Football: ವನಿತಾ ವಿಶ್ವಕಪ್ ಫುಟ್‌ಬಾಲ್ ಆಸ್ಟ್ರೇಲಿಯಕ್ಕೆ ಸೋಲು; ಇಂಗ್ಲೆಂಡ್ ಫೈನಲಿಗೆ
Team Udayavani, Aug 16, 2023, 11:04 PM IST
ಸಿಡ್ನಿ: ಕೂಟದ ಸಹ ಆತಿಥ್ಯ ವಹಿಸಿರುವ ಆಸ್ಟ್ರೇಲಿಯ ತಂಡವನ್ನು 3-1 ಗೋಲುಗಳಿಂದ ಸೋಲಿಸಿದ ಇಂಗ್ಲೆಂಡ್ ತಂಡವು ಇದೇ ಮೊದಲ ಬಾರಿ ವನಿತಾ ವಿಶ್ವಕಪ್ ಫುಟ್‌ಬಾಲ್ ಕೂಟದ ಫೈನಲ್ ಹಂತಕ್ಕೇರಿತು.
ರವಿವಾರ ಇಲ್ಲಿನ ಸ್ಟೇಡಿಯಂ ಆಸ್ಟ್ರೇಲಿಯ ದಲ್ಲಿ ನಡೆಯಲಿರುವ ಫೈನಲ್ ಹೋರಾಟದಲ್ಲಿ ಇಂಗ್ಲೆಂಡ್ ತಂಡವು ಸ್ಪೇನ್ ತಂಡವನ್ನು ಎದುರಿಸ ಲಿದೆ. ಈ ಎರಡು ತಂಡಗಳು ಮೊದಲ ಬಾರಿ ಫೈನಲಿನಲ್ಲಿ ಆಡುತ್ತಿದ್ದು ಗೆದ್ದ ತಂಡ ಚೊಚ್ಚಲ ಬಾರಿ ಪ್ರಶಸ್ತಿ ಗೆದ್ದ ಸಂಭ್ರಮ ಆಚರಿಸಲಿದೆ. ಈ ಹಿಂದಿನ ಎರಡು ವಿಶ್ವಕಪ್‌ಗ್ಳಲ್ಲಿ ಸೆಮಿಫೈನಲ್ ಹಂತದಲ್ಲಿ ಮುಗ್ಗರಿಸಿದ್ದ ಇಂಗ್ಲೆಂಡ್ ತಂಡವು ಈ ಬಾರಿ ವಿಶ್ವ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಇಂಗ್ಲೆಂಡ್ ಕಳೆದ ವರ್ಷ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತ್ತು.
ಫೈನಲ್ ಪಂದ್ಯದ ಮೊದಲು ಮೂರು ಮತ್ತು ನಾಲ್ಕನೇ ಸ್ಥಾನ ಕ್ಕಾಗಿ ಆಸ್ಟ್ರೇಲಿಯ ಮತ್ತು ಸ್ವೀಡನ್ ಹೋರಾಡ ಲಿದೆ. ಸ್ವೀಡನ್ ಮಂಗಳ ವಾರ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್‌ಗೆ 1-2 ಗೋಲುಗಳಿಂದ ಶರಣಾಗಿತ್ತು.
90 ನಿಮಿಷಗಳ ಈ ಹೋರಾಟ ದಲ್ಲಿ ಇಂಗ್ಲೆಂಡ್ ಬಲಿಷ್ಠ ತಂಡವಾಗಿ ಗೋಚರಿ ಸಿತ್ತು. 36ನೇ ನಿಮಿಷದಲ್ಲಿ ಎಲ್ಲಾ ಟೂನೆ ಅವರ ಅದ್ಭುತ ಗೋಲಿ ನಿಂದಾಗಿ ಇಂಗ್ಲೆಂಡ್ ಮೊದಲ ಅವಧಿಯಲ್ಲಿ ಮೇಲುಗೈ ಸಾಧಿ ಸಿತ್ತು. ಈ ಕೂಟದಲ್ಲಿ ಮೊದಲ ಪಂದ್ಯ ವನ್ನಾಡಿದ ಆಸ್ಟ್ರೇಲಿಯದ ಸೂಪರ್ ತಾರೆ ಸ್ಯಾಮ್ ಕೆರ್ರ 63ನೇ ನಿಮಿಷದಲ್ಲಿ ಸಮಬಲ ಸ್ಥಾಪಿಸಿದಾಗ ನೆರೆದ 75 ಸಾವಿರದಷ್ಟು ಪ್ರೇಕ್ಷಕರ ಸಂಭ್ರಮ ಮುಗಿಲುಮುಟ್ಟಿತ್ತು.
ತವರಿನಲ್ಲಿಯೇ ಈ ಹೋರಾಟ ನಡೆ ಯುತ್ತಿರುವ ಕಾರಣ ಆಸ್ಟ್ರೇ ಲಿಯಕ್ಕೆ ಅಭಿಮಾನಿಗಳ ಬೆಂಬಲ ಬಹಳಷ್ಟು ಇತ್ತು. ಆದರೂ ಇಂಗ್ಲೆಂಡ್ ವನಿತೆಯರ ಆಕ್ರಮಣಕಾರಿ ಆಟದ ಮುಂದೆ ಆಸ್ಟೇಲಿಯ ಕೊನೆಗೂ ಶರ ಣಾಯಿತು. ಲಾರೆನ್ ಹೆಂಪ್ 71ನೇ ನಿಮಿಷದಲ್ಲಿ ಗೋಲನ್ನು ಹೊಡೆದು ಇಂಗ್ಲೆಂಡಿಗೆ ಮತ್ತೆ ಮುನ್ನಡೆ ಒದಗಿ ಸಿದರು. ಕೊನೆ ಹಂತದಲ್ಲಿ ಅಲೆಸ್ಸಿಯಾ ರುಸೊ ಇನ್ನೊಂದು ಗೋಲು ಹೊಡೆದು ಮುನ್ನಡೆಯನ್ನು 3-1ಕ್ಕೇರಿಸಿದರು.
ನಂಬಲಿಕ್ಕೆ ಆಗುತ್ತಿಲ್ಲ
ಇಂತಹ ದೊಡ್ಡ ವಿಷಯವನ್ನು ನಾವು ಯಾವಾಗಲೂ ಬಯಸಿದ್ದೆವು. ಎರಡು ಬಾರಿ ಭಾರೀ ನಿರಾಶೆಯ ಬಳಿಕ ವಿಶ್ವಕಪ್ ಕೂಟದ ಫೈನಲ್ ಹಂತಕ್ಕೇರಿರುವುದು ಬಹಳಷ್ಟು ಖುಷಿ ನೀಡಿದೆ. ನಿಜವಾಗಿ ಹೇಳುವುದಾದರೆ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಇಂಗ್ಲೆಂಡಿನ ಫುಲ್ ಬ್ಯಾಕ್ ಆಟಗಾರ್ತಿ ಲೂಸಿ ಬ್ರೂನ್j ಹೇಳಿದ್ದಾರೆ.
ಫೈನಲಿಗೇರುವ ಬಗ್ಗೆ ನಾವು ಕನಸು ಕಂಡಿದ್ದೆವು. ನಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇದ್ದ ಕಾರಣ ನಮ್ಮೆಲ್ಲ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಫೈನಲ್ ಪಂದ್ಯ ಮುಗಿಯುವವರಗೆ ಇಲ್ಲಿ ನಿಲ್ಲಲು ವ್ಯವಸ್ಥೆ ಮಾಡಿದ್ದಾರೆ ಎಂದವರು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.