ವನಿತಾ ವಿಶ್ವಕಪ್ ಹಾಕಿ: ಭಾರತಕ್ಕೆ ಮೊದಲ ಗೆಲುವು
ಇಂದು 9-12ನೇ ಸ್ಥಾನದ ಸ್ಪರ್ಧೆ; ಜಪಾನ್ ಎದುರಾಳಿ
Team Udayavani, Jul 13, 2022, 12:02 AM IST
ಟೆರಸ್ಸಾ (ಸ್ಪೇನ್): ವಿಶ್ವಕಪ್ ಹಾಕಿ ಪದಕ ಸ್ಪರ್ಧೆಯಿಂದ ಹೊರಬಿದ್ದ ಬಳಿಕ ಭಾರತದ ವನಿತೆಯರು ಕೂಟದ ಮೊದಲ ಗೆಲುವು ದಾಖಲಿಸಿದ್ದಾರೆ. ಸೋಮವಾರ ರಾತ್ರಿ ನಡೆದ “ಕ್ಲಾಸಿಫಿಕೇಶನ್ ಮ್ಯಾಚ್’ನಲ್ಲಿ (9ರಿಂದ 16ನೇ ಸ್ಥಾನ) ಕೆನಡಾ ತಂಡವನ್ನು ಶೂಟೌಟ್‌ನಲ್ಲಿ 3-2 ಗೋಲುಗಳಿಂದ ಮಣಿಸಿದರು.
ಪೂರ್ಣ ಅವಧಿಯ ವೇಳೆ ಪಂದ್ಯ 1-1ರಿಂದ ಸಮನಾಗಿತ್ತು.ಭಾರತ ತಂಡವಿನ್ನು ಬುಧವಾರ 9ರಿಂದ 12ನೇ ಸ್ಥಾನದ ಪಂದ್ಯಕ್ಕಾಗಿ ಜಪಾನ್ ವಿರುದ್ಧ ಸ್ಪರ್ಧಿಸಲಿದೆ.
ಮ್ಯಾಡಿಲೈನ್ ಸೇಕೊ 11ನೇ ನಿಮಿಷದಲ್ಲೇ ಗೋಲು ಬಾರಿಸಿ ಕೆನಡಾಕ್ಕೆ ಮುನ್ನಡೆ ಒದಗಿಸಿದರು. 58ನೇ ನಿಮಿಷದ ತನಕವೂ ಕೆನಡಾ ಈ ಮೇಲುಗೈಯೊಂದಿಗೆ ಪಂದ್ಯವನ್ನು ಗೆಲ್ಲುವ ಸಾಧ್ಯತೆಯನ್ನು ತೆರೆದಿರಿಸಿತ್ತು. ಆಗ ಸಲೀಮಾ ಟೇಟೆ ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು.
ಶೂಟೌಟ್‌ನಲ್ಲಿ ನಾಯಕಿಯೂ ಆಗಿರುವ ಗೋಲ್‌ಕೀಪರ್ ಸವಿತಾ ಪೂನಿಯ ಪಾತ್ರ ಮಹತ್ವದ್ದಾಗಿತ್ತು. ಅವರು 6 ಗೋಲುಗಳನ್ನು ತಡೆದು ಭಾರತಕ್ಕೆ ಮೇಲುಗೈ ಒದಗಿಸಿದರು. ನವನೀತ್ ಕೌರ್, ಸೋನಿಕಾ, ನೇಹಾ ಗೋಲು ಬಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.