Women’s T20 World Cup: ಆಸೀಸ್‌ ವಿರುದ್ದ ಸೋತರೂ ಭಾರತಕ್ಕೆ ಇನ್ನೂ ಇದೆ ಸೆಮಿ ಅವಕಾಶ


Team Udayavani, Oct 14, 2024, 11:12 AM IST

Women’s T20 World Cup: Despite losing against Aussies, India still have a chance in the semis

ಶಾರ್ಜಾ: ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೇರುವ ಭಾರತದ ಹಾದಿ ದುರ್ಗಮವಾಗಿದೆ. ಭಾನುವಾರ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ ಭಾರತ 9 ರನ್‌ಗಳ ಸೋಲನುಭವಿಸಿದೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ಅವರ 54 ರನ್‌ ಗಳ ಹೋರಾಟದ ಹೊರತಾಗಿಯೂ ಭಾರತ ಆಘಾತಕ್ಕೀಡಾಗಿದೆ.

ಇದರೊಂದಿಗೆ ಭಾರತದ ಸೆಮಿ ಕನಸಿಗೆ ದೊಡ್ಡ ಪೆಟ್ಟು ಬಿದ್ದಿದೆ. ಕೂಟದ ಮೊದಲ ಪಂದ್ಯದಲ್ಲಿಯೇ ನ್ಯೂಜಿಲ್ಯಾಂಡ್‌ ವಿರುದ್ದ ಹೀನಾಯ ಸೋಲು ಕಂಡಿದ್ದ ಭಾರತಕ್ಕೆ ರವಿವಾರ ಆಸೀಸ್‌ ವಿರುದ್ದ ಗೆಲುವು ಅಗತ್ಯವಿತ್ತು. ಆದರೆ ನಾಯಕಿಯ ಕೊನೆಯವರೆಗಿನ ಹೋರಾಟದ ಹೊರತಾಗಿಯೂ ಸೋಲು ತಪ್ಪಿಸಿಕೊಳ್ಳಲಾಗಲಿಲ್ಲ.

ಗುಂಪು ಹಂತದ ಎಲ್ಲಾ ಪಂದ್ಯಗಳಲ್ಲಿ ಗೆದ್ದ ಆಸೀಸ್‌ ಸೆಮಿ ಫೈನಲ್‌ ಗೆ ಪ್ರವೇಶ ಪಡೆದಿದೆ. ಆದರೆ ಭಾರತ ಸೆಮಿ ತಲುಪುವ ಆಸೆ ಇನ್ನೂ ಸಂಪೂರ್ಣ ಕ್ಷೀಣಿಸಿಲ್ಲ. ಅದು ಸೋಮವಾರ (ಅ.14) ನಡೆಯಲಿರುವ ನ್ಯೂಜಿಲ್ಯಾಂಡ್‌ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

ಗ್ರೂಪ್‌ “ಎ’ಯಿಂದ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಇನ್ನುಳಿದ 1 ಸ್ಥಾನ ಸೋಮವಾರದ ಪಾಕ್‌-ನ್ಯೂಜಿಲ್ಯಾಂಡ್‌ ಫ‌ಲಿತಾಂಶವನ್ನು ಅವಲಂಭಿಸಿದೆ. ಇಲ್ಲಿ ನ್ಯೂಜಿಲ್ಯಾಂಡ್‌ ಗೆದ್ದರೆ ಅದು ಸೆಮೀಸ್‌ ಗೇರುವುದು ಪಕ್ಕಾ. ಆದರೆ ಪಾಕಿಸ್ತಾನವು ಮೊದಲು ಬ್ಯಾಟ್ ಮಾಡಿದರೆ ನ್ಯೂಜಿಲ್ಯಾಂಡ್‌ ತಂಡವನ್ನು 53 ರನ್‌ ಗಳಿಗಿಂತ ಕಡಿಮೆ ಅಂತರದಿಂದ ಸೋಲಿಸಬೇಕು. ಒಂದು ವೇಳೆ ಪಾಕ್‌ ಚೇಸ್‌ ಮಾಡಿದರೆ ಆಗ 9.1 ಓವರ್‌ ಗಳ ಮೊದಲು ಜಯ ಗಳಿಸಬಾರದು.

ಒಂದು ವೇಳೆ ಪಾಕಿಸ್ತಾನ 53 ರನ್‌ ಗಳಿಗಿಂತ ಹೆಚ್ಚು ಅಂತರದಲ್ಲಿ ಗೆದ್ದರೆ ಅಥವಾ 9.1 ಓವರ್‌ಗಳಿಗಿಂತ ಮೊದಲು ಗುರಿಯನ್ನು ಬೆನ್ನಟ್ಟಿದರೆ, ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳ ಬದಲು ಪಾಕಿಸ್ತಾನ ಸೆಮಿ ಫೈನಲ್‌ ಗೆ ಅರ್ಹತೆ ಪಡೆಯುತ್ತದೆ.

ಟಾಪ್ ನ್ಯೂಸ್

ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

Bengaluru: Four members of the same family ends their life

Bengaluru: ಆತ್ಮಹತ್ಯೆಗೆ ಶರಣಾದ ಒಂದೇ ಕುಟುಂಬದ ನಾಲ್ವರು!

Bantwal: ಶಾಲಾ ಬಸ್ ಚಾಲನೆ ವೇಳೆ ಚಾಲಕನಿಗೆ ಮೂರ್ಛೆ ರೋಗ… ವಿದ್ಯುತ್ ಕಂಬಕ್ಕೆ ಡಿಕ್ಕಿ

Bantwal: ಶಾಲಾ ಬಸ್ ಚಾಲನೆ ವೇಳೆ ಚಾಲಕನಿಗೆ ಮೂರ್ಛೆ ರೋಗ… ವಿದ್ಯುತ್ ಕಂಬಕ್ಕೆ ಡಿಕ್ಕಿ

55

Bigg Boss Kannada: ಕಿಚ್ಚನ ಬಳಿಕ ಈ ಸ್ಟಾರ್‌ಗಳು ಆಗ್ತಾರಾ ಕಿರುತೆರೆಯ ʼಬಿಗ್‌ ಬಾಸ್‌ʼ..?

Tragedy: ಬಸ್ ಚಾಲನೆ ವೇಳೆ ಚಾಲಕನಿಗೆ ಎದೆ ನೋವು… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು

Tragedy: ಬಸ್ ಚಾಲನೆ ವೇಳೆ ಚಾಲಕನಿಗೆ ಎದೆ ನೋವು… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು

Raichur: ಹಳೇ ವೈಷಮ್ಯದಿಂದ ಯುವಕನ ಕೊಲೆ: ಆರೋಪಿಯ ಬಂಧನ

Raichur: ಹಳೇ ವೈಷಮ್ಯದಿಂದ ಯುವಕನ ಕೊಲೆ: ಆರೋಪಿಯ ಬಂಧನ

ಮಾತು ತಪ್ಪಿದ ಸರಕಾರ; ಚುನಾವಣಾ ಬಹಿಷ್ಕಾರಕ್ಕೆ ಮೀನುಗಾರರ ನಿರ್ಧಾರ

Surathkal: ಮಾತು ತಪ್ಪಿದ ಸರಕಾರ; ಚುನಾವಣಾ ಬಹಿಷ್ಕಾರಕ್ಕೆ ಮೀನುಗಾರರ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hockey India

Hockey India League Auction; ಹರ್ಮನ್‌ಪ್ರೀತ್‌ ಸಿಂಗ್‌ ದುಬಾರಿ ಆಟಗಾರ

1-M-J

IPL; ಮುಂಬೈಗೆ ಮತ್ತೆ ಜಯವರ್ಧನ ಕೋಚ್‌

TT

Asian Table Tennis: ಭಾರತಕ್ಕೆ ಮೂರು ಕಂಚು

1-aee-ddd

Ranji Trophy; ಮುಂಬಯಿ ಗೆಲುವಿಗೆ 262 ರನ್‌ ಗುರಿ

1-aee

Ranji Trophy;ಮಧ್ಯಪ್ರದೇಶ ಬೃಹತ್‌ ಮೊತ್ತ:ನಾಯಕ ಶುಭಂ ಶರ್ಮ 143, ಹರ್‌ಪ್ರೀತ್‌ 91 ರನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

3

Kinnigoli: ಒಂದೇ ಮಳೆಗೆ ಎದ್ದು ಹೋಯಿತು ಕಾಟಾಚಾರದ ತೇಪೆ!

Bengaluru: Four members of the same family ends their life

Bengaluru: ಆತ್ಮಹತ್ಯೆಗೆ ಶರಣಾದ ಒಂದೇ ಕುಟುಂಬದ ನಾಲ್ವರು!

2(1)

Madantyaru; ಗೇರುಕಟ್ಟೆ ಪ್ರೌಢಶಾಲೆಯ 4 ಕಟ್ಟಡ ಶಿಥಿಲ!

ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ

Gadag; ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.