Women’s T20 World Cup: ಸ್ಕಾಟ್ಲೆಂಡ್‌ಗೆ ಆಘಾತ: ಪಾಕ್‌ಗೆ ಜಯ

ಬಾಂಗ್ಲಾದೇಶ ಶುಭಾರಂಭ; 16 ರನ್‌ ಗೆಲುವು

Team Udayavani, Oct 4, 2024, 1:08 AM IST

1–wewqe

ಶಾರ್ಜಾ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಬಾಂಗ್ಲಾದೇಶ ವನಿತೆ ಯರು ಗುರುವಾರ ನಡೆದ ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟದ ಆರಂಭಿಕ ಪಂದ್ಯ ದಲ್ಲಿ ಸ್ಕಾಟ್ಲೆಂಡ್‌ ತಂಡವನ್ನು 16 ರನ್ನುಗಳಿಂದ ಸೋಲಿಸಿ ಶುಭಾರಂಭ ಮಾಡಿದೆ.

ಬ್ಯಾಟಿಂಗ್‌ ನೆಚ್ಚಿಕೊಂಡ ಬಾಂಗ್ಲಾ ವನಿತೆ ಯರು ಆರಂಭಿಕ ಆಟಗಾರ್ತಿ ಶಾಥಿ ರಾಣಿ, ಶೋಭನಾ ಮೊಸ್ತರಿ ಮತ್ತು ನಾಯಕಿ ನಿಗರ್‌ ಸುಲ್ತಾನಾ ಅವರ ಉಪಯುಕ್ತ ಆಟದಿಂದಾಗಿ 7 ವಿಕೆಟಿಗೆ 119 ರನ್ನುಗಳ ಉತ್ತಮ ಮೊತ್ತ ಪೇರಿಸಿದರು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾದ ಸ್ಕಾಟ್ಲೆಂಡ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟಿಗೆ 103 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಬ್ರೈಸ್‌ ಪ್ರಯತ್ನ ವ್ಯರ್ಥ
ಸ್ಕಾಟ್ಲೆಂಡಿನ ವಿಕೆಟ್‌ಕೀಪರ್‌ ಸಾರಾ ಬ್ರೈಸ್‌ ಉತ್ತಮ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿಗೆ ಪ್ರಯತ್ನಿಸಿದರು. ಆದರೆ ಅವರಿಗೆ ಉಳಿದ ಆಟಗಾರ್ತಿಯರಿಂದ ಉತ್ತಮ ಬೆಂಬಲ ಸಿಗಲಿಲ್ಲ. ಇನ್ನಿಂಗ್ಸ್‌ಪೂರ್ತಿ ಏಕಾಂಗಿಯಾಗಿ ಹೋರಾಡಿದ ಅವರು 52 ಎಸೆತಗ
ಳಿಂದ 49 ರನ್‌ ಗಳಿಸಿ ಅಜೇಯರಾಗಿ ಉಳಿದರು. ಕೇವಲ 1 ಬೌಂಡರಿ ಹೊಡೆದಿದ್ದರು.

ಬ್ರೈಸ್‌ ಅವರನ್ನು ಬಿಟ್ಟರೆ ಸ್ಕಾಟ್ಲೆಂಡಿನ ಕೇವಲ ಇಬ್ಬರು ಆಟಗಾರ್ತಿಯರಾದ ನಾಯಕಿ ಕ್ಯಾತರಿನ್‌ ಬ್ರೈಸ್‌ (11) ಮತ್ತು ಪ್ರಿಯಾನಾಜ್‌ ಚಟರ್ಜಿ (11) ಎರಡಂಕೆಯ ಮೊತ್ತ ಗಳಿಸಿದ್ದರು. ಬಾಂಗ್ಲಾದ ನಿಖರ ದಾಳಿಯಿಂದಾಗಿ ಸ್ಕಾಟ್ಲೆಂಡಿನ ವನಿತೆಯರು ಆಗಾಗ್ಗೆ ವಿಕೆಟ್‌ ಕಳೆದುಕೊಂಡಿದ್ದರಿಂದ ಬಾಂಗ್ಲಾ ಮೇಲುಗೈ ಸಾಧಿಸುವಂತಾಯಿತು.

ಬಾಂಗ್ಲಾದ ಮಧ್ಯಮ ವೇಗಿ ರಿತು ಮೋನಿ ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ ಕೇವಲ 15 ರನ್‌ ನೀಡಿ ಎರಡು ವಿಕೆಟ್‌ ಕಿತ್ತರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮರುಫಾ ಅಕ್ತೆರ್‌, ನಹಿದಾ ಆಕ್ತೆರ್‌, ಫಾಹಿಮಾ ಖಾತುನ್‌ ಮತ್ತು ರಬೆಯಾ ಖಾನ್‌ ತಲಾ ಒಂದು ವಿಕೆಟ್‌ ಪಡೆದರು.

ಬಾಂಗ್ಲಾ ಉತ್ತಮ ಆರಂಭ
ಬಾಂಗ್ಲಾದ ಆರಂಭ ಉತ್ತಮವಾಗಿತ್ತು. ಮೊದಲ 11.5 ಓವರ್‌ಗಳಲ್ಲಿ ತಂಡ ಒಂದು ವಿಕೆಟಿಗೆ 68 ರನ್‌ ಗಳಿಸಿತ್ತು. ಈ ಹಂತದಲ್ಲಿ ತಂಡದ ಕುಸಿತ ಆರಂಭಗೊಂಡಿತ್ತು. ತಂಡ ಆಬಳಿಕ 51 ರನ್‌ ಪೇರಿಸುವಷ್ಟರಲ್ಲಿ ತಂಡ ಇನ್ನುಳಿದ ಐದು ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು ಅಲ್ಲದೇ ರನ್‌ ವೇಗಕ್ಕೂ ಕಡಿವಾಣ ಬಿತ್ತು.

ಸ್ಕಾಟ್ಲೆಂಡಿನ ಸ್ಪಿನ್ನರ್‌ ಸಾಸ್ಕಿಯಾ ಹಾರ್ಲೆ 13 ರನ್ನಿಗೆ ಮೂರು ವಿಕೆಟ್‌ ಕಿತ್ತು ಯಶಸ್ವಿ ಬೌಲರ್‌ ಎನಿಸಿಕೊಂಡರು.
ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ 7 ವಿಕೆಟಿಗೆ 119 (ಶೋಭನಾ ಮೊಸ್ತರಿ 36, ಶಾಥಿ ರಾಣಿ 29, ಸಾಸ್ಕಿಯಾ ಹಾರ್ಲೆ 13ಕ್ಕೆ 3); ಸ್ಕಾಟ್ಲೆಂಡ್‌ 7 ವಿಕೆಟಿಗೆ 103 (ಸಾರಾ ಬ್ರೈಸ್‌ 49 ಔಟಾಗದೆ, ರಿತು ಮೋನಿ 15ಕ್ಕೆ 2).

ಪಾಕ್‌ ವನಿತೆಯರಿಗೆ ಜಯ
ದಿನದ 2 ನೇ ಪಂದ್ಯದಲ್ಲಿ ಪಾಕಿಸ್ಥಾನ ವನಿತೆಯರು ಶ್ರೀಲಂಕಾ ವನಿತೆಯರನ್ನು 31 ರನ್ನುಗಳಿಂದ ಸೋಲಿಸಿದ್ದಾರೆ. ಪಾಕಿಸ್ಥಾನ ತಂಡವು 20 ಓವರ್‌ಗಳಲ್ಲಿ 116 ರನ್ನಿಗೆ ಆಲೌಟಾದರೆ ಶ್ರೀಲಂಕಾ ತಂಡವು 9 ವಿಕೆಟಿಗೆ 85 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಕಂಡಿತು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

kangana-2

Gandhi; ಕಂಗನಾ ಹೊಸ ವಿವಾದ: ದೇಶಕ್ಕೆ ತಂದೆ ಇರಲ್ಲ…

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

SBI

Chhattisgarh: ಎಸ್‌ಬಿಐ ನಕಲಿ ಶಾಖೆ, ವಂಚನೆ!

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ

Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ

BJP: ನನ್ನಂಥವನಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಋಣಿ: ಕಿಶೋರ್‌ ಕುಮಾರ್‌

BJP: ನನ್ನಂಥವನಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಋಣಿ: ಕಿಶೋರ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sa

ODI; ಐರ್ಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 139 ರನ್‌ ಜಯಭೇರಿ

1-tree

Junior World Shooting: ಖುಷಿಗೆ ಕಂಚು

1-frrr

Irani Cup:ಅಭಿಮನ್ಯು ಅಜೇಯ 151 ರನ್‌: 102 ಡಿಗ್ರಿ ಜ್ವರವಿದ್ದೂ ಶಾರ್ದೂಲ್‌ ಬ್ಯಾಟಿಂಗ್‌

Rohit-SHarma-(2)

Rohit Sharma;ವಿಶ್ವಕಪ್ ಗೆದ್ದ ನಂತರ ಮತ್ತೆ ಬದುಕಿದ ಅನುಭವ: ನಾಯಕ ಹೇಳಿದ್ದೇನು?

Money Laundering Case: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್‌ ಗೆ ಇ.ಡಿ ಸಮನ್ಸ್

Money Laundering Case: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್‌ ಗೆ ಇ.ಡಿ ಸಮನ್ಸ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-tggg

CJI; ಈಗಲೂ ನಾನೇ ಮುಖ್ಯಸ್ಥ: ವಕೀಲರಿಗೆ ಚಂದ್ರಚೂಡ್‌ ಕ್ಲಾಸ್‌

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

kangana-2

Gandhi; ಕಂಗನಾ ಹೊಸ ವಿವಾದ: ದೇಶಕ್ಕೆ ತಂದೆ ಇರಲ್ಲ…

1-jaya

Dubey ಸಮಿತಿ ಬಿಟ್ಟು ಬೊಮ್ಮಾಯಿ ಸ್ಥಾಯಿ ಸಮಿತಿಗೆ ಜಯಾ ಬಚ್ಚನ್‌

Maldives Muizzu

Maldives ಅಧ್ಯಕ್ಷ ಮುಯಿಜ್ಜು ಭಾರತ ಪ್ರವಾಸ ಅ.6ರಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.