ವಿಶ್ವ ಬ್ಯಾಡ್ಮಿಂಟನ್ :ಭಾರತಕ್ಕೆ ಸಿಂಧು, ಶ್ರೀಕಾಂತ್ ಸಾರಥ್ಯ
Team Udayavani, Jul 30, 2018, 2:51 PM IST
ಜಿಂಗ್ (ಚೀನ): ಇದುವರೆಗೆ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆಲ್ಲಲು ವಿಫಲವಾಗಿರುವ ಭಾರತ ಸೋಮವಾರದಿಂದ ಚೀನದ ನಾಂಜಿಂಗ್ನಲ್ಲಿ ಆರಂಭವಾಗಲಿರುವ ವಿಶ್ವ ಕೂಟದಲ್ಲಿ ಸ್ವರ್ಣ ಪದಕದ ಗುರಿಯೊಂದಿಗೆ ಕಣಕ್ಕೆ ಇಳಿಯಲಿದೆ. ಭಾರತವನ್ನು ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ಪುರುಷರ ಸಿಂಗಲ್ಸ್ ಆಟಗಾರ ಕೆ. ಶ್ರೀಕಾಂತ್ ಮುನ್ನಡೆಸಲಿದ್ದಾರೆ.
ಸಿಂಧುವಿನತ್ತ ಎಲ್ಲರ ಚಿತ್ತ ವಿಶ್ವ ಕೂಟದಲ್ಲಿ ಭಾರತಕ್ಕೆ ಗರಿಷ್ಠ ಪದಕ ತಂದಿತ್ತ ಹೆಗ್ಗಳಿಕೆ ಪಿ.ವಿ. ಸಿಂಧು ಅವರದು. ಕಳೆದ ಸಲ ಗ್ಲಾಸೊYàದಲ್ಲಿ ನಡೆದ ಕೂಟದಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು.
ಫೈನಲ್ನಲ್ಲಿ ಜಪಾನ್ನ ನಜೋಮಿ ಒಕುಹರಾ ವಿರುದ್ಧ ಸೋಲು ಕಂಡಿದ್ದರು. ಇದೇ ಕೂಟದಲ್ಲಿ ಭಾರತದ ಮತ್ತೋರ್ವ ಆಟಗಾರ್ತಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದರು. ಇದಕ್ಕೂ ಮೊದಲು 2015ರ ಫೈನಲ್ನಲ್ಲಿ ಸೈನಾ ಸ್ಪೇನ್ನ ಮರಿನ್ ವಿರುದ್ಧ ಸೋತು ಬೆಳ್ಳಿ ಪದಕ ಗೆದ್ದಿದ್ದರು. 2 ಕಂಚು, 1 ಬೆಳ್ಳಿ ಸಹಿತ ವಿಶ್ವ ಚಾಂಪಿಯನ್ಶಿಪ್ನಲ್ಲಿ ಒಟ್ಟು 3 ಪದಕ ಗೆದ್ದಿರುವ ಸಿಂಧು ಈ ಕೂಟದ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಶ್ರೀಕಾಂತ್ ಮೇಲೆ ನಿರೀಕ್ಷೆ
ಪುರುಷರ ಸಿಂಗಲ್ಸ್ನಲ್ಲಿ ಈವರೆಗೆ ಭಾರತ ಚಿನ್ನ ಅಥವಾ ಬೆಳ್ಳಿ ಪದಕ ಗೆದ್ದಿಲ್ಲ. 1983ರಲ್ಲಿ ಡೆನ್ಮಾರ್ಕ್ ನಲ್ಲಿ ನಡೆದ ಕೂಟದಲ್ಲಿ ಪ್ರಕಾಶ್ ಪಡುಕೋಣೆ ಕಂಚಿನ ಪದಕ ಗೆದ್ದಿದ್ದರು. ಅದೇ ಕೊನೆ, ಬಳಿಕ ಯಾವುದೇ ಸ್ಪರ್ಧಿಗಳಿಗೂ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಕೆ. ಶ್ರೀಕಾಂತ್ ಈ ಸಲ ನಿರೀಕ್ಷೆ ಹುಟ್ಟಿಸಿದ್ದು, 35 ವರ್ಷಗಳ ಬಳಿಕ ದೇಶಕ್ಕೆ ಪದಕ ತರಬಲ್ಲರೇ ಎನ್ನುವುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Malpe ಬೀಚ್ ಸ್ವಚ್ಛತೆ: 3 ದಿನದಲ್ಲಿ 26 ಲೋಡ್ ಕಸ ಸಂಗ್ರಹ
Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.