ವಿಶ್ವ ಅಥ್ಲೆಟಿಕ್ಸ್ ದಿನ;ದೇಶದ ಕ್ರೀಡಾಪಟುಗಳಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಗೌರವ
Team Udayavani, May 15, 2024, 2:22 PM IST
ಬೆಂಗಳೂರು: ಮಾನವ ಪ್ರಯತ್ನದ ವಿಶಾಲವಾದ ಲ್ಯಾಂಡ್ ಸ್ಕೇಪ್ ನೊಳಗೆ ಅಥ್ಲೆಟಿಕ್ಸ್ ಕ್ಷೇತ್ರವಿದೆ. ಇಲ್ಲಿ ಸಾಮಾನ್ಯ ವ್ಯಕ್ತಿಗಳು ತಮ್ಮೆಲ್ಲಾ ಲೌಕಿಕ ನಿರ್ಬಂಧಗಳನ್ನು ಮೀರಿ ಅಸಾಧಾರಣ ಸಾಧನೆಗಳನ್ನು ಮಾಡುವ ಮೂಲಕ ಚಾಂಪಿಯನ್ ಗಳಾಗುತ್ತಾರೆ. ಅಥ್ಲೆಟಿಕ್ಸ್ ಕೇವಲ ಒಂದು ಕ್ರೀಡೆಗಳ ಸಂಗ್ರಹವಾಗಲೀ ಅಥವಾ ಘಟನೆಗಳ ಸರಣಿಯಲ್ಲ. ಇದು ಮಾನವ ರೂಪದಲ್ಲಿನ ಅಂತರ್ಗತವಾಗಿರುವ ಮಿತಿಯಿಲ್ಲದ ಸಾಮರ್ಥ್ಯಕ್ಕೆ ಒಂದು ಸಾಕ್ಷಿಯಾಗಿದೆ.
ಇದು ಗಾಳಿಯ ವಿರುದ್ಧ ಓಡುವ ಓಟಗಾರ, ಗುರುತ್ವಾಕರ್ಷಣೆಯ ಸೆಳೆತವನ್ನು ಸಮರ್ಥವಾಗಿ ಎದುರಿಸುವ ಜಿಗಿತಗಾರ ಅಥವಾ ಜಂಪರ್, ಎಲ್ಲಾ ಇತಿಮಿತಿಗಳನ್ನು ಮೀರಿ ಜಯಿಸುವ ಮ್ಯಾರಥಾನ್ ಓಟಗಾರ. ಹೀಗೆ ಪ್ರತಿಯೊಬ್ಬ ಅಥ್ಲೀಟ್ ತನ್ನ ಸಮರ್ಪಣೆ ಮತ್ತು ಶಿಸ್ತಿನ ಜೀವಂತ ಸಾಕಾರವಾಗಿದ್ದುಕೊಂಡು ಅಸಾಧ್ಯವಾದುದನ್ನು ಸಾಧ್ಯ ಎಂದು ತೋರಿಸಿಕೊಡುವಂತಹ ಛಲಗಾರನಾಗಿರುತ್ತಾನೆ. ಸ್ಪರ್ಧೆ ಮತ್ತು ಪದಕಗಳ ಜಗತ್ತನ್ನು ಮೀರಿ ಅಥ್ಲೆಟಿಕ್ಸ್ ಸ್ವಯಂ ಶೋಧನೆ ಮತ್ತು ಸ್ವಯಂ ಪಾಂಡಿತ್ಯದ ಪ್ರಯಾಣವಾಗಿದೆ.
ಈ ಬಾರಿಯ ವಿಶ್ವ ಅಥ್ಲೆಟಿಕ್ಸ್ ದಿನದಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ತನ್ನ ಪುಟಗಳಲ್ಲಿ ಜಗತ್ತಿನ ಕ್ರೀಡಾ ಇತಿಹಾಸದಲ್ಲಿ ಅಮೋಘ ಸಾಧನೆ ಮಾಡಿದ ಕ್ರೀಡಾಪಟುಗಳ ಮಾಹಿತಿಯನ್ನು ಪ್ರಕಟಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಆರಂಭವಾದ ದಿನದಿಂದ ಮಾನವನ ಆಕಾಂಕ್ಷೆ ಮತ್ತು ಸಾಧನೆಯ ದಾರಿದೀಪವಾಗಿದೆ. ಅಪ್ರತಿಮ ಸಮರ್ಪಣೆ ಮತ್ತು ಸಾಧನೆಯ ಹಾದಿಯನ್ನು ಸೆರೆಹಿಡಿಯುತ್ತಾ ಬಂದಿದೆ. ಅದರ ಪುಟಗಳಲ್ಲಿ ವೈವಿಧ್ಯಮಯ ಅಥ್ಲೆಟಿಕ್ ಡೊಮೇನ್ ಗಳಲ್ಲಿ ಪ್ರತಿಭೆಯ ಶ್ರೀಮಂತ ಇತಿಹಾಸವನ್ನು ಪ್ರದರ್ಶಿಸುವ ಗಮನಾರ್ಹ ಸಾಹಸಗಳ ಕಥೆಗಳಿವೆ.
ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಕ್ರೀಡಾ ಸಾಧಕರ ಮಾಹಿತಿಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನಮೂದಿಸಲಾಗಿದೆ. ಈ ಪೈಕಿ ಕೆಲವು ಸಾಧಕರ ಮಾಹಿತಿ ಇಲ್ಲಿದೆ:
*2023 ರಲ್ಲಿ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರನೆಂಬ ಹೆಜಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಜಾವೆಲಿನ್ ಥ್ರೋ ವಿಭಾಗದ ಫೈನಲ್ ನಲ್ಲಿ 88.17 ಮೀಟರ್ ಎಸೆದು ಮೊದಲಿಗರಾಗಿ ಹೊರಹೊಮ್ಮಿದರು.
*ಜ್ಯೋತಿ ಯರ್ರಾಜಿ 2023 ರ ಜುಲೈನಲ್ಲಿ ಬ್ಯಾಂಕಾಕ್ ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮಹಿಳಾ 100 ಮೀಟರ್ ಹರ್ಡಲ್ಸ್ ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದುಕೊಟ್ಟು ಕೀರ್ತಿ ಮೆರೆದಿದ್ದರು. ಈ ದೂರವನ್ನು ಕೇವಲ 13.09 ಸೆಕೆಂಡುಗಳಲ್ಲಿ ಓಡಿ ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದರು.
*ದುತಿ ಚಂದ್ ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಎಲ್ಲಾ ಅಡೆತಡೆಗಳನ್ನು ಮೀರಿ ಪ್ರಸ್ತುತ ಮಹಿಳಾ 100 ಮೀಟರ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ದುತಿ ಚಂದ್ 2019 ರಲ್ಲಿ ಯುನಿವರ್ಸಿಯಾಡ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಓಟಗಾರಳಾಗಿದ್ದಾರೆ. LGBTQ+ ಕ್ರೀಡಾಪಟುವಾಗಿ ಅವರ ಧೈರ್ಯದ ನಿಲುವು ಪಾಲ್ಗೊಳ್ಳುವಿಕೆ ಮತ್ತು ಸಾಧನೆಗೆ ಒಂದು ಉತ್ತಮ ಉದಾಹರಣೆಯಾಗಿದ್ದಾರೆ.
*ರಮಾಬಾಯಿ. ಇವರು 105 ವರ್ಷದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಅತ್ಯಂತ ಹಿರಿಯ ಚಿನ್ನದ ಪದಕ ವಿಜೇತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಛಲ ಮತ್ತು ಬದ್ಧತೆ ಇತರರಿಗೆ ಮಾದರಿಯಾಗಿದೆ. ಗುಜರಾತಿನ ವಡೋದರದಲ್ಲಿ ನಡೆದ ನ್ಯಾಷನಲ್ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿನ 100 ಮೀಟರ್ ಸ್ಪರ್ಧೆಯಲ್ಲಿ ಮೊದಲಿಗರಾಗಿ ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ಸಾಧನೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
*ಅಂಜು ಬಾಬಿ ಜಾರ್ಜ್. ಇವರು ಇಂದಿಗೂ ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದ ಐಕಾನ್ ಆಗಿದ್ದಾರೆ. IAAF ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ಗೆದ್ದ ಏಕೈಕ ಭಾರತೀಯ ಕ್ರೀಡಾಪಟುವಾಗಿದ್ದು, ಇಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಪ್ರೇರಕರಾಗಿದ್ದಾರೆ. ಲಾಂಗ್ ಜಂಪ್ ನಲ್ಲಿ ಅವರು ತೋರಿದ ಅಸಾಧಾರಣ ಸಾಧನೆಯು ಅಥ್ಲೆಟಿಕ್ಸ್ ಸಮುದಾಯದಲ್ಲಿ ಅವರನ್ನು ರೋಲ್ ಮಾಡೆಲ್ ಎಂದು ಪರಿಗಣಿಸುವಂತೆ ಮಾಡಿದೆ. ಅವರ ಈ ಸಾಧನೆಯನ್ನು ಪರಿಗಣಿಸಿ 2014 ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನ ಮಲಯಾಳಂ ಆವೃತ್ತಿಯ `ಮಹಿಳಾ ಸಬಲೀಕರಣ’ ವಿಷಯದ ಬಿಡುಗಡೆ ಸಂದರ್ಭದಲ್ಲಿ ಅವರನ್ನು ಗೌರವಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.