ವಿಶ್ವ ಬ್ಯಾಡ್ಮಿಂಟನ್: ಶ್ರೀಕಾಂತ್ಗೆ ಸುಲಭ ಗೆಲುವು
Team Udayavani, Aug 22, 2017, 7:15 AM IST
ಹೊಸದಿಲ್ಲಿ: ಉನ್ನತ ರ್ಯಾಂಕಿನ ಭಾರತದ ಶಟ್ಲರ್ ಕಿದಂಬಿ ಶ್ರೀಕಾಂತ್ ಅವರು ಸುಲಭ ಗೆಲುವಿನೊಂದಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ತನ್ನ ಅಭಿಯಾನ ಆರಂಭಿಸಿದ್ದಾರೆ.
ಗ್ಲಾಸ್ಕೋದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ ರಶ್ಯದ ಶ್ರೇಯಾಂಕರಹಿತ ಆಟಗಾರ ಸಗೈì ಸಿರಾಂಟ್ ಅವರನ್ನು 21-13, 21-12 ಗೇಮ್ಗಳಿಂದ ಉರುಳಿಸಿದರು. ಕೇವಲ 28 ನಿಮಿಷಗಳಲ್ಲಿ ಜಯಭೇರಿ ಬಾರಿಸಿದ ಅವರು ದ್ವಿತೀಯ ಸುತ್ತಿನಲ್ಲಿ ಫ್ರಾನ್ಸ್ನ ಲುಕಾಸ್ ಕಾರ್ವೀ ಅವರನ್ನು ಎದುರಿಸಲಿದ್ದಾರೆ.
ಉತ್ತಮ ಫಾರ್ಮ್ನಲ್ಲಿರುವ ಶ್ರೀಕಾಂತ್ ಭರ್ಜರಿಯಾಗಿ ಆಟ ಆರಂಭಿಸಿ 6-1 ಮುನ್ನಡೆ ಸಾಧಿಸಿದ್ದರು. 11-6, 15-7ರಿಂದ ಮುನ್ನಡೆ ಗಳಿಸುತ್ತ ಹೋದ ಅವರು 21-13 ರಿಂದ ಮೊದಲ ಗೇಮ್ ಗೆದ್ದರು. ದ್ವಿತೀಯ ಗೇಮ್ನ ಆರಂಭದಲ್ಲಿ ಇಬ್ಬರೂ ಅಂಕ ಗಳಿಸಲು ಪ್ರಯತ್ನ ಪಟ್ಟರು.
ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಭಾರತದ ಪ್ರಜಕ್ತ ಸಾವಂತ್ ಮತ್ತು ಮಲೇಶ್ಯದ ಯೋಗೇಂದ್ರನ್ ಕೃಷ್ಣನ್ ಅವರು ಚೈನೀಸ್ ತೈಪೆಯ ಕಾಯಿ ಹಾಸಿನ್ ಮತ್ತು ಚಿಂಗ್ ಯೋ ಅವರನ್ನು ಮೂರು ಗೇಮ್ಗಳ ಕಠಿನ ಹೋರಾಟದಲ್ಲಿ 21-15, 13-21, 21-18 ಅಂತರದಿಂದ ಸೋಲಿಸಿದರು. ಪುರುಷರ ಮಿಕ್ಸೆಡ್ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಕೆ. ಮನೀಷಾ ಅವರು ಹಾಂಕಾಂಗ್ನ ಟಾಮ್ ಹೆಯಿ ಮತ್ತು ಎನ್ಜಿ ಯಾವು ಅವರನ್ನ 24-22, 21-17 ಗೇಮ್ಗಳಿಂದ ಉರುಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.