನನಗೆ ಅವರ ಪರಿಚಯವಿಲ್ಲ. ಉತ್ತರ ಭಾರತದ ಆಟಗಾರರ ಬಗ್ಗೆ ನಾನು ಹೆಚ್ಚು ಗಮನ ಹರಿಸುವುದಿಲ್ಲ” ಎಂದು ನೇರ ಪ್ರಸಾರದಲ್ಲಿಯೇ ಮಾಂಜ್ರೇಕರ್ ಹೇಳಿದರು.
ಸಂಜಯ್ ಮಾಂಜ್ರೇಕರ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗಳು ಬಂದಿದೆ. ಇಂತಹ ಜನಾಂಗೀಯವಾದಿಯನ್ನು ಹೇಗೆ ಕಾಮೆಂಟರಿ ಪ್ಯಾನೆಲ್ ನಲ್ಲಿ ಕೂರಿಸಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
I’ve no interest in North Indian Cricketers
– Sanjay Manjrekar
Why so much hate ? pic.twitter.com/RBPkPvYuCJ— Sports_comedy (@sports_komedy) October 5, 2024
ಶುಕ್ರವಾರ (ಆ.04) ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲ್ಯಾಂಡ್ ವಿರುದ್ದ 58 ರನ್ ಗಳ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 160 ರನ್ ಮಾಡಿದರೆ, ಭಾರತವು 19 ಓವರ್ ಗಳಲ್ಲಿ ಕೇವಲ 102 ರನ್ ಗಳಿಗೆ ಆಲೌಟಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.