ಗೆಲುವಿನ ಹ್ಯಾಟ್ರಿಕ್; ಸೆಮಿಫೈನಲ್‌ಗೆ ಆಸೀಸ್
Team Udayavani, Nov 15, 2018, 6:00 AM IST
ಪ್ರೊವಿಡೆನ್ಸ್: ತನ್ನ ಬದ್ಧ ಎದುರಾಳಿ ನ್ಯೂಜಿಲ್ಯಾಂಡ್ ತಂಡವನ್ನು 33 ರನ್ನುಗಳಿಂದ ಮಣಿಸುವ ಮೂಲಕ ಆಸ್ಟ್ರೇಲಿಯ ತಂಡ ವನಿತಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್‌ಗೆ ಲಗ್ಗೆ ಇರಿಸಿದೆ.
ಬುಧವಾರ ನಡೆದ “ಬಿ’ ವಿಭಾಗದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 7 ವಿಕೆಟಿಗೆ 153 ರನ್ ಪೇರಿಸಿದರೆ, ನ್ಯೂಜಿಲ್ಯಾಂಡ್ 17.3 ಓವರ್‌ಗಳಲ್ಲಿ 120 ರನ್ನಿಗೆ ಸರ್ವಪತನ ಕಂಡಿತು. ಇದಕ್ಕೂ ಮುನ್ನ ಆಸೀಸ್ ವನಿತೆಯರು ಪಾಕಿಸ್ಥಾನ ಮತ್ತು ಐರ್ಲೆಂಡ್ ತಂಡಗಳಿಗೆ ಸೋಲುಣಿಸಿದ್ದರು.
ಮತ್ತೆ ಮಿಂಚಿದ ಹೀಲಿ
ಆಸ್ಟ್ರೇಲಿಯದ ಸವಾಲಿನ ಮೊತ್ತದಲ್ಲಿ ಆರಂಭಿಕ ಆಟಗಾರ್ತಿ ಅಲಿಸ್ಸಾ ಹೀಲಿ ಅವರ 53 ರನ್ನುಗಳ ಕೊಡುಗೆ ಮಹತ್ವದ್ದಾಗಿತ್ತು. ಬೆತ್ ಮೂನಿ (26) ಜತೆ ಅವರು ಮೊದಲ ವಿಕೆಟಿಗೆ 8.3 ಓವರ್‌ಗಳಿಂದ 71 ರನ್ ಪೇರಿಸಿ ಭದ್ರ ಅಡಿಪಾಯ ನಿರ್ಮಿಸಿದರು. 13ನೇ ಓವರ್ ತನಕ ಕ್ರೀಸಿನಲ್ಲಿ ನಿಂತ ಹೀಲಿ ಕೇವಲ 38 ಎಸೆತ ಹಾಗೂ 8 ಬೌಂಡರಿ ನೆರವಿನಿಂದ ತಮ್ಮ ಇನ್ನಿಂಗ್ಸ್ ಕಟ್ಟಿದರು. ಇದು ಈ ಪಂದ್ಯದ ಏಕೈಕ ಅರ್ಧ ಶತಕವಾಗಿತ್ತು. ಈ ಸಾಹಸಕ್ಕಾಗಿ ಹೀಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಆರಂಭಿಕರನ್ನು ಹೊರತುಪಡಿಸಿದರೆ ರಶೆಲ್ ಹೇನ್ಸ್ ಅಜೇಯ 29 ರನ್ ಮಾಡಿ ಗಮನ ಸೆಳೆದರು.
ಪ್ರಬಲ ತಂಡ ನ್ಯೂಜಿಲ್ಯಾಂಡ್ ಮಧ್ಯಮ ವೇಗಿ ಮೆಗಾನ್ ಶಟ್ ದಾಳಿಗೆ (12ಕ್ಕೆ 3) ನೆಲಕಚ್ಚಿತು. ಮತ್ತೋರ್ವ ಮೀಡಿಯಂ ಪೇಸ್ ಬೌಲರ್ ಡೆಲಿಸ್ಸಾ ಕಿಮ್ಮಿನ್ಸ್ ಮತ್ತು ಎಡಗೈ ಸ್ಪಿನ್ನರ್ ಸೋಫಿ ಮೊಲಿನಾಕ್ಸ್ ತಲಾ 2 ವಿಕೆಟ್ ಉರುಳಿಸಿದರು. ಕಾಂಗರೂ ಆಕ್ರಮಣವನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸಿದವರೆಂದರೆ ಓಪನರ್ ಸುಝಿ ಬೇಟ್ಸ್ (48) ಮತ್ತು ಕೀಪರ್ ಕ್ಯಾಟಿ ಮಾರ್ಟಿನ್ (24) ಮಾತ್ರ. ಎರಡೂ ಪಂದ್ಯಗಳನ್ನು ಸೋತಿರುವ ನ್ಯೂಜಿಲ್ಯಾಂಡ್ ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-20 ಓವರ್‌ಗಳಲ್ಲಿ 7 ವಿಕೆಟಿಗೆ 153 (ಹೀಲಿ 53, ಹೇನ್ಸ್ 29, ಮೂನಿ 26, ಕಾಸ್ಪರೆಕ್ 25ಕ್ಕೆ 3, ಡಿವೈನ್ 37ಕ್ಕೆ 2). ನ್ಯೂಜಿಲ್ಯಾಂಡ್-17.3 ಓವರ್‌ಗಳಲ್ಲಿ ಆಲೌಟ್ 120 (ಬೇಟ್ಸ್ 48, ಮಾರ್ಟಿನ್ 24, ಶಟ್ 12ಕ್ಕೆ 3, ಮೊಲಿನಾಕ್ಸ್ 20ಕ್ಕೆ 2, ಕಿಮ್ಮಿನ್ಸ್ 24ಕ್ಕೆ 2). ಪಂದ್ಯಶ್ರೇಷ್ಠ: ಅಲಿಸ್ಸಾ ಹೀಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharstra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.