ಅಜೇಯ ಭಾರತಕ್ಕೆ ಮೊದಲ ಫೈನಲ್ ನಿರೀಕ್ಷೆ
Team Udayavani, Mar 5, 2020, 7:00 AM IST
ಸಿಡ್ನಿ: ವನಿತಾ ಟಿ20 ವಿಶ್ವಕಪ್ ಕೂಟದ ಏಕೈಕ ಅಜೇಯ ತಂಡವಾಗಿರುವ ಭಾರತ ಮೊದಲ ಫೈನಲ್ ಪ್ರವೇಶದ ಭಾರೀ ನಿರೀಕ್ಷೆಯೊಂದಿಗೆ ಸೆಮಿಫೈನಲ್ ಕದನಕ್ಕೆ ಸಜ್ಜಾಗಿ ನಿಂತಿದೆ. ಗುರುವಾರ ಸಿಡ್ನಿಯಲ್ಲಿ ನಡೆಯಲಿರುವ ಮೊದಲ ಉಪಾಂತ್ಯದಲ್ಲಿ ಹರ್ಮನ್‌ಪ್ರೀತ್ ಪಡೆ ಪ್ರಬಲ ಇಂಗ್ಲೆಂಡ್ ಸವಾಲನ್ನು ಎದುರಿಸಲಿದೆ. ಇದು ಭಾರತ-ಇಂಗ್ಲೆಂಡ್ ತಂಡಗಳ ನಡುವಿನ ಸತತ 2ನೇ ವಿಶ್ವಕಪ್ ಸೆಮಿಫೈನಲ್ ಮುಖಾಮುಖೀ ಎಂಬುದು ವಿಶೇಷ.
ಇನ್ನೊಂದು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಹಾಗೂ ಆತಿಥೇಯ ತಂಡವಾಗಿರುವ ಆಸ್ಟ್ರೇಲಿಯ, “ಬಿ’ ವಿಭಾಗದ ಅಗ್ರಸ್ಥಾನಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಆದರೆ ಎರಡೂ ಪಂದ್ಯಗಳಿಗೆ ಮಳೆಯ ಆತಂಕ ಎದುರಾಗಿದೆ. ಹೀಗಾಗಿ ಪೂರ್ತಿ ಪಂದ್ಯ ನಡೆಯುವ ಬಗ್ಗೆ ಅನುಮಾನವಿದೆ.
ದಾಖಲೆ ಇಂಗ್ಲೆಂಡ್ ಪರ…
ಈ ಕೂಟದಲ್ಲಿ ಭಾರತ “ರೆಡ್ ಹಾಟ್ ಫಾರ್ಮ್’ ಹೊಂದಿರುವ ತಂಡ. ತನಗೆ ಎದುರಾದ ಯಾವ ತಂಡವನ್ನೂ ಭಾರತ ಸೋಲಿಸದೆ ಉಳಿದಿಲ್ಲ. ಆದರೆ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ದಾಖಲೆ ಉತ್ತಮವಾಗಿಲ್ಲ ಎಂಬುದೊಂದು ಹಿನ್ನಡೆ. ಇಂಗ್ಲೆಂಡ್ ವಿರುದ್ಧ ಆಡಿದ ಎಲ್ಲ 5 ಪಂದ್ಯಗಳಲ್ಲೂ ಭಾರತ ಸೋಲನುಭವಿಸಿದೆ. ಕೊನೆಯ ಸೋಲು ಕಳೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಎದುರಾಗಿತ್ತು. ಇದಕ್ಕೂ ಮೊದಲು 2009, 2012, 2014 ಮತ್ತು 2016ರ ಕೂಟಗಳಲ್ಲೂ ಭಾರತದ ವನಿತೆಯರು ಇಂಗ್ಲೆಂಡಿಗೆ ಶರಣಾ ಗಿದ್ದರು.
“ಕಳೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡಿಗೆ ಸೋತ ಬಳಿಕ ನಾವು ಸಂಘಟಿತವಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದೇವೆ. ಅದಕ್ಕೆ ಈ ಪಂದ್ಯಾವಳಿಯ ಲೀಗ್ ಸ್ಪರ್ಧೆಗಳೇ ಸಾಕ್ಷಿ. ಕೇವಲ ಒಬ್ಬಿಬ್ಬರು ಆಟಗಾರ್ತಿಯರನ್ನು ನಾವು ಅವಲಂಬಿಸಿಲ್ಲ. ಎಲ್ಲರೂ ತಂಡದ ಯಶಸ್ಸಿಗೆ ತಮ್ಮ ಕೊಡುಗೆಯನ್ನು ಸಲ್ಲಿಸುತ್ತಲೇ ಬಂದಿದ್ದಾರೆ’ ಎಂಬುದು ನಾಯಕಿ ಹರ್ಮನ್‌ಪ್ರೀತ್ ಕೌರ್ ಆತ್ಮವಿಶ್ವಾಸದ ಮಾತುಗಳು.
2018ರ ಕಳೆದ ಸೆಮಿಫೈನಲ್‌ನಲ್ಲಿ ಆಡಿದ 7 ಆಟಗಾರ್ತಿಯರು ಭಾರತದ ಈಗಿನ ತಂಡದಲ್ಲೂ ಇದ್ದಾರೆ. ವಿಶ್ವಕಪ್‌ಗ್ೂ ಮೊದಲು ನಡೆದ ತ್ರಿಕೋನ ಸರಣಿಯಲ್ಲಿ ಇಂಗ್ಲೆಂಡನ್ನು ಮಣಿಸಿದ ಸಾಧನೆ ಭಾರತದ್ದಾಗಿದೆ.
ಶಫಾಲಿ ಪ್ರಚಂಡ ಫಾರ್ಮ್
ಮೊದಲ ವಿಶ್ವಕಪ್ ನಾಕೌಟ್ ಪಂದ್ಯ ಆಡುತ್ತಿರುವ ಭಾರತದ ಯುವ ಆಟಗಾರ್ತಿಯರು ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ಇವರಲ್ಲಿ 16ರ ಹರೆಯದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಅವರಿಗೆ ಅಗ್ರಸ್ಥಾನ. ಪ್ರತಿಯೊಂದು ಪಂದ್ಯದಲ್ಲೂ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿರುವ ಶಫಾಲಿ, 4 ಇನ್ನಿಂಗ್ಸ್‌ಗಳಿಂದ 161 ರನ್ ಬಾರಿಸಿದ್ದಾರೆ. ಸರಾಸರಿ 40.25. ನೂತನ ಐಸಿಸಿ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ನೆಗೆದದ್ದು ಸೆಮಿಫೈನಲ್‌ನಲ್ಲಿ ಶಫಾಲಿಗೆ ಸ್ಫೂರ್ತಿ ಆಗಬಹುದು.
ವನ್‌ಡೌನ್ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಕೂಡ ಉತ್ತಮ ಲಯದಲ್ಲಿದ್ದಾರೆ. ಆದರೆ ಮತ್ತೋರ್ವ ಓಪನರ್ ಸ್ಮತಿ ಮಂಧನಾ, ನಾಯಕಿ ಹರ್ಮನ್‌ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ ಅವರಿಂದ ದೊಡ್ಡ ಕೊಡುಗೆ ಸಂದಾಯವಾಗಿಲ್ಲ. ಇಂಗ್ಲೆಂಡ್ ವಿರುದ್ಧ ಇವರು ಮಿಂಚಬೇಕಾದುದು ಅನಿವಾರ್ಯ. ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಲಭಿಸಿದರೆ ತಂಡದ ಮೊತ್ತವನ್ನು 150ರ ಗಡಿ ದಾಟಿಸಬೇಕಾದುದು ಭಾರತದ ಗುರಿ ಆಗಬೇಕು.
ಸ್ಪಿನ್, ಭಾರತದ ಅಸ್ತ್ರ
ಬ್ಯಾಟಿಂಗಿಗೂ ಮಿಗಿಲಾದ ಸ್ಪಿನ್ ಬೌಲಿಂಗ್ ಭಾರತದ ಪ್ರಮುಖ ಅಸ್ತ್ರವಾಗಿರುವುದು ಈ ಕೂಟದ ವಿಶೇಷ. ಲೆಗ್ ಸ್ಪಿನ್ನರ್ ಪೂನಂ ಯಾದವ್ 9 ವಿಕೆಟ್ ಉರುಳಿಸಿ ಟಾಪ್ ಫಾರ್ಮ್ ಪ್ರದರ್ಶಿಸಿದ್ದಾರೆ. ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮ ಕೂಡ ಮ್ಯಾಚ್ ವಿನ್ನರ್ ಆಗಿ ಮೂಡಿಬಂದಿದ್ದಾರೆ. ತಂಡ ಕಡಿಮೆ ಸ್ಕೋರ್ ದಾಖಲಿಸಿದರೂ ಇದನ್ನು ತಾವು ಉಳಿಸಿಕೊಡುತ್ತೇವೆ ಎಂಬ ಜೋಶ್‌ನಲ್ಲಿ ಇವರಿದ್ದಾರೆ. ವೇಗಿ ಶಿಖಾ ಪಾಂಡೆ 7 ಶಿಕಾರಿ ಮಾಡಿ ಭೀತಿ ಮೂಡಿಸಿದ್ದಾರೆ.
ಇಂಗ್ಲೆಂಡ್ ಬಲಿಷ್ಠ ತಂಡ
3 ಜಯ ಹಾಗೂ ಒಂದು ಸೋಲಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್ ಬಲಿಷ್ಠ ತಂಡ ಎಂಬುದರಲ್ಲಿ ಅನುಮಾನವಿಲ್ಲ. ನಥಾಲಿ ಶೀವರ್ 3 ಅರ್ಧ ಶತಕಗಳೊಂದಿಗೆ 202 ರನ್ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ನಾಯಕಿ ಹೀತರ್ ನೈಟ್ 193 ರನ್ ಪೇರಿಸಿದ್ದಾರೆ. ಇವರಿಬ್ಬರಿಗೆ ಕಡಿವಾಣ ಹಾಕಿದರೆ ಭಾರತಕ್ಕೆ ಮೇಲುಗೈ ಖಚಿತ.
ಹಾಗೆಯೇ ಎಡಗೈ ಸ್ಪಿನ್ನರ್ ಸೋಫಿ ಎಕ್Éಸ್ಟೋನ್ (8 ವಿಕೆಟ್), ಪೇಸರ್ ಅನ್ಯಾ ಶ್ರಬೊÕàಲ್ (7 ವಿಕೆಟ್) ದಾಳಿಯನ್ನು ನಿಭಾಯಿಸಿ ನಿಲ್ಲುವುದು ಮುಖ್ಯ.
ಸೆಮಿಫೈನಲ್ ಗಡಿ ದಾಟದ ಭಾರತ
ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ವನಿತೆಯರು ಈವರೆಗೆ ಸೆಮಿಫೈನಲ್ ಗಡಿ ದಾಟಿಲ್ಲ. 3 ಸಲ ಉಪಾಂತ್ಯ ತಲುಪಿದ್ದು, ಮೂರರಲ್ಲೂ ಸೋಲನುಭವಿಸಿದ್ದಾರೆ.
2009ರಲ್ಲಿ ಮೊದಲ ಸಲ ಸೆಮಿಫೈನಲ್ ತಲುಪಿದ ಭಾರತ, ನಾಟಿಂಗ್‌ಹ್ಯಾಮ್ ಮೇಲಾಟದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 52 ರನ್ ಸೋಲುಂಡಿತ್ತು. 2010ರ ಗ್ರಾಸ್ ಐಲೆಟ್ ಉಪಾಂತ್ಯದಲ್ಲಿ ಆಸ್ಟ್ರೇಲಿಯಕ್ಕೆ 7 ವಿಕೆಟ್‌ಗಳಿಂದ ಶರಣಾಗಿತ್ತು.
ಭಾರತ ಕಳೆದ 2018ರ ಕೂಟದಲ್ಲೂ ಸೆಮಿಫೈನಲ್ ಪ್ರವೇಶಿಸಿತ್ತು. ನಾರ್ತ್ ಸೌಂಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಪಡೆಗೆ ಎದುರಾದ ತಂಡ ಇಂಗ್ಲೆಂಡ್. ಸೋಲಿನ ಅಂತರ 8 ವಿಕೆಟ್. ಭಾರತ 19.3 ಓವರ್‌ಗಳಲ್ಲಿ 112ಕ್ಕೆ ಆಲೌಟಾದರೆ, ಇಂಗ್ಲೆಂಡ್ 17.1 ಓವರ್‌ಗಳಲ್ಲಿ ಎರಡೇ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು. ಹೀಗಾಗಿ ಭಾರತಕ್ಕೆ ಇದು ಸೇಡಿನ ಪಂದ್ಯವೂ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.