Women’s T20 World Cup ಇಂದು ಫೈನಲ್: ನ್ಯೂಜಿಲ್ಯಾಂಡ್-ದಕ್ಷಿಣ ಆಫ್ರಿಕಾ ಹೋರಾಟ
Team Udayavani, Oct 20, 2024, 6:55 AM IST
ದುಬಾೖ : ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನೂತನ ಚಾಂಪಿಯನ್ ತಂಡವೊಂದನ್ನು ಕಾಣುವ ಸಮಯ ಸನ್ನಿಹಿತವಾಗಿದೆ. ಈವರೆಗೆ ಆಸ್ಟ್ರೇಲಿಯ (6 ಸಲ), ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ (ತಲಾ ಒಮ್ಮೆ) ಮಾತ್ರ ಪ್ರಶಸ್ತಿ ಎತ್ತಿದ್ದವು. ಈ ಬಾರಿ ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ಫೈನಲ್‌ಗೆ ಲಗ್ಗೆ ಹಾಕಿವೆ. ರವಿವಾರ ರಾತ್ರಿ ದುಬಾೖಯಲ್ಲಿ ಪ್ರಶಸ್ತಿ ಸಮರ ಏರ್ಪಡಲಿದ್ದು, ಯಾರೇ ಗೆದ್ದರೂ ಮೊದಲ ಸಲ ಚಾಂಪಿಯನ್ ಆಗಿ ಹೊರಹೊಮ್ಮಲಿವೆ.
“ಆಸ್ಟ್ರೇಲಿಯವನ್ನು ಸೋಲಿಸಿ ದವರಿಗೆ ವಿಶ್ವಕಪ್’ ಎಂಬುದು ಈ ಪಂದ್ಯಾವಳಿಗೂ ಅನ್ವಯಿಸಿದ ಮಾತಾಗಿತ್ತು. ಅದು ಸತತ 3 ಬಾರಿಯ ವಿಶ್ವ ಚಾಂಪಿಯನ್ ಎಂಬ ಹಿರಿಮೆಯೊಂದಿಗೆ ಕಣಕ್ಕಿಳಿದಿತ್ತು. ಇಲ್ಲಿ ಹರಿಣಗಳ ಪಡೆ ಕಾಂಗರೂ ಕತೆಯನ್ನು ಸೆಮಿಫೈನಲ್‌ನಲ್ಲಿ ಮುಗಿಸಿ ಫೈನಲ್‌ಗೆ ಲಗ್ಗೆ ಹಾಕಿದೆ. ಇದು ದಕ್ಷಿಣ ಆಫ್ರಿಕಾ ಕಾಣುತ್ತಿರುವ ಸತತ 2ನೇ ಫೈನಲ್. ಕಳೆದ ಸಲ ಆಸ್ಟ್ರೇಲಿಯ ವಿರುದ್ಧ ತವರಿನ ಕೇಪ್‌ಟೌನ್ ಅಂಗಳದಲ್ಲೇ 19 ರನ್ನಿನಿಂದ ಸೋತು ಕಣ್ಣೀರು ಸುರಿಸಿತ್ತು. ಈ ಬಾರಿ ನ್ಯೂಜಿಲ್ಯಾಂಡ್ ಸವಾಲನ್ನು ಹೇಗೆ ನಿಭಾಯಿಸಲಿದೆ ಎಂಬುದೊಂದು ಕುತೂಹಲ.
ಕಿವೀಸ್‌ಗೆ ಮೂರನೇ ಫೈನಲ್
ನ್ಯೂಜಿಲ್ಯಾಂಡ್‌ಗೆ ಇದು 3ನೇ ಫೈನಲ್. 2009 ಮತ್ತು 2010ರ ಮೊದಲೆರಡು ಆವೃತ್ತಿಗಳಲ್ಲಿ ಕಿವೀಸ್ ಪಡೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತ್ತು. ಆದರೆ ರನ್ನರ್ ಅಪ್ ಸ್ಥಾನವೇ ಗತಿಯಾಗಿತ್ತು. ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗಳಿಂದ, ಆಸ್ಟ್ರೇಲಿಯ ವಿರುದ್ಧ ಮೂರೇ ಮೂರು ರನ್ನಿನಿಂದ ಸೋತು ಪ್ರಶಸ್ತಿ ವಂಚಿತವಾಗಿತ್ತು. ನ್ಯೂಜಿಲ್ಯಾಂಡ್ ವನಿತೆಯರು ಈವರೆಗೆ ಗೆದ್ದಿರುವುದು 2000ದ ಏಕದಿನ ವಿಶ್ವಕಪ್ ಮಾತ್ರ.
1. ನ್ಯೂಜಿಲ್ಯಾಂಡ್ ದ. ಆಫ್ರಿಕಾ
ದುಬಾೖ ರಾತ್ರಿ 7.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
UV Fusion: ಹೃದಯದಲ್ಲಿ ಬಾಲ್ಯದ ಮಿಡಿತ
Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.