ವಿಶ್ವ ಬಾಕ್ಸಿಂಗ್ ಕೂಟಕ್ಕೆ ತೆರಳಿದ ಭಾರತ
Team Udayavani, Oct 21, 2021, 5:52 AM IST
ಹೊಸದಿಲ್ಲಿ: ಬೆಲ್ಗ್ರೇಡ್ ನಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಬುಧವಾರ ಪ್ರಯಾಣ ಬೆಳೆಸಿತು.
ಏಶ್ಯನ್ ಕೂಟದ ಪದಕ ವಿಜೇತರಾದ ದೀಪಕ್ ಕುಮಾರ್ (51 ಕೆಜಿ), ಶಿವ ಥಾಪ (63.5 ಕೆಜಿ), ಸಂಜೀತ್ (92 ಕೆಜಿ) ಮೊದ ಲಾದ ಭರವಸೆಯ ಬಾಕ್ಸರ್ ಈ ತಂಡದಲ್ಲಿದ್ದಾರೆ.
ಅ. 24ರಂದು ಸ್ಪರ್ಧೆ ಆರಂಭ ವಾಗಲಿದೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಭಾರತಕ್ಕೆ ವಿಶ್ವ ಚಾಂಪಿಯನ್‌ಶಿಪ್ ಪ್ರತಿಷ್ಠೆಯ ಸ್ಪರ್ಧೆ ಯಾಗಿದೆ.
ಕಳೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಅಮಿತ್ ಪಂಘಲ್ (51 ಕೆಜಿ) ಈ ಕೂಟದಲ್ಲಿ ಭಾಗವಹಿಸುತ್ತಿಲ್ಲ. ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳದ ಕಾರಣ ಅವರಿಗೆ ಸ್ಥಾನ ಲಭಿಸಲಿಲ್ಲ.
ಇದನ್ನೂ ಓದಿ:“ಉತ್ತರ’ದಲ್ಲಿ ಪ್ರವಾಹ ಪ್ರಯಾಸ : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ
ಕೂಟಲ್ಲಿ 105 ದೇಶಗಳ 600ರಷ್ಟು ಬಾಕ್ಸರ್‌ಗಳು ಸ್ಪರ್ಧಿಸಲಿದ್ದಾರೆ. ಚಿನ್ನದ ಪದಕ ಗೆದ್ದವರಿಗೆ ಒಂದು ಲಕ್ಷ ಡಾಲರ್ ಬಹುಮಾನ ಲಭಿಸಲಿದೆ. ಹಾಗೆಯೇ ಬೆಳ್ಳಿ ವಿಜೇತರಿಗೆ 50 ಸಾವಿರ ಡಾಲರ್, ಕಂಚು ಗೆದ್ದವರಿಗೆ 25 ಸಾವಿರ ಡಾಲರ್ ಬಹುಮಾನ ನೀಡಲಾಗುವುದು.
ಭಾರತ ತಂಡ
ಗೋವಿಂದ್ ಸಹಾನಿ (48 ಕೆಜಿ), ದೀಪಕ್ ಕುಮಾರ್ (51 ಕೆಜಿ), ಆಕಾಶ್ (54 ಕೆಜಿ), ರೋಹಿತ್ ಮೋರ್ (57 ಕೆಜಿ), ವರಿಂದರ್ ಸಿಂಗ್ (60 ಕೆಜಿ), ಶಿವ ಥಾಪ (63.5 ಕೆಜಿ), ಆಕಾಶ್ (67 ಕೆಜಿ), ನಿಶಾಂತ್ ದೇವ್ (71 ಕೆಜಿ), ಸುಮಿತ್ (75 ಕೆಜಿ), ಸಚಿನ್ ಕುಮಾರ್ (80 ಕೆಜಿ), ಲಕ್ಷ್ಯ (86 ಕೆಜಿ), ಸಂಜೀತ್ (92 ಕೆಜಿ) ಮತ್ತು ನರೇಂದರ್ (+92 ಕೆಜಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.