ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸಿಂಧು, ಪ್ರಣೀತ್ ಗೆಲುವು
Team Udayavani, Aug 23, 2017, 8:10 AM IST
ಗ್ಲಾಸ್ಕೊ: ಒಲಿಂಪಿಕ್ ಬೆಳ್ಳಿ ತಾರೆ ಪಿ.ವಿ. ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಸಾಧಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಸಿಂಗಾಪುರ್ ಓಪನ್ ಚಾಂಪಿಯನ್ ಬಿ. ಸಾಯಿ ಪ್ರಣೀತ್, ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ-ಎನ್. ಸಿಕ್ಕಿ ರೆಡ್ಡಿ ಕೂಡ ಗೆಲುವಿನ ಆರಂಭ ಪಡೆದಿದ್ದಾರೆ.
2013 ಹಾಗೂ 2014ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸಿಂಧು ಕೊರಿಯಾದ ಕಿಮ್ ಹೊÂ ಮಿನ್ ಅವರನ್ನು 21-16, 21-14 ಅಂತರದಿಂದ ಪರಾಭವಗೊಳಿಸಿದರು. ಇದು 5 ಪಂದ್ಯಗಳಲ್ಲಿ ಕಿಮ್ ವಿರುದ್ಧ ಸಿಂಧು ಸಾಧಿಸಿದ 4ನೇ ಜಯ. ಮೊದಲ ಸುತ್ತಿನಲ್ಲಿ ಸಿಂಧು ಬೈ ಪಡೆದಿದ್ದರು.
ಬಿ. ಸಾಯಿ ಪ್ರಣೀತ್ ಆರಂಭಿಕ ಹಿನ್ನಡೆಯ ಬಳಿಕ ಅಮೋಘ ರೀತಿಯಲ್ಲಿ ಚೇತರಿಸಿಕೊಂಡು ಹಾಂಕಾಂಗ್‌ನ ವೀ ನಾನ್ ಅವರನ್ನು 21-18, 21-17ರಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಇವರ ಮುಂದಿನ ಎದುರಾಳಿ ಇಂಡೋನೇಶ್ಯದ ಅಂಟೋನಿ ಸಿನಿಸುಕ ಗಿಂಟಿಂಗ್.
ಭಾರತದ ಅಗ್ರಮಾನ ಮಿಶ್ರ ಡಬಲ್ಸ್ ಆಟಗಾರರಾದ ಪ್ರಣವ್ ಜೆರ್ರಿ-ಎನ್. ಸಿಕ್ಕಿ ರೆಡ್ಡಿ ಇಂಡೋ-ಮಲೇಶ್ಯನ್ ಜೋಡಿಯಾದ ಪ್ರಜಕ್ತಾ ಸಾವಂತ್-ಯೋಗೇಂದ್ರ ಕೃಷ್ಣನ್ ವಿರುದ್ಧ 21-12, 21-19 ಅಂತರದ ಜಯ ಸಾಧಿಸಿದರು. ಆದರೆ ಮಿಶ್ರ ಡಬಲ್ಸ್‌ನ ಇತರ ಪಂದ್ಯಗಳಲ್ಲಿ ಭಾರತದ ಬಿ. ಸುಮೀತ್ ರೆಡ್ಡಿ-ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಮನೀಷಾ ಕೆ. ಪರಾಭವಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Ranji match: ಉತ್ತರಪ್ರದೇಶ ಬೃಹತ್ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.