Women’s T20 World Cup;ಇಂದು ಆಸ್ಟ್ರೇಲಿಯಕ್ಕೆ ಪಾಕ್‌ ಸವಾಲು

Team Udayavani, Oct 11, 2024, 6:40 AM IST

1-wewqewqe

ದುಬಾೖ: ಆಡಿದ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಬಲಿಷ್ಠ ಆಸ್ಟ್ರೇಲಿಯ ತಂಡವು ವನಿತಾ ಟಿ20 ವಿಶ್ವಕಪ್‌ ಕೂಟದ “ಎ’ ಬಣದ ಮೂರನೇ ಪಂದ್ಯದಲ್ಲಿ ಶುಕ್ರವಾರ ಪಾಕಿಸ್ಥಾನ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಒಂದು ವೇಳೆ ಆಸ್ಟ್ರೇಲಿಯ ಗೆದ್ದರೆ ಅದು ನೇರವಾಗಿ ಸೆಮಿಫೈನಲಿಗೇರಲಿದೆ.

ಈಗಾಗಲೇ ನ್ಯೂಜಿಲ್ಯಾಂಡ್‌ ಮತ್ತು ಶ್ರೀಲಂಕಾ ತಂಡವನ್ನು ಸೋಲಿಸಿರುವ ಆಸ್ಟ್ರೇಲಿಯ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿದೆ. ಆಸ್ಟೇಲಿಯ ಮುಂದಿನ ರವಿವಾರ (ಅ. 13) ಭಾರತ ತಂಡವನ್ನು ಎದುರಿಸಲಿದೆ. ಭಾರತ ಆಡಿದ ಮೂರು ಪಂದ್ಯದಲ್ಲಿ ಎರಡರಲ್ಲಿ ಗೆದ್ದು ನಾಲ್ಕು ಅಂಕದೊಂದಿಗೆ ಸದ್ಯ ದ್ವಿತೀಯ ಸ್ಥಾನದಲ್ಲಿದೆ. ಆದರೆ ಭಾರತಕ್ಕೆ ನ್ಯೂಜಿಲ್ಯಾಂಡ್‌ ತೀವ್ರ ಸ್ಪರ್ಧೆ ನೀಡುವ ಸಾಧ್ಯತೆಯಿದೆ. ನ್ಯೂಜಿಲ್ಯಾಂಡ್‌ ಆಡಿದ ಎರಡು ಪಂದ್ಯದಲ್ಲಿ ಒಂದರಲ್ಲಿ ಗೆದ್ದು ಎರಡಂಕ ಹೊಂದಿದೆ.

ನ್ಯೂಜಿಲ್ಯಾಂಡ್‌ ತಂಡವು ಶನಿವಾರ (ಅ. 12) ಶ್ರೀಲಂಕಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಗೆದ್ದರೆ ಅದು ಕೂಡ ನಾಲ್ಕು ಅಂಕ ಪಡೆಯಲಿದೆ. ಆಗ ಅ. 14ರಂದು ನಡೆಯುವ ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್‌ ನಡುವಣ ಪಂದ್ಯದ ಫ‌ಲಿತಾಂವವೇ ಯಾವ ತಂಡ ಸೆಮಿಫೈನಲಿಗೆ ತಲುಪುವುದು ಎಂಬುದನ್ನು ನಿರ್ಣಯಿಸುವ ಸಾಧ್ಯತೆಯಿದೆ.

ಫಾತಿಮಾ ಸನಾ ಇಲ್ಲ
ತಂದೆ ನಿಧನ ಹೊಂದಿದ ಹಿನ್ನೆಲೆಯಲ್ಲಿ ಪಾಕಿಸ್ಥಾನದ ನಾಯಕಿ ಫಾತಿಮಾ ಸನಾ ಅವರು ತುರ್ತಾಗಿ ಕರಾಚಿಗೆ ತೆರಳಿದ್ದರಿಂದ ಅವರು ಶುಕ್ರವಾರದ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ. ಇದು ಪಾಕಿಸ್ಥಾನಕ್ಕೆ ದೊಡ್ಡ ಹೊಡೆತ ಎನ್ನಲಾಗಿದೆ. ಸನಾ ಅವರ ಬದಲಿಗೆ ಮುನೀಬಾ ಅಲಿ ಅವರನ್ನು ತಂಡವನ್ನು ಮುನ್ನಡೆಸಲಿದ್ದಾರೆ.

ಈ ವಿಶ್ವಕಪ್‌ನಲ್ಲಿ ಸನಾ ಅವರು ಅತೀ ಕಿರಿಯ ನಾಯಕಿ ಆಗಿದ್ದಾರೆ. 22ರ ಹರೆಯದ ಅವರು ಪಾಕಿಸ್ಥಾನದ ಅಭಿಯಾನದಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ. ಶ್ರೀಲಂಕಾ ವಿರುದ್ಧ ಗೆದ್ದ ಪಂದ್ಯದಲ್ಲಿ ಅವರು 30 ರನ್‌ ಮತ್ತು ಎರಡು ನಿರ್ಣಾಯಕ ವಿಕೆಟ್‌ ಪಡೆದಿದ್ದರು.

ರಾತ್ರಿ 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ವಿಂಡೀಸ್‌ಗೆ ಭರ್ಜರಿ ಗೆಲುವು

ಶಾರ್ಜಾ: ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ ವೆಸ್ಟ್‌ ಇಂಡೀಸ್‌ ವನಿತೆಯರು ಗುರುವಾರ ನಡೆದ ವನಿತಾ ಟಿ20 ವಿಶ್ವಕಪ್‌ ಕೂಟದ “ಬಿ’ ಬಣದ ಪಂದ್ಯದಲ್ಲಿ ಬಾಂಗ್ಲಾದೇಶ ವನಿತೆಯರನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದ್ದಾರೆ.

ಈ ಗೆಲುವಿನಿಂದ ವೆಸ್ಟ್‌ಇಂಡೀಸ್‌ ತಾನಾಡಿದ ಮೂರು ಪಂದ್ಯಗಳಿಂದ ನಾಲ್ಕು ಅಂಕ ಸಂಪಾದಿಸಿ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಬಣದ ಅಗ್ರಸ್ಥಾನ ಪಡೆದು ಸೆಮಿಫೈನಲಿಗೇರುವ ಆಸೆಯನ್ನು ಜೀವಂತವಿರಿಸಿಕೊಂಡಿದೆ. ವೆಸ್ಟ್‌ ಇಂಡೀಸ್‌ ಅಂತಿಮ ಲೀಗ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. ತಾನಾಡಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ ಇಂಗ್ಲೆಂಡ್‌ ನಾಲ್ಕಂಕ ಗಳಿಸಿದ್ದು ಸದ್ಯ ಮೂರನೇ ಸ್ಥಾನದಲ್ಲಿದೆ. ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ನಾಲ್ಕಂಕ ಪಡೆದ ದಕ್ಷಿಣ ಆಫ್ರಿಕಾ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಸದ್ಯ ದ್ವಿತೀಯ ಸ್ಥಾನ ಪಡೆದಿದೆ. ದಕ್ಷಿಣ ಆಫ್ರಿಕಾ ಶನಿವಾರ ಬಾಂಗ್ಲಾವನ್ನು ಎದುರಿಸಲಿದ್ದು ಇಲ್ಲಿ ಗೆದ್ದರೆ ಸೆಮಿಫೈನಲಿಗೇರುವ ಸಾಧ್ಯತೆಯಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶವು ನಿಗರ್‌ ಸುಲ್ತಾನಾ (39) ಅವರ ಉತ್ತಮ ಆಟದಿಂದಾಗಿ 8 ವಿಕೆಟಿಗೆ 103 ರನ್‌ ಗಳಿಸಿತು. ಇದಕ್ಕುತ್ತರವಾಗಿ ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿದ ವೆಸ್ಟ್‌ಇಂಡೀಸ್‌ ವನಿತೆಯರು ಕೇವಲ ಎರಡು ವಿಕೆಟ್‌ ಕಳೆದುಕೊಂಡು 12.5 ಓವರ್‌ಗಳಲ್ಲಿ 104 ರನ್‌ ಗಳಿಸಿ ಜಯಭೇರಿ ಬಾರಿಸಿತು.

ಟಾಪ್ ನ್ಯೂಸ್

Valmiki scam: ಸತ್ಯ ಮುಚ್ಚಿಡಲು ಸಿದ್ದರಾಮಯ್ಯ ಯತ್ನ: ಛಲವಾದಿ

Valmiki scam: ಸತ್ಯ ಮುಚ್ಚಿಡಲು ಸಿದ್ದರಾಮಯ್ಯ ಯತ್ನ: ಛಲವಾದಿ

1-tata-bg

‘Welcome’: ರತನ್ ಟಾಟಾರಿಗೆ ಒಂದೇ ಒಂದು ಮೆಸೇಜ್ ಮೂಲಕ ಗುಜರಾತ್ ಗೆ ನ್ಯಾನೋ ತಂದಿದ್ದ ಮೋದಿ!

Illegal; ಗಣಿಗಾರಿಕೆ ತನಿಖೆ ವಿಸ್ತರಣೆ: ಈ ವರೆಗೆ 29 ಸಾವಿರ ಕೋಟಿ ರೂ. ಮರಳಿ ವಸೂಲಿ

Illegal; ಗಣಿಗಾರಿಕೆ ತನಿಖೆ ವಿಸ್ತರಣೆ: ಈ ವರೆಗೆ 29 ಸಾವಿರ ಕೋಟಿ ರೂ. ಮರಳಿ ವಸೂಲಿ

State Govt: ವಿನಯ್‌ ಕುಲಕರ್ಣಿ ಅತ್ಯಾ*ಚಾರ ಪ್ರಕರಣ ಸಿಐಡಿಗೆ

State Govt: ವಿನಯ್‌ ಕುಲಕರ್ಣಿ ಅತ್ಯಾ*ಚಾರ ಪ್ರಕರಣ ಸಿಐಡಿಗೆ

Navratri special: ಇಷ್ಟಪಟ್ಟಿದ್ದನ್ನು ಬಿಟ್ಟು ಕೊಡುವುದೂ ಜೀವನ…

Navratri special: ಇಷ್ಟಪಟ್ಟಿದ್ದನ್ನು ಬಿಟ್ಟು ಕೊಡುವುದೂ ಜೀವನ…

1-rana

India; ವನ್ಯಜೀವಿಗಳ ಸಂಖ್ಯೆ 50 ವರ್ಷದಲ್ಲಿ 73% ಕುಸಿತ!

1-horoscope

Daily Horoscope: ಜೀವನೋತ್ಸಾಹ ಉಳಿಸಿಕೊಳ್ಳಲು ಶ್ರಮ, ವ್ಯಾಪಾರಿಗಳಿಗೆ ಪೈಪೋಟಿಯಿಂದ ಲಾಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI

Ranji Trophy ಕ್ರಿಕೆಟ್‌ ಇಂದಿನಿಂದ : ಕರ್ನಾಟಕಕ್ಕೆ ಮಧ್ಯಪ್ರದೇಶ ಎದುರಾಳಿ

1-ewwss

India vs Australia; ಟೆಸ್ಟ್‌  ಸರಣಿಗೆ ಗ್ರೀನ್‌ ಸಂಶಯ

1-ucchil

Uchchila Dasara: ದೇಹದಾರ್ಡ್ಯ ಸ್ಪರ್ಧೆ ಉದ್ಘಾಟನೆ

1-asdsad

Arctic Open ಬ್ಯಾಡ್ಮಿಂಟನ್‌; ಲಕ್ಷ್ಯ ಸೇನ್‌ಗೆ ಸೋಲು

Hockey

Hockey; ಅ. 13-15: ಎಚ್‌ಐಎಲ್‌ ಆಟಗಾರರ ಹರಾಜು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Valmiki scam: ಸತ್ಯ ಮುಚ್ಚಿಡಲು ಸಿದ್ದರಾಮಯ್ಯ ಯತ್ನ: ಛಲವಾದಿ

Valmiki scam: ಸತ್ಯ ಮುಚ್ಚಿಡಲು ಸಿದ್ದರಾಮಯ್ಯ ಯತ್ನ: ಛಲವಾದಿ

1-tata-bg

‘Welcome’: ರತನ್ ಟಾಟಾರಿಗೆ ಒಂದೇ ಒಂದು ಮೆಸೇಜ್ ಮೂಲಕ ಗುಜರಾತ್ ಗೆ ನ್ಯಾನೋ ತಂದಿದ್ದ ಮೋದಿ!

Illegal; ಗಣಿಗಾರಿಕೆ ತನಿಖೆ ವಿಸ್ತರಣೆ: ಈ ವರೆಗೆ 29 ಸಾವಿರ ಕೋಟಿ ರೂ. ಮರಳಿ ವಸೂಲಿ

Illegal; ಗಣಿಗಾರಿಕೆ ತನಿಖೆ ವಿಸ್ತರಣೆ: ಈ ವರೆಗೆ 29 ಸಾವಿರ ಕೋಟಿ ರೂ. ಮರಳಿ ವಸೂಲಿ

State Govt: ವಿನಯ್‌ ಕುಲಕರ್ಣಿ ಅತ್ಯಾ*ಚಾರ ಪ್ರಕರಣ ಸಿಐಡಿಗೆ

State Govt: ವಿನಯ್‌ ಕುಲಕರ್ಣಿ ಅತ್ಯಾ*ಚಾರ ಪ್ರಕರಣ ಸಿಐಡಿಗೆ

Navratri special: ಇಷ್ಟಪಟ್ಟಿದ್ದನ್ನು ಬಿಟ್ಟು ಕೊಡುವುದೂ ಜೀವನ…

Navratri special: ಇಷ್ಟಪಟ್ಟಿದ್ದನ್ನು ಬಿಟ್ಟು ಕೊಡುವುದೂ ಜೀವನ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.