ವನಿತಾ ವಿಶ್ವಕಪ್: ಕಾಂಗರೂ ನಾಲ್ಕನೇ ಗೆಲುವಿನ ನಾಗಾಲೋಟ
Team Udayavani, Mar 15, 2022, 11:03 PM IST
ವೆಲ್ಲಿಂಗ್ಟನ್: ವನಿತಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯ ಸತತ 4ನೇ ಜಯ ದೊಂದಿಗೆ ಮುನ್ನುಗ್ಗಿದೆ. ಮಂಗಳವಾರದ ಮುಖಾಮುಖಿಯಲ್ಲಿ ಅದು ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್‌ಗೆ ಕಾಂಗರೂ ದಾಳಿಯನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ಅದು 45.5 ಓವರ್‌ಗಳಲ್ಲಿ 131 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿಯಿತು. ಜವಾಬಿತ್ತ ಆಸ್ಟ್ರೇಲಿಯ 30.2 ಓವರ್‌ಗಳಲ್ಲಿ 3 ವಿಕೆಟಿಗೆ 132 ರನ್ ಬಾರಿಸಿತು.
ಆಸ್ಟ್ರೇಲಿಯ ಈ ಕೂಟದ ನಾಲ್ಕೂ ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿದೆ. ಜತೆಗೆ ಸೆಮಿಫೈನಲ್ ಪ್ರವೇಶವೂ ಖಾತ್ರಿಯಾಗಿದೆ. ಇನ್ನೊಂದೆಡೆ ಸತತ 2 ಜಯದೊಂದಿಗೆ ಓಟ ಆರಂಭಿಸಿದ ವೆಸ್ಟ್ ಇಂಡೀಸ್ ಈಗ ಸತತ 2 ಸೋಲುಗಳ ಆಘಾತಕ್ಕೆ ಸಿಲುಕಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿದೆ.
ಪೆರ್ರಿ ಪ್ರಚಂಡ ದಾಳಿ
ಮಧ್ಯಮ ವೇಗಿ ಎಲ್ಲಿಸ್ ಪೆರ್ರಿ ಮತ್ತು ಆಫ್‌ಸ್ಪಿನ್ನರ್ ಆ್ಯಶ್ಲಿ ಗಾರ್ಡನರ್ ಕೆರಿಬಿಯನ್ ಸರದಿಯ ಮೇಲೆ ಘಾತಕವಾಗಿ ಎರಗಿದರು. ಇಬ್ಬರೂ 3 ವಿಕೆಟ್ ಉಡಾಯಿಸಿದರು. ಪೆರ್ರಿ ತಮ್ಮ ಮೊದಲ ಓವರ್‌ನಲ್ಲೇ ಹ್ಯಾಲಿ ಮ್ಯಾಥ್ಯೂಸ್ ಮತ್ತು ಕೈಸಿಯಾ ನೈಟ್ ಅವರನ್ನು ಸತತ ಎಸೆತಗಳಲ್ಲಿ ಕೆಡವಿ ವಿಂಡೀಸಿಗೆ ಬಲವಾದ ಆಘಾತವಿಕ್ಕಿದರು. ಇಬ್ಬರೂ ಖಾತೆ ತೆರೆದಿರಲಿಲ್ಲ.
ನಾಯಕಿ ಸ್ಟಫಾನಿ ಟೇಲರ್ ಅರ್ಧ ಶತಕವೊಂದೇ ವಿಂಡೀಸ್ ಇನ್ನಿಂಗ್ಸ್‌ನ ಗಮನಾರ್ಹ ಮೊತ್ತವಾಗಿತ್ತು. ಒಂದೆಡೆ ವಿಕೆಟ್‌ಗಳು ಉದುರುತ್ತಿದ್ದರೂ 91 ಎಸೆತ ಎದುರಿಸಿ ನಿಂತ ಟೇಲರ್ ಭರ್ತಿ 50 ರನ್ ಹೊಡೆದರು.
ಹೇನ್ಸ್ ಅಜೇಯ ಆಟ
ಆಸ್ಟ್ರೇಲಿತ ಕೂಡ 2 ವಿಕೆಟ್‌ಗಳನ್ನು 7 ರನ್ ಆಗುವುದರೊಳಗೆ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಎಲ್ಲಿಸ್ ಪೆರ್ರಿ (10) ಕೂಡ ಅಗ್ಗಕ್ಕೆ ಔಟಾದರು. ಆದರೆ ಓಪನರ್ ರಶೆಲ್ ಹೇನ್ಸ್ ಅಜೇಯ 83 ರನ್ ಬಾರಿಸಿ ತಂಡಕ್ಕೆ ಯಾವುದೇ ಆತಂಕ ಎದುರಾಗದಂತೆ ನೋಡಿಕೊಂಡರು (95 ಎಸೆತ, 9 ಬೌಂಡರಿ). ಇವರೊಂದಿಗೆ ಬೆತ್ ಮೂನಿ 28 ರನ್ ಮಾಡಿ ಅಜೇಯರಾಗಿ ಉಳಿದರು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-45.5 ಓವರ್‌ಗಳಲ್ಲಿ 131 (ಟೇಲರ್ 50, ಕ್ಯಾಂಬೆಲ್ 20, ಡಾಟಿನ್ 16, ಪೆರ್ರಿ 22ಕ್ಕೆ 3, ಗಾರ್ಡನರ್ 25ಕ್ಕೆ 3, ಜೊನಾಸೆನ್ 18ಕ್ಕೆ 2). ಆಸ್ಟ್ರೇಲಿಯ-30.2 ಓವರ್‌ಗಳಲ್ಲಿ 3 ವಿಕೆಟಿಗೆ 132 (ಹೇನ್ಸ್ ಔಟಾಗದೆ 83, ಮೂನಿ ಔಟಾಗದೆ 28, ಹೆನ್ರಿ 20ಕ್ಕೆ 1, ಮ್ಯಾಥ್ಯೂಸ್ 31ಕ್ಕೆ 1, ಕಾನೆಲ್ 32ಕ್ಕೆ 1). ಪಂದ್ಯಶ್ರೇಷ್ಠ: ಎಲ್ಲಿಸ್ ಪೆರ್ರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್ ಬುಮ್ರಾ ಹೆಸರು
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
ದಕ್ಷಿಣ ಭಾರತದ ಕುಸ್ತಿ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಧಾರವಾಡದ ಹಳ್ಳಿ ಪೈಲ್ವಾನ್
INDvAUS; ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದ ಹೆಡ್ ವಿಚಿತ್ರ ಸೆಲೆಬ್ರೇಶನ್: ಇದರ ಅರ್ಥವೇನು?
INDvsAUS; ಮಾನಸಿಕವಾಗಿ ಕಾಡುತ್ತಿದೆ..: ಮೆಲ್ಬೋರ್ನ್ ಸೋಲಿನ ಬಳಿಕ ನಾಯಕ ರೋಹಿತ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.